- Home
- Sports
- Cricket
- ಐಪಿಎಲ್‌ನಲ್ಲಿ 40 ಸಾವಿರಕ್ಕೂ ಹೆಚ್ಚು ರನ್ ಗಳಿಸಿದ ಟಾಪ್ 3 ತಂಡಗಳಿವು! ಈ ಪಟ್ಟಿಯಲ್ಲಿದೆಯೇ ಆರ್‌ಸಿಬಿ?
ಐಪಿಎಲ್‌ನಲ್ಲಿ 40 ಸಾವಿರಕ್ಕೂ ಹೆಚ್ಚು ರನ್ ಗಳಿಸಿದ ಟಾಪ್ 3 ತಂಡಗಳಿವು! ಈ ಪಟ್ಟಿಯಲ್ಲಿದೆಯೇ ಆರ್‌ಸಿಬಿ?
ಬೆಂಗಳೂರು: ಹೊಡಿಬಡಿಯಾಟಕ್ಕೆ ಹೆಸರುವಾಸಿಯಾಗಿರುವ ಇಂಡಿಯನ್ ಪ್ರೀಮಿಯರ್ ಲೀಗ್ 18ನೇ ಆವೃತ್ತಿ ಸಾಗುತ್ತಿದೆ. ಈ ಟೂರ್ನಿಯಲ್ಲಿ ಕೇವಲ 3 ತಂಡಗಳು ಮಾತ್ರ 40 ಸಾವಿರಕ್ಕೂ ಅಧಿಕ ರನ್ ಬಾರಿಸಿವೆ. ಅಷ್ಟಕ್ಕೂ ಆ ಮೂರು ತಂಡಗಳು ಯಾವುವು ನೋಡೋಣ ಬನ್ನಿ.

2008ರಲ್ಲಿ ಆರಂಭವಾದ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಇದುವರೆಗೂ ಟನ್ ಗಟ್ಟಲೆ ರನ್ ದಾಖಲಾಗಿವೆ.
ಇದುವರೆಗೂ ಬರೋಬ್ಬರಿ 12 ಬಾರಿ ಐಪಿಎಲ್‌ನಲ್ಲಿ 250ಕ್ಕೂ ಅಧಿಕ ರನ್ ದಾಖಲಾಗಿದೆ.
ಕೆಲವು ತಂಡಗಳು ಉಳಿದ ತಂಡಗಳಿಗೆ ಹೋಲಿಸಿದ್ರೆ ಬೃಹತ್ ಮೊತ್ತ ಕಲೆಹಾಕಿದ ಸಾಧನೆ ಮಾಡಿವೆ.
18 ಸೀಸನ್ ಕಂಡಿರುವ ಈ ಐಪಿಎಲ್‌ನಲ್ಲಿ ಕೆಲವು ತಂಡಗಳು ಇದುವರೆಗೂ ಒಟ್ಟಾಗಿ 40 ಸಾವಿರಕ್ಕೂ ಅಧಿಕ ರನ್ ಬಾರಿಸಿವೆ.
ಕೇವಲ ಮೂರು ತಂಡಗಳು ಮಾತ್ರ ಐಪಿಎಲ್ ಇತಿಹಾಸದಲ್ಲಿ 40 ಸಾವಿರಕ್ಕೂ ಅಧಿಕ ರನ್ ಬಾರಿಸಿವೆ.
3. ಪಂಜಾಬ್ ಕಿಂಗ್ಸ್: 40,072 ರನ್
ಪಂಜಾಬ್ ಕಿಂಗ್ಸ್ ತಂಡವು ಇತ್ತೀಚೆಗಷ್ಟೇ 40 ಸಾವಿರ ರನ್ ಕ್ಲಬ್ ಸೇರಿವೆ. ಪಂಜಾಬ್ 40,072 ರನ್ ಬಾರಿಸಿದೆ.
2. ರಾಯಲ್ ಚಾಲೆಂಜರ್ಸ್ ಬೆಂಗಳೂರು: 40,814 ರನ್
ಒಂದೇ ಒಂದು ಕಪ್ ಗೆಲ್ಲದಿದ್ದರೂ ಆರ್‌ಸಿಬಿ ರನ್ ಗಳಿಸುವುದರಲ್ಲಿ ಹಿಂದೆ ಬಿದ್ದಿಲ್ಲ. ಆರ್‌ಸಿಬಿ 40,814 ರನ್ ಸಿಡಿಸಿ ಎರಡನೇ ಸ್ಥಾನದಲ್ಲಿದೆ.
1. ಮುಂಬೈ ಇಂಡಿಯನ್ಸ್: 42,297
5 ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಗರಿಷ್ಠ ರನ್ ಬಾರಿಸಿದ ತಂಡಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಮುಂಬೈ ಇಂಡಿಯನ್ಸ್ ತಂಡ ಇದುವರೆಗೂ 42,297 ರನ್ ಬಾರಿಸಿದೆ.