IPL 2021: ಒಂದು ಶತಕ: ಅಪರೂಪದ ದಾಖಲೆಗಳು ಕನ್ನಡಿಗ ಪಡಿಕ್ಕಲ್ ಪಾಲು..!
ಬೆಂಗಳೂರು: ಕರ್ನಾಟಕದ ಯುವ ಪ್ರತಿಭೆ ದೇವದತ್ ಪಡಿಕ್ಕಲ್ ರಾಜಸ್ಥಾನ ರಾಯಲ್ಸ್ ವಿರುದ್ದ ಮುಂಬೈನ ವಾಂಖೇಡೆ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಅಕ್ಷರಶಃ ಅಬ್ಬರಿಸುವ ಮೂಲಕ ಐಪಿಎಲ್ ವೃತ್ತಿಜೀವನದ ಮೊದಲ ಶತಕ ಬಾರಿಸಿ ಅಬ್ಬರಿಸಿದ್ದಾರೆ. ರಾಜಸ್ಥಾನ ರಾಯಲ್ಸ್ ನೀಡಿದ್ದ 178 ರನ್‌ಗಳ ಗುರಿ ಆರ್‌ಸಿಬಿ ಆರಂಭಿಕರಾದ ನಾಯಕ ವಿರಾಟ್ ಕೊಹ್ಲಿ ಹಾಗೂ ದೇವದತ್ ಪಡಿಕ್ಕಲ್‌ಗೆ ಸವಾಲೆನಿಸಲೇ ಇಲ್ಲ. ದೇವದತ್ ಪಡಿಕ್ಕಲ್ ಕೇವಲ 51 ಎಸೆತಗಳನ್ನು ಎದುರಿಸಿ ಅಜೇಯ ಶತಕ ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಪಡಿಕ್ಕಲ್ ಶತಕ ಬಾರಿಸಿದ ಬಳಿಕ ನಿರ್ಮಾಣವಾದ ಅಪರೂಪದ ದಾಖಲೆಗಳು ಇಲ್ಲಿವೆ ನೋಡಿ

1. ಆರ್‌ಸಿಬಿ ಪರ ಶತಕ ಬಾರಿಸಿದ 5ನೇ ಬ್ಯಾಟ್ಸ್‌ಮನ್ ಪಡಿಕ್ಕಲ್

ಈ ಮೊದಲು ವಿರಾಟ್ ಕೊಹ್ಲಿ(5), ಕ್ರಿಸ್ ಗೇಲ್(5), ಎಬಿ ಡಿವಿಲಿಯರ್ಸ್(2) ಹಾಗೂ ಮನೀಶ್ ಪಾಂಡೆ(1) ಅರ್‌ಸಿಬಿ ಪರ ಶತಕ ಬಾರಿಸಿದ ಸಾಧನೆ ಮಾಡಿದ್ದರು.

2. ಐಪಿಎಲ್‌ನಲ್ಲಿ ಶತಕ ಬಾರಿಸಿದ ಕರ್ನಾಟಕದ 4ನೇ ಬ್ಯಾಟ್ಸ್‌ಮನ್ ಪಡಿಕ್ಕಲ್:

ಐಪಿಎಲ್‌ನಲ್ಲಿ ಈ ಮೊದಲು ಕರ್ನಾಟಕದ ಕ್ರಿಕೆಟಿಗರಾದ ಮನೀಶ್ ಪಾಂಡೆ, ಕೆ.ಎಲ್ ರಾಹುಲ್ ಹಾಗೂ ಮಯಾಂಕ್ ಅಗರ್‌ವಾಲ್ ಮೂರಂಕಿ ಮೊತ್ತ ದಾಖಲಿಸಿದ್ದರು. ಈ ಸಾಧಕರ ಸಾಲಿಗೆ ಇದೀಗ ಪಡಿಕ್ಕಲ್ ಸೇರ್ಪಡೆಯಾಗಿದ್ದಾರೆ.

3. ಐಪಿಎಲ್‌ನಲ್ಲಿ ಶತಕ ಬಾರಿಸಿದ 3ನೇ ಅತಿ ಕಿರಿಯ ಬ್ಯಾಟ್ಸ್‌ಮನ್ ಪಡಿಕ್ಕಲ್:

ಈ ಮೊದಲು ಮನೀಶ್ ಪಾಂಡೆ(19 ವರ್ಷ 253 ದಿನ, ಆರ್‌ಸಿಬಿ ಪರ) ಹಾಗೂ ರಿಷಭ್ ಪಂತ್(20 ವರ್ಷ 2018 ದಿನ, ಡೆಲ್ಲಿ ಪರ) ಶತಕ ಬಾರಿಸಿದ್ದರು. ಇದೀಗ ಪಡಿಕ್ಕಲ್(20 ವರ್ಷ, 289 ದಿನ) ಈ ಪಟ್ಟಿಗೆ ಸೇರಿದ್ದಾರೆ.

4. ಆರ್‌ಸಿಬಿ ಪರ ಈ ಆವೃತ್ತಿಯಲ್ಲಿ ಶತಕ ಚಚ್ಚಿದ ಮೊದಲ ಆಟಗಾರ ಪಡಿಕ್ಕಲ್:

2010ರಿಂದೀಚೆಗೆ ಕ್ರಿಸ್ ಗೇಲ್, ಎಬಿ ಡಿವಿಲಿಯರ್ಸ್ ಇಲ್ಲವೇ ವಿರಾಟ್ ಕೊಹ್ಲಿ ಆರ್‌ಸಿಬಿ ಪರ ಮೊದಲ ಶತಕ ಬಾರಿಸುತ್ತಿದ್ದರು. ಅದರೆ ಈ ಬಾರಿ ಕನ್ನಡಿಗ ಟ್ರೆಂಡ್ ಬದಲಾಯಿಸಿದ್ದಾನೆ.

5. ಆರ್‌ಸಿಬಿ ಪರ ಮೊದಲ ವಿಕೆಟ್‌ಗೆ ಗರಿಷ್ಠ ರನ್‌ಗಳ ಜತೆಯಾಟ:

ವಿರಾಟ್ ಕೊಹ್ಲಿ ಹಾಗೂ ದೇವದತ್ ಪಡಿಕ್ಕಲ್ ಮೊದಲ ವಿಕೆಟ್‌ಗೆ ಅಜೇಯ 181 ರನ್‌ಗಳ ಜತೆಯಾಟವಾಡುವ ಮೂಲಕ, ಈ ಹಿಂದೆ 2013ರಲ್ಲಿ ಗೇಲ್ ಹಾಗೂ ದಿಲ್ಯ್ಯಾನ್ ಪುಣೆ ವಾರಿಯರ್ಸ್ ವಿರುದ್ದ ಬಾರಿಸಿದ್ದ 167 ರನ್‌ಗಳ ಜತೆಯಾಟದ ದಾಖಲೆಯನ್ನು ಅಳಿಸಿ ಹಾಕಿದರು.