ಕಪಿಲ್ ದೇವ್, ಸಾರಿಕಾ - ಮದುವೆಯಾಗಲು ತಯಾರಾಗಿದ್ದ ಈ ಜೋಡಿ ಮಧ್ಯ ಏನಾಯಿತು?
ಕಮಲ್ ಹಾಸನ್ ಪತ್ನಿ ನಟಿ ಸಾರಿಕಾ ಒಂದು ಕಾಲದಲ್ಲಿ ಫೇಮಸ್ ಕ್ರಿಕೆಟರ್ ಕಪಿಲ್‌ದೇವ್ ಜೊತೆ ಡೇಟ್ ಮಾಡುತ್ತಿದ್ದರು. ಇದು ನೆಡೆದಿದ್ದು ಸಾರಿಕಾಳ ಜೀವನದಲ್ಲಿ ಕಮಲ್ ಹಾಸನ್ ಎಂಟ್ರಿ ಕೊಡುವ ಮೊದಲು. ಈ ಜೋಡಿ ಮದುವೆಯಾಗಲು ತಯಾರಾಗಿದ್ದರಂತೆ. ಸಡನ್ ಆಗಿ ಕಪಿಲ್ ದೇವ್ ಮತ್ತು ಸಾರಿಕಾ ನಡುವೆ ಏನಾಯಿತು?
ಭಾರತದಲ್ಲಿ, ಸಿನಿಮಾ ಹಾಗೂ ಕ್ರಿಕೆಟ್ ಆಡುವುದು ಎರಡು ಗ್ಲಾಮರ್ಸ್ ಪ್ರೋಫೆನ್‌ಗಳು. ನಟಿಯರು ಮತ್ತು ಕ್ರಿಕೆಟಿಗರ ಲವ್ ಸ್ಟೋರಿ ಹಾಗೂ ನಂತರ ವಿವಾಹವಾದ ಹಲವಾರು ಉದಾಹರಣೆಗಳನ್ನು ನಾವು ನೋಡಿದ್ದೇವೆ.
ಮನ್ಸೂರ್ ಅಲಿ ಖಾನ್ ಪಟೌಡಿಯಿಂದ ಈಗಿನ ನಾಯಕ ವಿರಾಟ್ ಕೊಹ್ಲಿವರೆಗೆ ಅನೇಕ ಟೀ ಇಂಡಿಯಾ ಆಟಗಾರರು ಬಾಲಿವುಡ್ ನಟಿಯರಿಗೆ ತಮ್ಮ ಹೃದಯವನ್ನು ಕಳೆದುಕೊಂಡಿದ್ದಾರೆ.
ಇದೇ ರೀತಿ , 1983 ರಲ್ಲಿ ವಿಶ್ವಕಪ್ ಟ್ರೋಫಿಯನ್ನು ಎತ್ತಿದ ಲೆಜೆಂಡ್ ಕ್ರಿಕೆಟಿಗ ಕಪಿಲ್ ದೇವ್ ಸಹ ನಟಿಯೊಬ್ಬರಿಗೆ ಫಿದಾ ಆಗಿದ್ದರು.
ನಟಿ ಸರಿಕಾ ಜೊತೆ ಕಪಿಲ್ ದೇವ್ ಡೇಟಿಂಗ್ ಮಾಡುತ್ತಿದ್ದರು ಎಂದು ವರದಿಯಾಗಿದೆ.
ಬ್ರೇಕಪ್ ನಂತರ ಸಾರಿಕಾ ಸೂಪರ್ ಸ್ಟಾರ್ ಕಮಲ್ ಹಾಸನ್‌ರನ್ನು ವಿವಾಹವಾದರು.
ಎರಡು ಡಿಫ್ರೆಂಟ್ ಇಂಡಸ್ಟ್ರಿಗೆ ಸೇರಿದ ಕಪಿಲ್ ದೇವ್ ಮತ್ತು ಸಾರಿಕಾರ ಮೊದಲು ಭೇಟಿ ಶ್ರೀಮತಿ ಮನೋಜ್ ಕುಮಾರ್ ಮೂಲಕ ಆಗಿತ್ತು. ಕೇವಲ ಕ್ಯಾಜುವಲ್ ಮೀಟಿಂಗ್‌ಗಳಿಂದ ರೆಗ್ಯುಲರ್ ಔಟಿಂಗ್ ವರೆಗೆ ಈ ಜೋಡಿ ಹತ್ತಿರವಾದರು ಎಂದು ಇಂಡಿಯಾಟೈಮ್ಸ್ ವರದಿ ಹೇಳುತ್ತದೆ.
ಕೇವಲ ಸ್ನೇಹಿತರಾಗಿದ್ದ ಇವರ ನಡುವಿನ ಇಕ್ವೇಷನ್ ಶೀಘ್ರದಲ್ಲೇ ಸ್ಟ್ರಾಂಗ್ ಆಗಿ ಕಪಿಲ್ ಮತ್ತು ಸಾರಿಕಾ ರಿಲೆಷನ್‌ಶಿಪ್‌ಗೆ ಕಾಲಿಟ್ಟರು.
ಅಷ್ಟೇ ಅಲ್ಲ, ಕಪಿಲ್ ದೇವ್ ತನ್ನ ಹೆತ್ತವರನ್ನು ಭೇಟಿ ಮಾಡಿಸಲು ನಟಿಯನ್ನು ಪಂಜಾಬ್‌ಗೆ ಸಹ ಕರೆದೊಯ್ದಿದ್ದರು ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.
ಆದರೆ ಇದ್ದಕ್ಕಿದ್ದಂತೆ ಕಪಿಲ್ ಯು-ಟರ್ನ್ ತೆಗೆದುಕೊಂಡು ತನ್ನ ಗೆಳತಿ ರೋಮಿ ಭಾಟಿಯಾಳ ಬಳಿಗೆ ಹಿಂತಿರುಗಲು ನಿರ್ಧರಿಸಿದರು.
ರೋಮಿ ಭಾಟಿಯಾರ ಕೋಪದಿಂದಾಗಿ ಕಪಿಲ್, ಸಾರಿಕಾಳ ಜೊತೆ ಕ್ಲೋಸ್ ಆಗಿದ್ದರು ಎಂದು ವರದಿಗಳಲ್ಲಿ ಹೇಳಲಾಗಿದೆ.
ಹೇಗಾದರೂ, ರೋಮಿ ತನ್ನ ಜೀವನದಲ್ಲಿ ಮತ್ತೆ ಬಂದಾಗ, ಕಪಿಲ್ ನಟಿಯಿಂದ ದೂರ ಸರಿದರು ಮತ್ತು ತನ್ನ ಮೊದಲ ಪ್ರೀತಿಯನ್ನು ಮದುವೆಯಾದರು.