ಸ್ಕೂಲ್ ಕ್ರಶ್‌ಗೆ ಪ್ರೊಮೋಷನ್ ಕೊಟ್ಟ ಸಿಎಸ್‌ಕೆ ವೇಗಿ ತುಷಾರ್ ದೇಶಪಾಂಡೆ..! ಫೋಟೋ ವೈರಲ್
ಮುಂಬೈ: ಚೆನ್ನೈ ಸೂಪರ್ ಸೂಪರ್ ಕಿಂಗ್ಸ್ ತಂಡದ ಮಾರಕ ವೇಗಿ ತುಷಾರ್ ದೇಶಪಾಂಡೆ ತಮ್ಮ ಬಹುಕಾಲದ ಗೆಳತಿ ಅಂಜುಮ್ ಖಾನ್ ಅವರನ್ನು ಮದುವೆಯಾಗಿದ್ದಾರೆ. ಶಾಲಾ ದಿನಗಳ ಕ್ರಶ್ ಆಗಿದ್ದ ನಭಾ ಗದ್ದಮವಾರ್, ಇದೀಗ ತುಷಾರ್ ದೇಶಪಾಂಡೆ ಅವರ ಕೈಹಿಡಿದಿದ್ದಾರೆ. ಹೀಗಿವೆ ನೋಡಿ ತುಷಾರ್ ದೇಶಪಾಂಡೆ ಹಾಗೂ ನಭಾ ಗದ್ದಮವಾರ್ ಅವರ ನಿಶ್ಚಿತಾರ್ಥದ ಫೋಟೋಗಳು.

16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಮಾರಕ ದಾಳಿ ನಡೆಸುವ ಮೂಲಕ ಮಿಂಚಿದ್ದ ಸಿಎಸ್‌ಕೆ ವೇಗಿ ತುಷಾರ್ ದೇಶಪಾಂಡೆ, ಇದೀಗ ಹೊಸ ಇನಿಂಗ್ಸ್ ಆರಂಭಿಸಿದ್ದಾರೆ.
ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಡ್ಯಾಡಿ ಆರ್ಮಿಗೆ ಇದೀಗ ಹೊಸ ಸೇರ್ಪಡೆಯಾಗಿದ್ದು, ಸಿಎಸ್‌ಕೆ ತಂಡದ ಮಾರಕ ವೇಗಿ ತುಷಾರ್ ದೇಶಪಾಂಡೆ ತಮ್ಮ ಬಹುಕಾಲದ ಗೆಳತಿ ನಭಾ ಗದ್ದಮವಾರ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ಇತ್ತೀಚೆಗಷ್ಟೇ ಸಿಎಸ್‌ಕೆ ಸ್ಪೋಟಕ ಆರಂಭಿಕ ಬ್ಯಾಟರ್ ಋತುರಾಜ್ ಗಾಯಕ್ವಾಡ್, ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇದೀಗ ತುಷಾರ್ ದೇಶಪಾಂಡೆ ಕೂಡಾ ಅದೇ ಹಾದಿ ಹಿಡಿದಿದ್ದಾರೆ.
ಬಾಲ್ಯದ ಗೆಳತಿ ನಭಾ ಗದ್ದಮವಾರ್ ಅವರು ತುಷಾರ್ ದೇಶಪಾಂಡೆ ಅವರ ಶಾಲಾ ದಿನದ ಕ್ರಶ್ ಅಗಿದ್ದರು. ತಮ್ಮ ಪ್ರೀತಿಯನ್ನು ಇದೀಗ ಮತ್ತೊಂದು ಹಂತಕ್ಕೆ ಕೊಂಡೊಯ್ಯುವಲ್ಲಿ ಈ ಜೋಡಿ ಯಶಸ್ವಿಯಾಗಿದೆ.
ತುಷಾರ್ ದೇಶಪಾಂಡೆ ಗೆಳತಿ ಹಾಗೂ ತಮ್ಮ ಫೋಟೋದ ಜತೆಗೆ ಇನ್‌ಸ್ಟಾಗ್ರಾಂನಲ್ಲಿ ನನ್ನ ಶಾಲಾ ದಿನದ ಕ್ರಶ್‌ನಿಂದ ಇದೀಗ ಭಾವಿ ಪತ್ನಿಯಾಗಿ ಬಡ್ತಿ ಪಡೆದಿದ್ದಾಳೆ. #onelove #engaged #dreamscometrue. ಕನಸು ನನಸಾದ ಕ್ಷಣ. ಜೈ ಭಜರಂಗಬಲಿ ಎಂದು ತುಷಾರ್ ದೇಶಪಾಂಡೆ ಬರೆದುಕೊಂಡಿದ್ದಾರೆ.
ತುಷಾರ್ ದೇಶಪಾಂಡೆ ಎಂಗೇಜ್‌ಮೆಂಟ್ ಕಾರ್ಯಕ್ರಮದಲ್ಲಿ ಸಹ ಆಟಗಾರ ಶಿವಂ ದುಬೆ ತಮ್ಮ ಪತ್ನಿ ಅಂಜುಮ್ ಖಾನ್ ಜತೆ ಭಾಗವಹಿಸಿ, ನೂತನ ಜೋಡಿಗೆ ಶುಭ ಹಾರೈಸಿದರು.
2023ರ ಐಪಿಎಲ್ ಟೂರ್ನಿಯಲ್ಲಿ ಮಾರಕ ದಾಳಿ ನಡೆಸಿದ್ದ ತುಷಾರ್ ದೇಶಪಾಂಡೆ 16 ಪಂದ್ಯಗಳನ್ನಾಡಿ ಒಟ್ಟು 21 ವಿಕೆಟ್ ಕಬಳಿಸುವ ಮೂಲಕ ಎಂ ಎಸ್ ಧೋನಿ ಪಡೆ ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಮಹತ್ತರ ಪಾತ್ರವನ್ನು ವಹಿಸಿದ್ದರು.
2020ರಲ್ಲಿ ಐಪಿಎಲ್ ಟೂರ್ನಿಗೆ ಪಾದಾರ್ಪಣೆ ಮಾಡಿದ್ದ ತುಷಾರ್ ದೇಶಪಾಂಡೆ, ಆರಂಭದಲ್ಲಿ ಮಿಂಚಿರಲಿಲ್ಲ. ಆದರೆ ಈ ಆವೃತ್ತಿಯಲ್ಲಿ ಸಿಕ್ಕ ಅವಕಾಶ ಸದುಪಯೋಗ ಪಡಿಸಿಕೊಳ್ಳಲು ಯಶಸ್ವಿಯಾಗಿದ್ದಾರೆ. ತುಷಾರ್ ದೇಶಪಾಂಡೆ ಇದುವರೆಗೂ 23 ಪಂದ್ಯಗಳನ್ನಾಡಿ 25 ವಿಕೆಟ್ ಕಬಳಿಸಿದ್ದಾರೆ.