- Home
- Sports
- Cricket
- IPL Auction 2023: ಐಪಿಎಲ್ ಮಿನಿ ಹರಾಜಿಗೂ ಮುನ್ನ ಫ್ರಾಂಚೈಸಿಗಳು ತಿಳಿದಿರಲೇಬೇಕಾದ 6 ಮಹತ್ವದ ಸಂಗತಿಗಳಿವು..!
IPL Auction 2023: ಐಪಿಎಲ್ ಮಿನಿ ಹರಾಜಿಗೂ ಮುನ್ನ ಫ್ರಾಂಚೈಸಿಗಳು ತಿಳಿದಿರಲೇಬೇಕಾದ 6 ಮಹತ್ವದ ಸಂಗತಿಗಳಿವು..!
ಕೊಚ್ಚಿ(ಡಿ.23): ಐಪಿಎಲ್ ಮಿನಿ ಹರಾಜಿಗೆ ಕ್ಷಣಗಣನೆ ಆರಂಭವಾಗಿದ್ದು, ಇಂದು(ಡಿ.23) ಮಧ್ಯಾಹ್ನ 2.30ರಿಂದ ಕೊಚ್ಚಿಯಲ್ಲಿ ಆಟಗಾರರ ಮಿನಿ ಹರಾಜು ಆರಂಭವಾಗಲಿದೆ. ಈ ಮಿನಿ ಹರಾಜಿಗೆ ಬಿಸಿಸಿಐ 405 ಆಟಗಾರರ ಹೆಸರನ್ನು ಶಾರ್ಟ್‌ಲಿಸ್ಟ್ ಮಾಡಿದ್ದು, ಎಲ್ಲಾ 10 ಫ್ರಾಂಚೈಸಿಗಳು ಸೇರಿ ಗರಿಷ್ಠ 87 ಆಟಗಾರರನ್ನು ಖರೀದಿಸಲು ಅವಕಾಶವಿದೆ. ಮಯಾಂಕ್ ಅಗರ್‌ವಾಲ್, ಬೆನ್ ಸ್ಟೋಕ್ಸ್, ಕ್ಯಾಮರೋನ್ ಗ್ರೀನ್, ಸ್ಯಾಮ್ ಕರ್ರನ್ ಹಾಗೂ ಹ್ಯಾರಿ ಬ್ರೂಕ್ ಅವರಂತಹ ತಾರಾ ಟಿ20 ಸ್ಪೆಷಲಿಸ್ಟ್ ಆಟಗಾರರು ಈ ಬಾರಿಯ ಹರಾಜಿನಲ್ಲಿ ಲಭ್ಯವಿರಲಿದ್ದು, ಯಾವ ಆಟಗಾರರು ಯಾವ ತಂಡವನ್ನು ಕೂಡಿಕೊಳ್ಳಲಿದ್ದಾರೆ ಎನ್ನುವ ಕುತೂಹಲ ಜೋರಾಗಿದೆ.ಇನ್ನು ಈ ಮಿನಿ ಹರಾಜಿಗೂ ಮುನ್ನ ಎಲ್ಲಾ ಫ್ರಾಂಚೈಸಿಗಳು ಕೆಲವೊಂದು ನಿಯಮಗಳನ್ನು ತಿಳಿದಿರಲೇಬೇಕು. ನಮ್ಮ ಕ್ರಿಕೆಟ್ ಅಭಿಮಾನಿಗಳಿಗೂ ಈ ಮಾಹಿತಿಯಿರಲಿ ಎನ್ನುವ ಕಾರಣದಿಂದ ಆ ಮಹತ್ವದ ರೂಲ್ಸ್‌ಗಳನ್ನು ನಿಮ್ಮ ಮುಂದಿಡುತ್ತಿದ್ದೇವೆ ನೋಡಿ.

1. ಕಳೆದ ಮೆಗಾ ಹರಾಜಿಗೆ ಹೋಲಿಸಿದರೇ, ಈ ಬಾರಿ ಎಲ್ಲಾ ಫ್ರಾಂಚೈಸಿಗಳಿಗೆ ಹೆಚ್ಚುವರಿಯಾಗಿ 5 ಕೋಟಿ ರುಪಾಯಿ ಖರ್ಚು ಮಾಡಲು ಫ್ರಾಂಚೈಸಿಗಳಿಗೆ ಅವಕಾಶ ಕಲ್ಪಿಸಲಾಗಿದೆ. ಆಟಗಾರರ ರಿಲೀಸ್ ಬಳಿಕ ಫ್ರಾಂಚೈಸಿ ಬಳಿ ಉಳಿದಿರುವ ಹಣದ ಜತೆಗೆ ಹೆಚ್ಚುವರಿಯಾಗಿ 5 ಕೋಟಿ ರುಪಾಯಿ ಎಲ್ಲಾ ಫ್ರಾಂಚೈಸಿ ಬಳಿ ಹರಾಜಿಗೆ ಲಭ್ಯವಿರಲಿದೆ.
2. ಎಲ್ಲಾ ಫ್ರಾಂಚೈಸಿಗಳು ಕಡ್ಡಾಯವಾಗಿ ತಮ್ಮ ಪರ್ಸ್‌ನಲ್ಲಿರುವ ಹಣದ 75% ಭಾಗವನ್ನು ಖರ್ಚು ಮಾಡಲೇಬೇಕಾಗುತ್ತದೆ. ಹೀಗಾಗಿ ತಮಗೆ ಬೇಕಾದ ಆಟಗಾರರನ್ನು ಖರೀದಿಸಲು ಫ್ರಾಂಚೈಸಿಗಳು ಹಿಂದೇಟು ಹಾಕುವ ಸಾಧ್ಯತೆ ಕಡಿಮೆ.
3.ಮಿನಿ ಹರಾಜಿನಲ್ಲಿ RTM(Right to Match)ಕಾರ್ಡ್ ಬಳಕೆಗೆ ಅವಕಾಶವಿರುವುದಿಲ್ಲ. ಮೆಗಾ ಹರಾಜಿನಲ್ಲಿ ಮಾತ್ರ ಆರ್‌ಟಿಎಂ ಕಾರ್ಡ್ ಬಳಸಲು ಅವಕಾಶವಿದೆ. ಒಂದು ಫ್ರಾಂಚೈಸಿಯು ಒಬ್ಬ ಆಟಗಾರನನ್ನು 5 ಕೋಟಿ ಕೊಟ್ಟು ಖರೀದಿಸಿದರೇ, ಆ ಆಟಗಾರನಿದ್ದ ಹಳೆಯ ಫ್ರಾಂಚೈಸಿಯು ಅದೇ ಮೊತ್ತ ನೀಡಿ ತನ್ನ ತೆಕ್ಕೆಗೆ ಖರೀದಿಸಲು RTM ಕಾರ್ಡ್ ಮೂಲಕ ಅವಕಾಶವಿತ್ತು. ಆದರೆ ಈ ಅವಕಾಶ ಮಿನಿ ಹರಾಜಿನಲ್ಲಿ ಇಲ್ಲ.
4. ಐಪಿಎಲ್ ಹರಾಜಿನಲ್ಲಿ ಪ್ರತಿ ಫ್ರಾಂಚೈಸಿ ಕನಿಷ್ಠ 17 ಆಟಗಾರರನ್ನು ಹಾಗೂ ಗರಿಷ್ಠ 25 ಆಟಗಾರರನ್ನು ಖರೀದಿಸಲು ಅವಕಾಶವಿದೆ. ಇನ್ನು ತಂಡದಲ್ಲಿ ಗರಿಷ್ಠ 8 ವಿದೇಶಿ ಆಟಗಾರರನ್ನು ಹೊಂದಲು ಅವಕಾಶವಿದೆ.
5. ಇನ್ನು ಪ್ರಾರಂಭಿಕ ಹಂತದಲ್ಲಿ ಅನ್‌ಸೋಲ್ಡ್ ಆದ ಆಟಗಾರರನ್ನು ಮರು ಹರಾಜಿನಲ್ಲಿ ಫ್ರಾಂಚೈಸಿಗಳಿಗೆ ಖರೀದಿಸಲು ಅವಕಾಶವಿದೆ. ಹೀಗಾಗಿ ಫ್ರಾಂಚೈಸಿಗಳಿಗೆ ಅನ್‌ಸೋಲ್ಡ್ ಆಟಗಾರರನ್ನು ಖರೀದಿಸಲು ಮತ್ತೊಮ್ಮೆ ಅವಕಾಶವಿರಲಿದೆ.
5. ಇನ್ನು ಪ್ರಾರಂಭಿಕ ಹಂತದಲ್ಲಿ ಅನ್‌ಸೋಲ್ಡ್ ಆದ ಆಟಗಾರರನ್ನು ಮರು ಹರಾಜಿನಲ್ಲಿ ಫ್ರಾಂಚೈಸಿಗಳಿಗೆ ಖರೀದಿಸಲು ಅವಕಾಶವಿದೆ. ಹೀಗಾಗಿ ಫ್ರಾಂಚೈಸಿಗಳಿಗೆ ಅನ್‌ಸೋಲ್ಡ್ ಆಟಗಾರರನ್ನು ಖರೀದಿಸಲು ಮತ್ತೊಮ್ಮೆ ಅವಕಾಶವಿರಲಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.