ಟೀಂ ಇಂಡಿಯಾದ ಈ 5 ಕ್ರಿಕೆಟಿಗರ ವೃತ್ತಿಬದುಕು ಬಹುತೇಕ ಅಂತ್ಯ..!

First Published 8, Apr 2020, 7:30 PM

ಭಾರತೀಯರ ಪಾಲಿಗೆ ಕ್ರಿಕೆಟ್ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿದೆ. ಭಾರತದಲ್ಲಿ ಅದು ಟೆಸ್ಟ್ ಕ್ರಿಕೆಟ್ ಆಗಿರಲಿ ಇಲ್ಲವೇ ಟಿ20 ಕ್ರಿಕೆಟ್ ಆಗಿರಲಿ ಪ್ರೇಕ್ಷಕರ ಕೊರೆತೆಯನ್ನು ಅದು ಎದುರಿಸಿಲ್ಲ. ಕ್ರಿಕೆಟನ್ನು ಭಾರತದಲ್ಲಿ ಒಂದು ಧರ್ಮದಂತೆ ಆರಾಧಿಸುವವರು ಇದ್ದಾರೆ.
ಇನ್ನು ಟೀಂ ಇಂಡಿಯಾದಲ್ಲಿ ಸ್ಥಾನಗಿಟ್ಟಿಸಿಕೊಳ್ಳುವುದು ಹಾಗೆಯೇ ಸ್ಥಾನ ಉಳಿಸಿಕೊಳ್ಳುವುದು ಈಗ ಸುಲಭದ ಮಾತಾಗಿ ಉಳಿದಿಲ್ಲ. ಅಷ್ಟರಮಟ್ಟಿಗೆ ಕ್ರಿಕೆಟ್ ಸ್ಪರ್ಧಾತ್ಮಕತೆ ಹುಟ್ಟುಹಾಕಿದೆ. ಯುವಕ್ರಿಕೆಟಿಗರು ಟೀಂ ಇಂಡಿಯಾ ಜೆರ್ಸಿ ತೊಡಲು ಸ್ಟಾರ್ ಆಟಗಾರರಿಗೆ ಪೈಪೋಟಿ ನೀಡುತ್ತಿದ್ದಾರೆ. ಹೀಗಾಗಿ ಒಂದು ಕಾಲದಲ್ಲಿ ಟೀಂ ಇಂಡಿಯಾದಲ್ಲಿ ಮಿಂಚಿದ್ದ ಆಟಗಾರರು ಇದೀಗ ತಂಡಕ್ಕೆ ಕಮ್‌ಬ್ಯಾಕ್ ಮಾಡಲು ಪರದಾಡುತ್ತಿದ್ದಾರೆ. ಹೀಗಾಗಿ ಟೀಂ ಇಂಡಿಯಾದ ಕೆಲ ಆಟಗಾರರ ವೃತ್ತಿ ಬದುಕು ಮುಗಿಯಿತೇ ಎನ್ನುವ ಸಂಶಯ ದಟ್ಟವಾಗಲಾರಂಭಿಸಿದೆ. ಅಂತಹ 5 ಆಟಗಾರರ ಪಟ್ಟಿ ಇಲ್ಲಿದೆ ನೋಡಿ. 

1. ಕೇದಾರ್ ಜಾಧವ್

1. ಕೇದಾರ್ ಜಾಧವ್

ಆಲ್ರೌಂಡರ್ ಆಗಿ ತಂಡಕ್ಕೆ ಎಂಟ್ರಿಕೊಟ್ಟು ಮಿಂಚಿದ್ದ ಮಹಾರಾಷ್ಟ್ರ ಮೂಲದ ಕೇದಾರ್ ಜಾಧವ್, ಆ ಬಳಿಕ ಅಸ್ಥಿರ ಪ್ರದರ್ಶನದಿಂದಾಗಿ ತಂಡದಿಂದ ಹೊರಬಿದ್ದಿದ್ದಾರೆ. ಇದೀಗ ಹಾರ್ದಿಕ್ ಪಾಂಡ್ಯ, ಶಿವಂ ದುಬೆ ಹಾಗೂ ಶಾರ್ದೂಲ್ ಠಾಕೂರ್ ಮಿಂಚುತ್ತಿದ್ದು, ಕೇದಾರ್ ಜಾಧವ್ ಕಮ್‌ಬ್ಯಾಕ್ ಬಹುತೇಕ ಕಷ್ಟ.

2. ಸುರೇಶ್ ರೈನಾ

2. ಸುರೇಶ್ ರೈನಾ

ಧೋನಿ ಟೀಂ ಇಂಡಿಯಾ ನಾಯಕರಾಗಿದ್ದಾಗ ಮಧ್ಯಮ ಕ್ರಮಾಂಕದಲ್ಲಿ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿದ್ದರು. 2011ರ ವಿಶ್ವಕಪ್ ಗೆಲುವಿನಲ್ಲಿ ರೈನಾ ಬ್ಯಾಟಿಂಗ್ ಹಾಗೂ ಫೀಲ್ಡಿಂಗ್‌ನಲ್ಲಿ ಮಹತ್ವದ ಪಾತ್ರವಹಿಸಿದ್ದರು. 2018ರಲ್ಲಿ ಕೊನೆಯ ಬಾರಿಗೆ ಬ್ಲೂ ಜೆರ್ಸಿ ತೊಟ್ಟಿದ್ದ ರೈನಾ ಮುಂಬರುವ ಐಪಿಎಲ್‌ನಲ್ಲಿ ಮಿಂಚಿ 2020ರ ಟಿ20 ವಿಶ್ವಕಪ್‌ನಲ್ಲಿ  ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವ ಲೆಕ್ಕಾಚಾರದಲ್ಲಿದ್ದಾರೆ. ಸದ್ಯಕ್ಕೆ ಅದು ಕಷ್ಟ.

3. ಪಾರ್ಥಿವ್ ಪಟೇಲ್

3. ಪಾರ್ಥಿವ್ ಪಟೇಲ್

2002ರಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿ ಗಮನ ಸೆಳೆದಿದ್ದ ಪಾರ್ಥಿವ್ ಪಟೇಲ್, ಧೋನಿ ತಂಡಕ್ಕೆ ಎಂಟ್ರಿಕೊಟ್ಟ ಬಳಿಕ ಪಟೇಲ್ ಸೈಡ್‌ಲೈನ್ ಆದರು. ಇದೀಗ ರಿಷಭ್ ಪಂತ್, ಪಾರ್ಥಿವ್ ಪಟೇಲ್ ಹಾಗೂ ಕೆ.ಎಲ್ ರಾಹುಲ್ ವಿಕೆಟ್ ಕೀಪಿಂಗ್‌ ಹಾಗೂ ಬ್ಯಾಟಿಂಗ್‌ನಲ್ಲಿ ಮಿಂಚುತ್ತಿದ್ದಾರೆ. ಹೀಗಾಗಿ ಪಟೇಲ್ ರಾಷ್ಟ್ರೀಯ ತಂಡಕ್ಕೆ ಕಮ್‌ಬ್ಯಾಕ್ ಮಾಡುವುದು ಕಷ್ಟ.

4. ಹರ್ಭಜನ್ ಸಿಂಗ್

4. ಹರ್ಭಜನ್ ಸಿಂಗ್

ಹರ್ಭಜನ್ ಸಿಂಗ್ ಕ್ರಿಕೆಟ್ ಮೈದಾನದಲ್ಲಿ ಕಾಣಿಸಿಕೊಳ್ಳುವುದಕ್ಕಿಂತ ಹೆಚ್ಚಾಗಿ ಈಗೀಗ ಕಾಮೆಂಟ್ರಿನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. 1998ರಲ್ಲಿ ರಾಷ್ಟ್ರೀಯ ತಂಡ ಕೂಡಿಕೊಂಡಿದ್ದ ಭಜ್ಜಿ ಅಮೋಘ ಪ್ರದರ್ಶನದ ಮೂಲಕ ದಶಕಗಳ ಕಾಲ ಟೀಂ ಇಂಡಿಯಾದಲ್ಲಿ ಮಿಂಚಿದ್ದರು. ಆದರೆ ಅಶ್ವಿನ್, ಚಹಲ್, ಕುಲ್ದೀಪ್ ತಂಡ ಕೂಡಿಕೊಂಡ ಬಳಿಕ ಭಜ್ಜಿ ರಾಷ್ಟ್ರೀಯ ತಂಡದಿಂದ ಹೊರಗುಳಿದಿದ್ದಾರೆ. 2016ರಲ್ಲಿ ಕೊನೆಯ ಬಾರಿಗೆ ಟೀಂ ಇಂಡಿಯಾದಲ್ಲಿ ಕಾಣಿಸಿಕೊಂಡಿದ್ದ ಭಜ್ಜಿ ಇದೀಗ ಐಪಿಎಲ್‌ಗಷ್ಟೇ ಸೀಮಿತವಾಗಿದ್ದಾರೆ.

5. ಸ್ಟುವರ್ಟ್ ಬಿನ್ನಿ

5. ಸ್ಟುವರ್ಟ್ ಬಿನ್ನಿ

ಬಾಂಗ್ಲಾದೇಶ ವಿರುದ್ಧ ಕೇವಲ 4 ರನ್ ನೀಡಿ 6 ವಿಕೆಟ್ ಕಬಳಿಸಿ ಮಿಂಚಿದ್ದ ಕರ್ನಾಟಕ ಮೂಲದ ಸ್ಟುವರ್ಟ್ ಬಿನ್ನಿ, ಆ ಬಳಿಕ ತಂಡದ ನಂಬಿಕೆ ಉಳಿಸಿಕೊಳ್ಳುವಂತಹ ಆಟವಾಡಲು ಬಿನ್ನಿ ವಿಫಲರಾದರು. ಇಂತಹ ಸಂದರ್ಭದಲ್ಲೇ ಎಂಟ್ರಿ ಕೊಟ್ಟ ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಅದ್ಭುತ ಪ್ರದರ್ಶನ ತೋರುವ ಮೂಲಕ ತಮ್ಮ ಸ್ಥಾನ ಭದ್ರಪಡಿಸಿಕೊಂಡರು.

loader