ಮೆಗಾ ಹರಾಜಿಗೆ ಕಾಯುತ್ತಿರುವ ಐಪಿಎಲ್ ಅಭಿಮಾನಿಗಳಿಗೆ ಗುಡ್ ನ್ಯೂಸ್!
18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೂ ಮುನ್ನ ಮೆಗಾ ಹರಾಜು ನಡೆಯಲಿದೆ. ಮೆಗಾ ಹರಾಜಿಗೂ ಮುನ್ನ ಆಟಗಾರರ ರೀಟೈನ್‌ಗೆ ಬಿಸಿಸಿಐ ಗಡುವು ನೀಡಿದೆ. ಇದರ ಬೆನ್ನಲ್ಲೇ ಐಪಿಎಲ್ ಅಭಿಮಾನಿಗಳಿಗೆ ಸಿಹಿ ಸುದ್ದಿ ಸಿಕ್ಕಿದೆ.
ಐಪಿಎಲ್ 2025 ಮೆಗಾ ಹರಾಜಿಗೆ ಮುನ್ನ ಫ್ರಾಂಚೈಸಿಗಳು ತಾವು ಉಳಿಸಿಕೊಳ್ಳುವ ಆಟಗಾರರನ್ನು ಅಂತಿಮಗೊಳಿಸುವ ಸಮಯ ಬಂದಿದೆ. ಬಿಸಿಸಿಐ ಅಕ್ಟೋಬರ್ 31 ರೊಳಗೆ ಪಟ್ಟಿ ಸಲ್ಲಿಸಲು ಬಿಸಿಸಿಐ ಗಡುವು ನೀಡಿದೆ.
ಗುರುವಾರದೊಳಗೆ ಎಲ್ಲಾ ಐಪಿಎಲ್ ತಂಡಗಳು ತಾವು ಉಳಿಸಿಕೊಳ್ಳುವ ಆಟಗಾರರ ಪಟ್ಟಿ ಬಿಡುಗಡೆ ಮಾಡಲಿವೆ. ಈ ವರ್ಷ ಗರಿಷ್ಠ ಆರು ಆಟಗಾರರನ್ನು ಉಳಿಸಿಕೊಳ್ಳಬಹುದು. ಧೋನಿ, ಕೊಹ್ಲಿ, ರೋಹಿತ್, ಸೂರ್ಯಕುಮಾರ್, ಬುಮ್ರಾ, ಸ್ಯಾಮ್ಸನ್, ಪಾಂಡ್ಯ, ಪಂತ್, ರಾಹುಲ್, ಅಯ್ಯರ್ ಮುಂತಾದ ಆಟಗಾರರ ಮೇಲೆ ಎಲ್ಲರ ಕಣ್ಣು ಇದೆ
ಐಪಿಎಲ್ 2025 ರೀಟೆನ್ಶನ್ ನಿಯಮಗಳೇನು?
ಐದು ಕ್ಯಾಪ್ಡ್ ಮತ್ತು ಒಬ್ಬರು ಅನ್‌ಕ್ಯಾಪ್ಡ್ ಆಟಗಾರರನ್ನು ಉಳಿಸಿಕೊಳ್ಳಬಹುದು. ಕ್ಯಾಪ್ಡ್ ಆಟಗಾರರಿಗೆ 18, 14, 11 ಕೋಟಿ ರೂ. ಅನ್‌ಕ್ಯಾಪ್ಡ್‌ಗೆ ತಲಾ 4 ಕೋಟಿ ರೂ.
ಐಪಿಎಲ್ 2025 ರೀಟೈನ್ ಗಡುವು ಯಾವಾಗ?
ಅಕ್ಟೋಬರ್ 31, 2024ರ ಸಂಜೆ 5 ಗಂಟೆಯೊಳಗೆ ಬಿಸಿಸಿಐಗೆ ಪಟ್ಟಿ ಸಲ್ಲಿಸಬೇಕು ಎಂದು ಗಡುವು ವಿಧಿಸಲಾಗಿದೆ. ನವೆಂಬರ್‌ನಲ್ಲಿ ಮೆಗಾ ಹರಾಜು ನಡೆಯುವ ಸಾಧ್ಯತೆ.
ದಿನೇಶ್ ಕಾರ್ತಿಕ್
ಐಪಿಎಲ್ 2025 ರೀಟೆನ್ಶನ್ ಸ್ಲ್ಯಾಬ್‌ಗಳು
ಕ್ಯಾಪ್ಡ್: 1 - 18 ಕೋಟಿ, 2 - 14 ಕೋಟಿ, 3 - 11 ಕೋಟಿ, 4 - 9 ಕೋಟಿ, 5 - 7 ಕೋಟಿ. ಅನ್‌ಕ್ಯಾಪ್ಡ್: 4 ಕೋಟಿ.
ನಿಯಮಗಳು
6 ಆಟಗಾರರು, ಕನಿಷ್ಠ 5 ಕ್ಯಾಪ್ಡ್, ಅಕ್ಟೋಬರ್ 31 ರೊಳಗೆ ಪಟ್ಟಿ ಸಲ್ಲಿಕೆ.
ಐಪಿಎಲ್ ಅಭಿಮಾನಿಗಳಿಗೆ ಗುಡ್ ನ್ಯೂಸ್
ಐಪಿಎಲ್ 2025 ಹರಾಜು
ನವೆಂಬರ್ ಇಲ್ಲವೇ ಡಿಸೆಂಬರ್ 2024 ರಲ್ಲಿ ಐಪಿಎಲ್ ಮೆಗಾ ಹರಾಜು ನಡೆಯುವ ನಿರೀಕ್ಷೆಯಿದೆ. ಪ್ರತಿ ತಂಡಕ್ಕೆ 120 ಕೋಟಿ ರೂ. ಬಜೆಟ್ ಮಿತಿಗೊಳಿಸಲಾಗಿದೆ.
ಲೈವ್‌ನಲ್ಲಿ ಹೇಗೆ ನೋಡುವುದು?
ಇನ್ನು ನವೆಂಬರ್ 31ರ ಸಂಜೆ 5 ಗಂಟೆಯಿಂದ ಆಟಗಾರರ ರೀಟೈನ್ ಕುರಿತಂತೆ JioCinemaದಲ್ಲಿ ಉಚಿತವಾಗಿ ಮತ್ತು ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ನೋಡಬಹುದಾಗಿದೆ.