Love story: ಪೋಲಿಸ್ ಕಮಿಷನರ್ ಮಗಳಿಗೆ ಬೋಲ್ಡ್ ಆದ ಕ್ರಿಕೆಟರ್ ಮಯಾಂಕ್ ಅಗರ್ವಾಲ್
ಬಹುನಿರೀಕ್ಷಿತ 15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಮಯಾಂಕ್ ಅಗರ್‌ವಾಲ್ ನೇತೃತ್ವದ ಪಂಜಾಬ್ ಕಿಂಗ್ಸ್ ತಂಡವು ಭರ್ಜರಿ ಗೆಲುವು ದಾಖಲಿಸುವ ಮೂಲಕ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಎದುರು ಪಂಜಾಬ್ ತಂಡವು 5 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಸಂದರ್ಭದಲ್ಲಿ ಪಂಜಾಬ್ ಕಿಂಗ್ಸ್ ತಂಡದ ನಾಯಕ ಮಯಾಂಕ್ ಅಗರ್‌ವಾಲ್ ಕುರಿತಾದ ಇಂಟ್ರೆಸ್ಟಿಂಗ್ ಸಂಗತಿಗಳು ನಿಮ್ಮ ಮುಂದಿಡುತ್ತಿದ್ದೇವೆ ನೋಡಿ
ಮಯಾಂಕ್ ಅಗರ್‌ವಾಲ್ ಐಪಿಎಲ್ ನಾಯಕರಾಗಿ ಮೊದಲ ಪಂದ್ಯದಲ್ಲೇ ಭರ್ಜರಿ ಆರಂಭ ಪಡೆದಿದ್ದಾರೆ. ಆರ್‌ಸಿಬಿ ಎದುರಿನ ಮೊದಲ ಪಂದ್ಯದಲ್ಲಿ ಮಯಾಂಕ್ ನೇತೃತ್ವದ ಪಂಜಾಬ್ ತಂಡವು 5 ವಿಕೆಟ್‌ಗಳ ಜಯ ಸಾಧಿಸಿದೆ.
15ನೇ ಆವೃತ್ತಿಯ ಐಪಿಎಲ್ ಟೂರ್ನಿಗೂ ಮುನ್ನ ಕೆ.ಎಲ್. ರಾಹುಲ್ ಪಂಜಾಬ್ ಕಿಂಗ್ಸ್ ತಂಡವನ್ನು ತೊರೆದಿದ್ದರಿಂದ, ಮತ್ತೋರ್ವ ಕನ್ನಡಿಗ ಮಯಾಂಕ್ ಅಗರ್‌ವಾಲ್‌ಗೆ ಪಂಜಾಬ್ ಫ್ರಾಂಚೈಸಿಯು ನಾಯಕತ್ವ ಪಟ್ಟ ಕಟ್ಟಿದೆ
ಇತ್ತೀಚೆಗೆ, ಐಪಿಎಲ್ ಫ್ರಾಂಚೈಸಿ ಪಂಜಾಬ್ ಕಿಂಗ್ಸ್ ಮಯಾಂಕ್ ಅಗರ್ವಾಲ್ ಅವರನ್ನು ಇಂಡಿಯನ್ ಪ್ರೀಮಿಯರ್ ಲೀಗ್‌ನ 15 ಸೀಸನ್‌ಗಳಿಗೆ 12 ಕೋಟಿ ರೂ.ಗೆ ಉಳಿಸಿಕೊಂಡಿತ್ತು. ಮಯಾಂಕ್ 2018 ರಿಂದ ಪಂಜಾಬ್ ಕಿಂಗ್ಸ್‌ನೊಂದಿಗೆ ಸಂಬಂಧ ಹೊಂದಿದ್ದಾರೆ. ಅವರು ಐಪಿಎಲ್‌ನ 95 ಪಂದ್ಯಗಳಲ್ಲಿ 2135 ರನ್ ಗಳಿಸಿದ್ದಾರೆ.
ವರದಿಗಳ ಪ್ರಕಾರ 2021 ರ ಹೊತ್ತಿಗೆ ಮಯಾಂಕ್ ಅಗರ್ವಾಲ್ ಅವರ ನಿವ್ವಳ ಮೌಲ್ಯವು 40 ಕೋಟಿ ರೂ ಆಗಿದೆ. ಅವರು 4 ಜೂನ್ 2018 ರಂದು ಆಶಿತಾ ಸೂದ್ ಎಂಬ ಹುಡುಗಿಯನ್ನು ವಿವಾಹವಾದರು. ಅವರ ತಂದೆ ಪ್ರವೀಣ್ ಸೂದ್ ಬೆಂಗಳೂರಿನಲ್ಲಿ ಪೊಲೀಸ್ ಕಮಿಷನರ್ ಆಗಿದ್ದಾರೆ.
ಮಯಾಂಕ್ ಮತ್ತು ಆಶಿತಾ ಅವರ ಲವ್ ಸ್ಟೋರಿ ತುಂಬಾ ರೋಮ್ಯಾಂಟಿಕ್ ಆಗಿದೆ. ಜನವರಿ 2018 ರಲ್ಲಿ, ಲಂಡನ್‌ನ ಥೇಮ್ಸ್ ನದಿಯ ದಡದಲ್ಲಿ ನಿರ್ಮಿಸಲಾದ ಏರಿಯಲ್ ಸ್ವಿಂಗ್ ಲಂಡನ್ ಐನಲ್ಲಿ ಆಶಿತಾ ಅವರಿಗೆ ಪ್ರಪೋಸ್ ಮಾಡಿದ್ದರು. ಇದಾದ ನಂತರ ಇಬ್ಬರೂ ಜೂನ್‌ನಲ್ಲಿ ಮದುವೆಯಾದ್ದರು.
ಆಶಿತಾ ಸೂದ್ ನೋಡಲು ತುಂಬಾ ಸುಂದರವಾಗಿದ್ದು, ವೃತ್ತಿಯಲ್ಲಿ ವಕೀಲೆ. ಬೆಂಗಳೂರಿನಲ್ಲೇ ಕಾನೂನು ಓದಿದ್ದಾರೆ. ಮಯಾಂಕ್ ಆಗಾಗ್ಗೆ ತನ್ನ ಪತ್ನಿಯೊಂದಿಗಿನ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಾರೆ. ಐಪಿಎಲ್ ಸಮಯದಲ್ಲಿ ಆಶಿತಾ ಕೂಡ ತನ್ನ ಪತಿಗಾಗಿ ಚಿಯರ್ ಮಾಡಲು ಕಾಣಿಸಿಕೊಳ್ಳುತ್ತಾರೆ.
ಮೊದಲ ಬಾರಿಗೆ ಅವರಿಬ್ಬರೂ ದೀಪಾವಳಿಯ ಸಮಯದಲ್ಲಿ ಕುಟುಂಬ ಸಮಾರಂಭದಲ್ಲಿ ಭೇಟಿಯಾದರು.ಇಬ್ಬರ ಸ್ನೇಹ ಕ್ರಮೇಣ ಪ್ರೀತಿಗೆ ತಿರುಗಿತ್ತು. 7 ವರ್ಷಗಳ ಕಾಲ ಪರಸ್ಪರ ಸಂಬಂಧದಲ್ಲಿದ್ದ ನಂತರ, ಇಬ್ಬರೂ ಮದುವೆಯಾಗಲು ನಿರ್ಧರಿಸಿದರು.
ಆಶಿತಾ ಅವರನ್ನು ಮದುವೆಯಾದ ನಂತರ ಮಯಾಂಕ್ ಅಗರ್ವಾಲ್ ಅವರ ಅದೃಷ್ಟ ಬದಲಾಯಿತು, ಅವರು 2018 ರಲ್ಲಿ ಭಾರತ ತಂಡದಲ್ಲಿ ಆಡುವ ಅವಕಾಶವನ್ನು ಪಡೆದರು. ಅವರು 26 ಡಿಸೆಂಬರ್ 2018 ರಂದು ಮೆಲ್ಬೋರ್ನ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ತಮ್ಮ ಚೊಚ್ಚಲ ಟೆಸ್ಟ್ ಪಂದ್ಯವನ್ನು ಆಡಿದರು.
ಮಯಾಂಕ್ ಅಗರ್ವಾಲ್ ಅವರ ಇದುವರೆಗಿನ ಕ್ರಿಕೆಟ್ ವೃತ್ತಿಜೀವನದಲ್ಲಿ ಭಾರತ ತಂಡಕ್ಕಾಗಿ 16 ಟೆಸ್ಟ್ ಪಂದ್ಯಗಳಲ್ಲಿ 1294 ರನ್ ಗಳಿಸಿದ್ದಾರೆ. ಇದರಲ್ಲಿ ಅವರು 4 ಶತಕ ಮತ್ತು 5 ಅರ್ಧ ಶತಕಗಳನ್ನು ಹೊಂದಿದ್ದಾರೆ. ಅದೇ ಸಮಯದಲ್ಲಿ, ಅವರು ಭಾರತಕ್ಕಾಗಿ 5 ODIಗಳಲ್ಲಿ 86 ರನ್ ಗಳಿಸಿದ್ದಾರೆ.