ಬ್ಯಾಸ್ಕೆಟ್ ಬಾಲ್ ಕೋರ್ಟ್‌ನಲ್ಲಿ ಶುರುವಾದ ಈ ಕ್ರಿಕೆಟಿಗನ ಲವ್‌ಸ್ಟೋರಿ!
ಭಾರತೀಯ ಕ್ರಿಕೆಟ್ ತಂಡದ ವೇಗದ ಬೌಲರ್ ಇಶಾಂತ್ ಶರ್ಮಾ ಸೆಪ್ಟೆಂಬರ್ 2 ರಂದು ತಮ್ಮ 33 ನೇ ಬರ್ತ್‌ಡೇ ಸೆಲೆಬ್ರೆಟ್ ಮಾಡಿಕೊಂಡಿದ್ದಾರೆ. ಪ್ರಸ್ತುತ ಅವರು ಲಂಡನ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ತಂಡದ ಜೊತೆ ಟೆಸ್ಟ್ ಸರಣಿ ಆಡುತ್ತಿದ್ದಾರೆ. ಇಶಾಂತ್ ಶರ್ಮಾರ ಲವ್ ಸ್ಟೋರಿ ಬಗೆ ಹೆಚ್ಚಿನವರಿಗೆ ತಿಳಿದಿಲ್ಲ. ಇಲ್ಲಿದೆ ಇಶಾಂತ್ ಶರ್ಮ ಹಾಗೂ ಪ್ರತಿಮಾ ಸಿಂಗ್ ಪ್ರೀತಿಯ ಕಥೆ.
2 ಸೆಪ್ಟೆಂಬರ್ 1988ರಂದು ದೆಹಲಿಯಲ್ಲಿ ಜನಿಸಿದ ಇಶಾಂತ್ ಶರ್ಮಾರನ್ನು ಪರಿಚಿಸುವ ಅಗತ್ಯವಿಲ್ಲ. ಟೀಮ್ ಇಂಡಿಯಾ ಈ ಆಟಗಾರನ ಬಗ್ಗೆ ಎಲ್ಲರಿಗೂ ತಿಳಿದಿದೆ. ಆಟದ ಜೊತೆ ತಮ್ಮ ಎತ್ತರ ಮತ್ತು ಉದ್ದನೆ ಕೂದಲಿನಿಂದ ಹೆಚ್ಚು ಫೇಮಸ್ ಆಗಿದ್ದಾರೆ ಇಶಾಂತ್ ಶರ್ಮ.
ಇಶಾಂತ್ ತಮ್ಮ 19ನೇ ವಯಸ್ಸಿನಿಂದ ಭಾರತೀಯ ತಂಡದ ಪರ ಬೌಲಿಂಗ್ ಮಾಡುತ್ತಿದ್ದಾರೆ ಮತ್ತು ಇದುವರೆಗೆ ಎಲ್ಲಾ ಮೂರು ಫಾರ್ಮೆಟ್‌ಗಳಲ್ಲೂ ಒಟ್ಟು 434 ವಿಕೆಟ್ ಪಡೆದಿದ್ದಾರೆ. ಆದರೆ ಈ ಆಟಗಾರನು ತನ್ನ ವೈಯಕ್ತಿಕ ಜೀವನದ ಬಗ್ಗೆ ಹೆಚ್ಚು ಚರ್ಚಿಸಿಲ್ಲ.
ಇಶಾಂತ್ ಶರ್ಮರ ಪ್ರೇಮಕಥೆಯು ಚಲನಚಿತ್ರ ಕಥೆಗೆ ಕಡಿಮೆಯಿಲ್ಲ. ವಾಸ್ತವವಾಗಿ, ದುರಹಂಕಾರಿ ಎಂದು ಇಂಶಾತ್ ಅವರನ್ನು ದ್ವೇಷಿಸುತ್ತಿದ್ದ ಪರಿಗಣಿಸಿದ ಹುಡುಗಿಯ ಮೇಲೆ ಮೊದಲ ನೋಟದಲ್ಲೇ ಪ್ರೀತಿಯಲ್ಲಿ ಬಿದ್ದಿದ್ದರು ಶರ್ಮ. ನಂತರ ಏನಾಯಿತು. ಇಲ್ಲಿದೆ ವಿವರ.
ಬ್ಯಾಸ್ಕೆಟ್ ಬಾಲ್ ಪಂದ್ಯದ ವೇಳೆ ಇಬ್ಬರ ಮೊದಲ ಭೇಟಿ ನಡೆಯಿತು. ಅಲ್ಲಿ ಇಶಾಂತ್ ಮುಖ್ಯ ಅತಿಥಿಯಾಗಿ ಹೋಗಿದ್ದರು. ಪ್ರತಿಮಾ ಸಿಂಗ್ ಗಾಯವಾಗಿದ್ದರೂ ಆ ಪಂದ್ಯದಲ್ಲಿ ಪಾಯಿಂಟ್ಸ್ ಗಳಿಸುತ್ತಿದ್ದರು.
ಇದನ್ನು ನೋಡಿದ ಇಶಾಂತ್ ಅವರ ಮೇಲೆ ಪ್ರಭಾವಿತನಾದರು ಮತ್ತು ಮೊದಲ ನೋಟದಲ್ಲೇ ಪ್ರತಿಮಾರಿಗೆ ಮನ ಸೋತರು. ಒಂದೆಡೆ, ಪ್ರತಿಮಾರ ಪ್ರೀತಿಯಲ್ಲಿ ಇಶಾಂತ್ ಹುಚ್ಚಾರಾಗಿದ್ದರು. ಮತ್ತೊಂದೆಡೆ, ಪ್ರತಿಮಾ ಇಶಾಂತ್ ಅವರನ್ನು ನೋಡಿ ಆತನನ್ನು ಅಹಂಕಾರಿ ಎಂದು ಭಾವಿಸಿದ್ದರು. ಈ ಬಗ್ಗೆ ಸಂದರ್ಶನವೊಂದರಲ್ಲಿ, ಸ್ವತಃ ಇಶಾಂತ್ ಹೇಳಿದ್ದರು.
'ಆರಂಭದಲ್ಲಿ ಪ್ರತಿಮಾ ನನ್ನನ್ನು ಇಷ್ಟಪಡಲಿಲ್ಲ. ಇಬ್ಬರೂ ದೇಶವನ್ನು ಪ್ರತಿನಿಧಿಸುತ್ತೇವೆ. ಆದರೂ ಕ್ರಿಕೆಟಿಗರು ಮಾತ್ರ ಏಕೆ ಹೆಚ್ಚು ಜನಪ್ರಿಯತೆ ಪಡೆಯುತ್ತಾರೆ ಎಂದು ಅವರು ಭಾವಿಸುತ್ತಿದ್ದರು. ಆದರೆ ನಾವಿಬ್ಬರೂ ಪರಸ್ಪರ ಮಾತನಾಡಿದಾಗ, ನಾನು ಅಷ್ಟು ಸೊಕ್ಕಿನವನಲ್ಲ ಎಂದು ಅವಳಿಗೆ ಅರ್ಥವಾಯಿತು.
ಆದರೆ, ಪ್ರತಿಮಾ ಫೇಸ್ಬುಕ್‌ನಲ್ಲಿ ತನ್ನ ಫ್ರೆಂಡ್ ರಿಕ್ವೆಸ್ಟ್ ಸ್ವೀಕರಿಸಲು ಎರಡು ವರ್ಷ ಬೇಕಾಯಿತು .ಅವರು ಫ್ರೆಂಡ್ ರಿಕ್ವೆಸ್ಟ್ ಒಪ್ಪಿಕೊಂಡ ನಂತರ , ಇಬ್ಬರು ತಮ್ಮ ಫೋನ್ ನಂಬರ್ ಬದಲಾಯಿಸಿಕೊಂಡೆವು ಮತ್ತು ಪರಸ್ಪರ ಮಾತನಾಡಲು ಪ್ರಾರಂಭಿಸಿದೆವು, ಎಂದಿದ್ದಾರೆ ಇಶಾಂತ್.
ಅಲ್ಲಿಂದ ಇಬ್ಬರ ಸಂಭಾಷಣೆ ಆರಂಭವಾಯಿತು ಮತ್ತು ಕ್ರಮೇಣ ಮಾತುಕತೆಗಳು ಮತ್ತು ಮೀಟಿಂಗ್‌ಗಳು ಹೆಚ್ಚುತ್ತಲೇ ಇದ್ದವು. ಸುಮಾರು 2-3 ವರ್ಷಗಳ ಡೇಟಿಂಗ್ ನಂತರ ಇಬ್ಬರೂ 9 ಡಿಸೆಂಬರ್ 2016 ರಂದು ವಿವಾಹವಾದರು.
ಪ್ರತಿಮಾ ಸಿಂಗ್ ವಾರಣಾಸಿಯ ನಿವಾಸಿ. ಮತ್ತು ರಾಷ್ಟ್ರ ಮಟ್ಟದ ಬ್ಯಾಸ್ಕೆಟ್‌ಬಾಲ್ ಆಟಗಾರ್ತಿ ಕೂಡ ಹೌದು. ಅವರು ಅನೇಕ ಏಷ್ಯನ್ ಕ್ರೀಡಾಕೂಟಗಳಲ್ಲಿ ಭಾಗವಹಿಸಿದ್ದಾರೆ. ಅವರು ಭಾರತೀಯ ಮಹಿಳಾ ಬ್ಯಾಸ್ಕೆಟ್‌ಬಾಲ್ ತಂಡದ ಮಾಜಿ ನಾಯಕಿ. ಅದೇ ಸಮಯದಲ್ಲಿ, ಇಶಾಂತ್ ಶರ್ಮಾ ಭಾರತೀಯ ಕ್ರಿಕೆಟ್ ತಂಡದ ಯಶಸ್ವಿ ಬೌಲರ್.
ಅವರು ಇದುವರೆಗೆ 104 ಟೆಸ್ಟ್‌ಗಳಲ್ಲಿ 311 ವಿಕೆಟ್, 80 ಏಕದಿನ ಪಂದ್ಯಗಳಲ್ಲಿ 115 ಮತ್ತು 14 ಟಿ 20 ಪಂದ್ಯಗಳಲ್ಲಿ 8 ವಿಕೆಟ್ ಪಡೆದಿದ್ದಾರೆ. ಪ್ರಸ್ತುತ ಅವರು ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ ಭಾಗವಾಗಿದ್ದಾರೆ.