IPL 2021: ಸನ್‌ರೈಸರ್ಸ್ ಎದುರಿನ ಪಂದ್ಯಕ್ಕೆ RCB ತಂಡದಲ್ಲಿ 2 ಬದಲಾವಣೆ.?
ಚೆನ್ನೈ: ಐಪಿಎಲ್ ಉದ್ಘಾಟನಾ ಪಂದ್ಯದಲ್ಲೇ ಬಲಿಷ್ಠ ಮುಂಬೈ ಇಂಡಿಯನ್ಸ್ ಮಣಿಸಿ ಆತ್ಮವಿಶ್ವಾಸದಿಂದ ಬೀಗುತ್ತಿರುವ ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಇದೀಗ ಸನ್‌ರೈಸರ್ಸ್ ಹೈದರಾಬಾದ್ ಸವಾಲನ್ನು ಸ್ವೀಕರಿಸಲು ಸಜ್ಜಾಗಿದೆ. ಕಳೆದ ಆವೃತ್ತಿಯ ಎಲಿಮಿನೇಟರ್ ಪಂದ್ಯದಲ್ಲಿ ಹೈದರಾಬಾದ್ ಎದುರು ಮುಗ್ಗರಿಸಿದ್ದ ಆರ್‌ಸಿಬಿ ಇದೀಗ ಆ ಸೋಲಿಗೆ ತಿರುಗೇಟು ನೀಡಲು ಎದುರು ನೋಡುತ್ತಿದೆ. ಹೀಗಾಗಿ ಈ ಪಂದ್ಯದಲ್ಲಿ ಬಲಿಷ್ಠ ತಂಡದೊಂದಿಗೆ ಕಣಕ್ಕಿಳಿಯಲು ಆರ್‌ಸಿಬಿ ಸಜ್ಜಾಗಿದ್ದು, ತಂಡದಲ್ಲಿ 2 ಬದಲಾವಣೆ ನಿರೀಕ್ಷಿಸಲಾಗಿದೆ
1. ದೇವದತ್ ಪಡಿಕ್ಕಲ್: ಎಡಗೈ ಆರಂಭಿಕ ಬ್ಯಾಟ್ಸ್‌ಮನ್. ಮೊದಲ ಪಂದ್ಯದಿಂದ ಹೊರಗುಳಿದಿದ್ದ ಪಡಿಕ್ಕಲ್ ತಂಡ ಕೂಡಿಕೊಳ್ಳುವ ಸಾಧ್ಯತೆ
2. ವಿರಾಟ್ ಕೊಹ್ಲಿ: ಆರ್‌ಸಿಬಿ ನಾಯಕ, ತಂಡದ ರನ್ ಮಷೀನ್. ಉತ್ತಮ ಫಾರ್ಮ್‌ನಲ್ಲಿದ್ದು ಮತ್ತೊಮ್ಮೆ ಅಬ್ಬರಿಸುವ ಸಾಧ್ಯತೆ.
3. ಮೊಹಮ್ಮದ್ ಅಜರುದ್ದೀನ್: ರಜತ್ ಪಾಟೀದಾರ್ ಮೊದಲ ಪಂದ್ಯದಲ್ಲಿ ವೈಫಲ್ಯ ಅನುಭವಿಸಿದ್ದು, ಪಾಟಿದಾರ್ ಬದಲಿಗೆ ಕೇರಳ ಮೂಲದ ಮೊಹಮ್ಮದ್ ಅಜರುದ್ದೀನ್ ತಂಡ ಕೂಡಿಕೊಳ್ಳುವ ಸಾಧ್ಯತೆ
4. ಎಬಿ ಡಿವಿಲಿಯರ್ಸ್: ವಿಕೆಟ್ ಕೀಪರ್ ಬ್ಯಾಟ್ಸ್‌ಮನ್, ಆರ್‌ಸಿಬಿ ಆಪತ್ಭಾಂಧವ, ತಂಡದ ಬ್ಯಾಟಿಂಗ್ ಬೆನ್ನೆಲುಬು ಎಬಿಡಿ.
5. ಗ್ಲೆನ್ ಮ್ಯಾಕ್ಸ್‌ವೆಲ್: ಅನುಭವಿ ಆಲ್ರೌಂಡರ್. ಮೊದಲ ಪಂದ್ಯದಲ್ಲೇ ಅಬ್ಬರಿಸಿರುವ ಮ್ಯಾಕ್ಸಿ
6. ಡೇನಿಯಲ್ ಕ್ರಿಶ್ಚಿಯನ್: ಮತ್ತೋರ್ವ ಅನುಭವಿ ಅಲ್ರೌಂಡರ್, ಡೆತ್ ಓವರ್ ಸ್ಪೆಷಲಿಸ್ಟ್ ಬೌಲರ್
7. ವಾಷಿಂಗ್ಟನ್ ಸುಂದರ್: ಆರ್‌ಸಿಬಿ ಸ್ಟಾರ್ ಅಲ್ರೌಂಡರ್, ಪವರ್ ಪ್ಲೇನಲ್ಲಿ ಪರಿಣಾಮಕಾರಿ ಬೌಲಿಂಗ್ ನಡೆಸಬಲ್ಲ ಆಫ್‌ಸ್ಪಿನ್ನರ್
8. ಕೈಲ್ ಜೇಮಿಸನ್: ಕಿವೀಸ್ ನೀಳಕಾಯದ ಮಾರಕ ವೇಗಿ. 15 ಕೋಟಿ ರುಪಾಯಿಗೆ ಆರ್‌ಸಿಬಿ ಕೂಡಿಕೊಂಡಿರುವ ಯುವ ವೇಗಿ
9. ಮೊಹಮ್ಮದ್ ಸಿರಾಜ್: ಅನುಭವಿ ವೇಗದ ಬೌಲರ್
10. ಹರ್ಷಲ್ ಪಟೇಲ್: ಡೆತ್ ಓವರ್ ಸ್ಪೆಷಲಿಸ್ಟ್, ಮೊದಲ ಪಂದ್ಯದಲ್ಲೇ 5 ವಿಕೆಟ್ ಕಬಳಿಸಿ ಗಮನ ಸೆಳೆದಿರುವ ವೇಗಿ
11. ಯುಜುವೇಂದ್ರ ಚಹಲ್: ಅರ್‌ಸಿಬಿ ಸ್ಪಿನ್ ಅಸ್ತ್ರ.