Ind vs SA: ಹಲವು ದಾಖಲೆಗಳಿಗೆ ಸಾಕ್ಷಿಯಾಗಲಿದೆ ಇಂಡೋ-ಆಫ್ರಿಕಾ ಮೊದಲ ಟಿ20 ಪಂದ್ಯ..!
ನವದೆಹಲಿ: 15ನೇ ಆವೃತ್ತಿಯ ಐಪಿಎಲ್ ಟೂರ್ನಿ ಯಶಸ್ವಿಯಾಗಿ ಮುಕ್ತಾಯವಾದ ಬಳಿಕ ಕ್ರಿಕೆಟ್ ಅಭಿಮಾನಿಗಳು ಇದೀಗ ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಅಂತಾರಾಷ್ಟ್ರೀಯ ಟಿ20 ಸರಣಿಯನ್ನು ಕಣ್ತುಂಬಿಕೊಳ್ಳಲು ತುದಿಗಾಲಿನಲ್ಲಿ ನಿಂತಿದ್ದಾರೆ. ಎರಡೂ ತಂಡಗಳು ಸಾಕಷ್ಟು ಬಲಿಷ್ಟವಾಗಿ ಗುರುತಿಸಿಕೊಂಡಿರುವುದರಿಂದಾಗಿ ಜಿದ್ದಾಜಿದ್ದಿನ ಪೈಪೋಟಿಯನ್ನು ನಿರೀಕ್ಷಿಸಲಾಗುತ್ತಿದೆ. ಈ ಪಂದ್ಯದಲ್ಲಿ ಹಲವು ಅಪರೂಪದ ದಾಖಲೆಗಳು ನಿರ್ಮಾಣವಾಗುವ ಸಾಧ್ಯತೆಯಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
100 ಸಿಕ್ಸರ್ ಕ್ಲಬ್ ಸೇರಲು ಪಂತ್‌ಗೆ ಬೇಕಿದೆ 3 ಸಿಕ್ಸ್:
ಟೀಂ ಇಂಡಿಯಾ ಹಂಗಾಮಿ ನಾಯಕ ಹಾಗೂ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಇದುವರೆಗೂ ಎಲ್ಲಾ ಮಾದರಿಯ ಕ್ರಿಕೆಟ್ ಸೇರಿದಂತೆ ಒಟ್ಟು 97 ಸಿಕ್ಸರ್ ಸಿಡಿಸಿದ್ದಾರೆ. ಇಂದಿನ ಪಂದ್ಯದಲ್ಲಿ ಇನ್ನು 3 ಸಿಕ್ಸರ್ ಸಿಡಿಸಿದರೆ, ಪಂತ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 100 ಸಿಕ್ಸ್ ಸಿಡಿಸಿದವರ ಕ್ಲಬ್ ಸೇರ್ಪಡೆಗೊಳ್ಳಲಿದ್ದಾರೆ.
Team India
ವಿಶ್ವದಾಖಲೆ ನಿರ್ಮಿಸಲು ಟೀಂ ಇಂಡಿಯಾಗೆ ಬೇಕಿದೆ ಇನ್ನೊಂದು ಗೆಲುವು:
ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಟೀಂ ಇಂಡಿಯಾ ಇದುವರೆಗೂ ಸತತ 12 ಗೆಲುವುಗಳನ್ನು ದಾಖಲಿಸಿದೆ. ಈ ಮೂಲಕ ಆಫ್ಘಾನಿಸ್ತಾನ ಹಾಗೂ ರೊಮೇನಿಯಾ ತಂಡಗಳ ಜತೆ ಜಂಟಿ ಅಗ್ರಸ್ಥಾನ ಹಂಚಿಕೊಂಡಿದೆ. ಇಂದಿನ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವು ಸಾಧಿಸಿದರೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸತತ 13 ಪಂದ್ಯ ಗೆದ್ದು ವಿಶ್ವದಾಖಲೆ ನಿರ್ಮಿಸಲಿದೆ.
ಕಿವೀಸ್ ದಾಖಲೆ ಸರಿಗಟ್ಟಲು ಭಾರತಕ್ಕೆ ಬೇಕಿದೆ ಇನ್ನೊಂದು ಗೆಲುವು:
ಭಾರತ ತಂಡವು ಇದುವರೆಗೂ ತವರಿನಲ್ಲಿ 40 ಟಿ20 ಗೆಲುವುಗಳನ್ನು ಸಾಧಿಸಿದೆ. ಇನ್ನು ನ್ಯೂಜಿಲೆಂಡ್ ತಂಡವು ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ಇತಿಹಾಸದಲ್ಲಿ ತವರಿನಲ್ಲಿ 41 ಗೆಲುವು ಸಂಪಾಧಿಸಿದೆ. ಇಂದಿನ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವು ಸಾಧಿಸಿದರೆ, ತವರಿನಲ್ಲಿ ಅತಿಹೆಚ್ಚು ಪಂದ್ಯ ಗೆದ್ದ ಕಿವೀಸ್ ದಾಖಲೆ ಸರಿಗಟ್ಟಲಿದೆ.
Hardik Pandya
Hardik Pandya
2 ಸಿಕ್ಸ್ 5 ಬೌಂಡರಿ ಬಾರಿಸಿದರೆ ಎರಡು ದಾಖಲೆ ಹಾರ್ದಿಕ್ ಪಾಂಡ್ಯ ಪಾಲು
ಐಪಿಎಲ್‌ನಲ್ಲಿ ಭರ್ಜರಿ ಪ್ರದರ್ಶನ ತೋರಿದ್ದ ಹಾರ್ದಿಕ್ ಪಾಂಡ್ಯ ಇದುವರೆಗೂ ಮೂರು ಮಾದರಿ ಕ್ರಿಕೆಟ್‌ನಲ್ಲಿ 195 ಬೌಂಡರಿ ಬಾರಿಸಿದ್ದಾರೆ. ಇನ್ನು ಕೇವಲ 5 ಬೌಂಡರಿ ಬಾರಿಸಿದರೆ ಪಾಂಡ್ಯ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 200 ಬೌಂಡರಿ ಬಾರಿಸಿದವರ ಕ್ಲಬ್ ಸೇರ್ಪಡೆಗೊಳ್ಳಲಿದ್ದಾರೆ. ಇನ್ನು ಹಾರ್ದಿಕ್ ಪಾಂಡ್ಯ ಇದುವರೆಗೂ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 98 ಸಿಕ್ಸರ್ ಸಿಡಿಸಿದ್ದು, ಇನ್ನು 2 ಸಿಕ್ಸರ್ ಬಾರಿಸಿದರೆ, 100 ಸಿಕ್ಸರ್ ಬಾರಿಸಿದ ಸಾಧನೆ ಮಾಡಲಿದ್ದಾರೆ.