ಭಾವೀ ಪತ್ನಿಯೊಂದಿಗೆ ಹೋಳಿಯಾಚರಿಸಿದ ಹಾರ್ದಿಕ್ ಪಾಂಡ್ಯ
ಅಲ್ರೌಂಡರ್ ಹಾರ್ದಿಕ್ ಪಾಂಡ್ಯ ಸುಮಾರು 5 ತಿಂಗಳ ನಂತರ ಮತ್ತೆ ಕ್ರಿಕೆಟ್ ತಂಡಕ್ಕೆ ಮರಳಿದ್ದಾರೆ. ಸ್ಫೋಟಕ ಸೆಂಚುರಿ ಬಾರಿಸಿ ಸಖತ್ ಫಾರ್ಮ್ನಲ್ಲಿದ್ದಾರೆ ಹಾರ್ದಿಕ ಪಾಂಡ್ಯ. ಐಪಿಲ್ ಟೂರ್ನಿಮೆಂಟ್ನಲ್ಲಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಆಡುವ ಇವರು ತಾವು ಮದುವೆಯಾಗುವ ಹುಡುಗಿ ಮತ್ತು ಫ್ಯಾಮಿಲಿ ಜೊತೆ ಬಣ್ಣದ ಹಬ್ಬ ಹೋಳಿಯನ್ನು ಆಚರಿಸಿದ ಪೋಟೋಗಳನ್ನು ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡು ವಿಶ್ ಮಾಡಿದ್ದಾರೆ.
ಸಹೋದರ ಕೃನಾಲ್ ಪಾಂಡ್ಯ ಜೊತೆ ಹೋಳಿ ಹಬ್ಬ ಆಚರಿಸಿದ ಹಾರ್ದಿಕ್ ಪಾಂಡ್ಯ.
ಕೃನಾಲ್ ಪಾಂಡ್ಯರ ಪತ್ನಿ ಪನ್ಕುರಿ ಜೊತೆ ಹಾರ್ದಿಕ್ ಪಾಂಡ್ಯ ಮತ್ತು ಫಿಯಾನ್ಸಿ ನಟಾಸಾ ಸ್ಟಾಂಕೋವಿಕ್.
ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ದಿನಗಳ ಪಂದ್ಯಕ್ಕೆ ಹಾರ್ದಿಕ್ ಆಡಲಿದ್ದಾರೆ.
ಹಾರ್ದಿಕ್ ಹೋಳಿಯಾಡಿದ ಫೋಟೋಗಳನ್ನು ಟ್ವೀಟರ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಸೋಷಿಯಲ್ ಮೀಡಿಯಾ ಮೂಲಕವೇ ಅಭಿಮಾನಿಗಳಿಗೆ ಹಾರ್ದಿಕ್ ಹಬ್ಬದ ಶುಭಾಶಯ ಹೇಳಿದ್ದಾರೆ.
ಭಾವೀ ಪತ್ನಿ, ನಾಯಿಯೊಂದಿಗೆ ಹಾರ್ದಿಕ್.
ಪಾಂಡ್ಯ ಫ್ಯಾಮಿಲಿ ಸೇಲ್ಫಿಯೊಂದಿಗೆ.
ಪಾಂಡ್ಯ ಬ್ರದರ್ಸ್ ಇಬ್ಬರೂ ಐಪಿಲ್ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪರ ಆಡುತ್ತಾರೆ.
ಹಾರ್ದಿಕ್ ಪಾಂಡ್ಯ ವ್ಯಾಲೆಂಟೈನ್ ದಿನದಂದೂ ಶೇರ್ ಮಾಡಿಕೊಂಡಿದರು ಈ ಫೋಟೊ.
ಹಾರ್ದಿಕ್ ನಾಟಾಸ ನಿಶ್ಚಿತಾರ್ಥ ನೆಡೆದಿದ್ದು ಕಳೆದ ವರ್ಷ.