IPL 2020: ಈತನನ್ನು ಕೈಬಿಟ್ಟು ಆರ್‌ಸಿಬಿ ದೊಡ್ಡ ತಪ್ಪು ಮಾಡಿತು ಎಂದ ಪಾರ್ಥಿವ್ ಪಟೇಲ್‌..!

First Published Apr 2, 2021, 6:41 PM IST

ಬೆಂಗಳೂರು: ಚೊಚ್ಚಲ ಐಪಿಎಲ್‌ ಟ್ರೋಫಿ ಕನವರಿಕೆಯಲ್ಲಿರುವ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡ 14ನೇ ಆವೃತ್ತಿಯಲ್ಲಿ ಶತಾಯಗತಾಯ ಕಪ್‌ ಗೆದ್ದು ತೀರುವ ಕನಸು ಕಾಣುತ್ತಿದೆ. ಇದಕ್ಕಾಗಿ ಫೆಬ್ರವರಿಯಲ್ಲಿ ಚೆನ್ನೈನಲ್ಲಿ ನಡೆದ ಆಟಗಾರರ ಹರಾಜಿನಲ್ಲಿ ಸಾಕಷ್ಟು ಅಳೆದು ತೂಗಿ ತನಗೆ ಬೇಕಾದ ಆಟಗಾರರನ್ನು ಬೆಂಗಳೂರು ಮೂಲದ ಫ್ರಾಂಚೈಸಿ ಖರೀದಿಸಿದೆ. ಇದಕ್ಕೂ ಮೊದಲು ಆರ್‌ಸಿಬಿ ಒಂದು ಡಜನ್‌ ಆಟಗಾರರನ್ನು ಉಳಿಸಿಕೊಂಡು 10 ಆಟಗಾರರಿಗೆ ಗೇಟ್‌ಪಾಸ್‌ ನೀಡಿತ್ತು. ಈ ಪೈಕಿ ಓರ್ವ ಆಟಗಾರರನ್ನು ಕೈಬಿಟ್ಟು ಆರ್‌ಸಿಬಿ ದೊಡ್ಡ ತಪ್ಪು ಮಾಡಿತು ಎಂದು ಆರ್‌ಸಿಬಿ ಮಾಜಿ ಕ್ರಿಕೆಟಿಗ ಪಾರ್ಥಿವ್ ಪಟೇಲ್ ಅಭಿಪ್ರಾಯಪಟ್ಟಿದ್ದಾರೆ.