ನಿಶ್ಚಿತಾರ್ಥ ಮಾಡಿಕೊಂಡ ಐಪಿಎಲ್ ಹೀರೋ ರಾಹುಲ್ ತೆವಾಟಿಯಾ; ಸ್ಟಾರ್ ಆಟಗಾರರು ಭಾಗಿ

First Published Feb 5, 2021, 2:15 PM IST

ಹರ್ಯಾಣ: 13ನೇ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ಒಂದೇ ಓವರ್‌ನಲ್ಲಿ 5 ಸಿಕ್ಸರ್‌ ಬಾರಿಸುವ ಮೂಲಕ ದಿನಬೆಳಗಾಗುವಷ್ಟರಲ್ಲಿ ಹೀರೋ ಆಗಿ ಹೊರಹೊಮ್ಮಿದ್ದ ರಾಜಸ್ಥಾನ ರಾಯಲ್ಸ್‌ ತಂಡದ ಆಲ್ರೌಂಡರ್ ರಾಹುಲ್ ತೆವಾಟಿಯಾ ತಮ್ಮ ಗೆಳತಿ ರಿಧಿ ಪನ್ನು ಜತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ಹರ್ಯಾಣ ಆಲ್ರೌಂಡರ್‌ ರಾಹುಲ್‌ ತೆವಾಟಿಯಾ ಯುಎಇನಲ್ಲಿ ನಡೆದ ಐಪಿಎಲ್‌ ಟೂರ್ನಿಯಲ್ಲಿ ಬ್ಯಾಟಿಂಗ್‌ ಹಾಗೂ ಬೌಲಿಂಗ್‌ನಲ್ಲಿ ಅಮೋಘ ಪ್ರದರ್ಶನ ತೋರುವ ಮೂಲಕ ಸ್ಟಾರ್ ಆಟಗಾರನಾಗಿ ಹೊರಹೊಮ್ಮಿದ್ದರು. ಇದೀಗ ತೆವಾಟಿಯಾ ಬುಧವಾರ(ಫೆ.03) ರಿಧಿ ಜತೆ ಎಂಗೇಜ್‌ಮೆಂಟ್‌ ಮಾಡಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಸ್ಟಾರ್ ಆಟಗಾರರು ಹಾಜರಿದ್ದರು.