ಕ್ರಿಕೆಟಿಗ ಯುವರಾಜ್ ಸಿಂಗ್ ಮನೆಯ ಒಂದು ಝಲಕ್
ಭಾರತ ಕ್ರಿಕೆಟ್‌ನಲ್ಲಿ ಯುವರಾಜ್ ಸಿಂಗ್ ಹೆಸರು ಯಾರು ಕೇಳಿಲ್ಲ ಹೇಳಿ? ಕ್ರಿಕೆಟ್ ಜಗತ್ತಿನಲ್ಲೇ ಸಾಕಷ್ಟು ಹೆಸರು ಮಾಡಿದ್ದಾರೆ. ಯುವಿ ಆಟದ ಸ್ಟೈಲ್‌ನಂತೆ ಅವರ ಮನೆ ಕೂಡ ಮನಮೋಹಕವಾಗಿದೆ. ಅವರು ವರ್ಲಿಯ ಅಪಾರ್ಟ್ಮೆಂಟ್‌ನಲ್ಲಿ ವಾಸಿಸುವುದು. ಅಲ್ಲಿಯೇ ವಿರಾಟ್ ಮತ್ತು ಅನುಷ್ಕಾ ಸಹ ವಾಸಿಸುತ್ತಿದ್ದಾರೆ. ಕೊಹ್ಲಿಯ ಈ ಅಪಾರ್ಟ್‌ಮೆಂಟ್‌ನಲ್ಲಿ ಮನೆ ಕೊಂಡ ನಂತರ ಯುವರಾಜ್ 2018ರಲ್ಲಿ ಈ ಮನೆಯನ್ನು ಖರೀದಿಸಿದರು. ಆದರೆ, ಯುವರಾಜ್ ಅವರ ಮನೆ ಕೊಹ್ಲಿಗಿಂತ ಹೆಚ್ಚು ದುಬಾರಿಯಾಗಿದೆ. ಅವರ ಮನೆಯ ಒಂದು ಚಿಕ್ಕ ಝಲಕ್ ಇಲ್ಲಿ.
2018ರಲ್ಲಿ ಮುಂಬೈನ ವರ್ಲಿಯಲ್ಲಿ 2 ಫ್ಲ್ಯಾಟ್‌ಗಳನ್ನು ಖರೀದಿಸಿದ ಮಾಜಿ ಭಾರತೀಯ ಕ್ರಿಕೆಟಿಗ ಯುವರಾಜ್ ಸಿಂಗ್.
ವಿರಾಟ್ ಅವರ ಮನೆಯ ಮೌಲ್ಯ 34 ಕೋಟಿ ರೂ ಆದರೆ, ಯುವರಾಜ್ ತಮ್ಮ ಮನೆಗೆ 64 ಕೋಟಿ ರೂ. ಖರ್ಚು ಮಾಡಿದ್ದಾರೆ.
ವರ್ಲಿಯ ಓಂಕರ್ ಟವರ್ಸ್‌ನಲ್ಲಿ ವಾಸಿಸುವ ವಿರಾಟ್ ಮತ್ತು ಯುವರಾಜ್.
ಯುವಿಯ ಈ ಮನೆ 29ನೇ ಮಹಡಿ ಹಾಗೂ ಕೊಹ್ಲಿಯ ಮನೆ 34ನೇ ಮಹಡಿಯಲ್ಲಿದೆ.
ಉಬರ್ ಪ್ಲಸ್ ಅಪಾರ್ಟ್ಮೆಂಟ್‌ಗಾಗಿ ಪ್ರತಿ ಸ್ವೈರ್ ಫೀಟ್‌ಗೆ ಯುವಿ ತೆತ್ತ ಹಣ 40,000 ರೂ.
ವಿರಾಟ್ 2013ರಲ್ಲಿ ಮನೆಯನ್ನು ಖರೀದಿಸಿದ್ದರೂ, ಆದರೆ ಕಟ್ಟಡವು ಸಂಪೂರ್ಣವಾಗಿ ಪೂರ್ಣಗೊಂಡಿದ್ದು 2018ರಲ್ಲಿ .
ಯುವಿ-ಕೊಹ್ಲಿ ಅಪಾರ್ಟ್ಮೆಂಟ್‌ನಿಂದ ಕಾಣುವ ಸಮುದ್ರ.
2011ರ ನಂತರ, ಯುವರಾಜ್ ಯಾವುದೇ ಅದ್ಭುತ ಇನ್ನಿಂಗ್ಸ್ ಆಡದಿರಬಹುದು, ಆದರೆ ಐಪಿಎಲ್ ಮೂಲಕ ಅವರ ಗಳಿಕೆಯ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ.
ಯುವರಾಜ್ ಟಿ -10 ಲೀಗ್ ಮತ್ತು ಇತರ ವಿಧಾನಗಳಲ್ಲಿ ಉತ್ತಮವಾಗಿ ಗಳಿಸುತ್ತಿದ್ದಾರೆ.