MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Sports
  • Cricket
  • IPL Auction ಆಟಗಾರರ ರಿಲೀಸ್ ಬಳಿಕ ಮಿನಿ ಐಪಿಎಲ್ ಹರಾಜಿಗೆ 10 ಫ್ರಾಂಚೈಸಿ ಬಳಿ ಉಳಿದಿರುವ ಹಣವೆಷ್ಟು..?

IPL Auction ಆಟಗಾರರ ರಿಲೀಸ್ ಬಳಿಕ ಮಿನಿ ಐಪಿಎಲ್ ಹರಾಜಿಗೆ 10 ಫ್ರಾಂಚೈಸಿ ಬಳಿ ಉಳಿದಿರುವ ಹಣವೆಷ್ಟು..?

ಬೆಂಗಳೂರು(ನ.16): ಬಹುನಿರೀಕ್ಷಿತ 2023ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಆರಂಭಕ್ಕೆ ಸಿದ್ದತೆಗಳು ಆರಂಭವಾಗಿವೆ. 15ನೇ ಆವೃತ್ತಿಯ ಐಪಿಎಲ್ ಟೂರ್ನಿಗೂ ಮುನ್ನ ಇದೇ ಡಿಸೆಂಬರ್ 23ರಂದು ಕೊಚ್ಚಿಯಲ್ಲಿ ಆಟಗಾರರ ಮಿನಿ ಹರಾಜು ನಡೆಯಲಿದೆ. ಹೀಗಾಗಿ ನವೆಂಬರ್ 15ಕ್ಕೂ ಮುನ್ನ ಆಟಗಾರರ ರಿಲೀಸ್ ಹಾಗೂ ರೀಟೈನ್ ಮಾಡಿಕೊಳ್ಳಲು ಐಪಿಎಲ್ ಆಡಳಿತ ಮಂಡಳಿ ಅವಕಾಶ ನೀಡಿತ್ತು. ಹೀಗಾಗಿ ಎಲ್ಲಾ ಫ್ರಾಂಚೈಸಿಗಳು ಸಾಕಷ್ಟು ಅಳೆದು-ತೂಗಿ ತಮಗೆ ಬೇಕಾದ ಆಟಗಾರರನ್ನು ಉಳಿಸಿಕೊಂಡು, ಉಳಿದ ಆಟಗಾರರನ್ನು ರಿಲೀಸ್ ಮಾಡಿದೆ. ಹೀಗಾಗಿ ಮಿನಿ ಹರಾಜಿಗೂ ಮುನ್ನ ಎಲ್ಲಾ 10 ಫ್ರಾಂಚೈಸಿಗಳ ಬಳಿ ಉಳಿದಿರುವ ಹಣವೆಷ್ಟು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ... 

2 Min read
Author : Naveen Kodase
Published : Nov 16 2022, 03:53 PM IST
Share this Photo Gallery
  • FB
  • TW
  • Linkdin
  • Whatsapp
110
10. ಕೋಲ್ಕತಾ ನೈಟ್ ರೈಡರ್ಸ್‌: 7.05 ಕೋಟಿ ರುಪಾಯಿ

10. ಕೋಲ್ಕತಾ ನೈಟ್ ರೈಡರ್ಸ್‌: 7.05 ಕೋಟಿ ರುಪಾಯಿ

ಎರಡು ಬಾರಿಯ ಚಾಂಪಿಯನ್‌ ಕೋಲ್ಕತಾ ನೈಟ್ ರೈಡರ್ಸ್ ತಂಡವು 16 ಆಟಗಾರರನ್ನು ರಿಲೀಸ್ ಮಾಡಿದ್ದು, ಮೂವರನ್ನು ಟ್ರೇಡ್ ಮಾಡಿದೆ. ಇದೀಗ ಕೆಕೆಆರ್ ಬಳಿ ಕೇವಲ 7.05 ಕೋಟಿ ರುಪಾಯಿ ಬಾಕಿ ಉಳಿದಿದ್ದು, ಗರಿಷ್ಠ 3 ವಿದೇಶಿ ಆಟಗಾರರನ್ನು ಖರೀದಿಸಲು ಅವಕಾಶವಿದೆ. 

210
09. ರಾಯಲ್ ಚಾಲೆಂಜರ್ಸ್ ಬೆಂಗಳೂರು: 8.75 ಕೋಟಿ ರುಪಾಯಿ

09. ರಾಯಲ್ ಚಾಲೆಂಜರ್ಸ್ ಬೆಂಗಳೂರು: 8.75 ಕೋಟಿ ರುಪಾಯಿ

ಚೊಚ್ಚಲ ಐಪಿಎಲ್ ಟ್ರೋಫಿ ಕನವರಿಕೆಯಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು, ಬಹತೇಕರನ್ನು ಉಳಿಸಿಕೊಂಡು 5 ಆಟಗಾರರನ್ನು ರಿಲೀಸ್ ಮಾಡಿದೆ. ಸದ್ಯ ಆರ್‌ಸಿಬಿ ಫ್ರಾಂಚೈಸಿ ಬಳಿಕ 8.75 ಕೋಟಿ ರುಪಾಯಿ ಹಣ ಉಳಿದಿದ್ದು, ಗರಿಷ್ಠ ಎರಡು ವಿದೇಶಿ ಆಟಗಾರರನ್ನು ಖರೀದಿಸಲು ಅವಕಾಶವಿದೆ.  
 

310
08. ರಾಜಸ್ಥಾನ ರಾಯಲ್ಸ್: 13.20 ಕೋಟಿ ರುಪಾಯಿ

08. ರಾಜಸ್ಥಾನ ರಾಯಲ್ಸ್: 13.20 ಕೋಟಿ ರುಪಾಯಿ

ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿಯು ನೀಶಮ್, ಡೇರಲ್ ಮಿಚೆಲ್, ಕರುಣ್ ನಾಯರ್ ಸೇರಿದಂತೆ 9 ಆಟಗಾರರನ್ನು ರಿಲೀಸ್‌ ಮಾಡಿದ್ದು, ಮಿನಿ ಹರಾಜಿಗೂ ಮುನ್ನ 13.20 ಕೋಟಿ ರುಪಾಯಿ ಉಳಿಸಿಕೊಂಡಿದ್ದು, ಗರಿಷ್ಠ 4 ವಿದೇಶಿ ಆಟಗಾರರನ್ನು ಖರೀದಿಸಲು ಅವಕಾಶವಿದೆ.

410
07. ಗುಜರಾತ್ ಟೈಟಾನ್ಸ್: 19.25 ಕೋಟಿ ರುಪಾಯಿ

07. ಗುಜರಾತ್ ಟೈಟಾನ್ಸ್: 19.25 ಕೋಟಿ ರುಪಾಯಿ

ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ಫ್ರಾಂಚೈಸಿಯು 6 ಆಟಗಾರರನ್ನು ರಿಲೀಸ್ ಮಾಡಿದ್ದು, ತನ್ನ ಪರ್ಸ್‌ನಲ್ಲಿ 19.25 ಕೋಟಿ ರುಪಾಯಿ ಉಳಿಸಿಕೊಂಡಿದೆ. ಸದ್ಯ ಟೈಟಾನ್ಸ್ ಗರಿಷ್ಠ 3 ವಿದೇಶಿ ಆಟಗಾರರನ್ನು ಖರೀದಿಸಲು ಅವಕಾಶವಿದೆ.
 

510
06. ಡೆಲ್ಲಿ ಕ್ಯಾಪಿಟಲ್ಸ್: 19.45 ಕೋಟಿ ರುಪಾಯಿ

06. ಡೆಲ್ಲಿ ಕ್ಯಾಪಿಟಲ್ಸ್: 19.45 ಕೋಟಿ ರುಪಾಯಿ

ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯು 5 ಆಟಗಾರರನ್ನು ತಂಡದಿಂದ ರಿಲೀಸ್ ಮಾಡಿದ್ದು, 19.45  ಕೋಟಿ ರುಪಾಯಿಗಳನ್ನು ಹರಾಜಿಗೆ ಉಳಿಸಿಕೊಂಡಿದೆ. ಡೆಲ್ಲಿ ತಂಡವು ಗರಿಷ್ಠ ಎರಡು ವಿದೇಶಿ ಆಟಗಾರರನ್ನು ಖರೀದಿಸಲು ಅವಕಾಶವಿದೆ.
 

610
05. ಚೆನ್ನೈ ಸೂಪರ್ ಕಿಂಗ್ಸ್‌: 20.45 ಕೋಟಿ ರುಪಾಯಿ

05. ಚೆನ್ನೈ ಸೂಪರ್ ಕಿಂಗ್ಸ್‌: 20.45 ಕೋಟಿ ರುಪಾಯಿ

ಐಪಿಎಲ್‌ನ ಯಶಸ್ವಿ ತಂಡಗಳಲ್ಲಿ ಒಂದು ಎನಿಸಿಕೊಂಡಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಡ್ವೇನ್ ಬ್ರಾವೋ, ಕ್ರಿಸ್ ಜೋರ್ಡನ್ ಸೇರಿದಂತೆ 8 ಆಟಗಾರರನ್ನು ರಿಲೀಸ್ ಮಾಡಿದ್ದು, ಮಿನಿ ಹರಾಜಿಗೆ 20.45 ಕೋಟಿ ರುಪಾಯಿ ಉಳಿಸಿಕೊಂಡಿದ್ದು, ಗರಿಷ್ಠ ಎರಡು ವಿದೇಶಿ ಆಟಗಾರರನ್ನು ಖರೀದಿಸಲು ಅವಕಾಶವಿದೆ.
 

710
04. ಮುಂಬೈ ಇಂಡಿಯನ್ಸ್‌: 20.55 ಕೋಟಿ ರುಪಾಯಿ

04. ಮುಂಬೈ ಇಂಡಿಯನ್ಸ್‌: 20.55 ಕೋಟಿ ರುಪಾಯಿ

ಐಪಿಎಲ್‌ನ ಯಶಸ್ವಿ ತಂಡ ಮುಂಬೈ ಇಂಡಿಯನ್ಸ್ ತನ್ನ ತಂಡದಲ್ಲಿ ಮೇಜರ್ ಸರ್ಜರಿ ಮಾಡಿದ್ದು, ಪೊಲ್ಲಾರ್ಡ್ ಸೇರಿದಂತೆ 13 ಆಟಗಾರರನ್ನು ರಿಲೀಸ್ ಮಾಡಿದ್ದು, 20.55 ಕೋಟಿ ರುಪಾಯಿಗಳನ್ನು ಉಳಿಸಿಕೊಂಡಿದೆ. ಮುಂಬೈ ತಂಡವು ಗರಿಷ್ಠ ಮೂವರು ವಿದೇಶಿ ಆಟಗಾರರನ್ನು ಖರೀದಿಸಲು ಅವಕಾಶವಿದೆ.

810
03. ಲಖನೌ ಸೂಪರ್ ಜೈಂಟ್ಸ್: 23.35 ಕೋಟಿ ರುಪಾಯಿ

03. ಲಖನೌ ಸೂಪರ್ ಜೈಂಟ್ಸ್: 23.35 ಕೋಟಿ ರುಪಾಯಿ

ಲಖನೌ ತಂಡವು ಪಾಂಡೆ, ಹೋಲ್ಡರ್, ಎವಿನ್ ಲೆವಿಸ್ ಸೇರಿದಂತೆ 7 ಆಟಗಾರರನ್ನು ರಿಲೀಸ್ ಮಾಡಿದ್ದು, ತನ್ನ ಖಾತೆಯಲ್ಲಿ 23.35 ಕೋಟಿ ರುಪಾಯಿ ಉಳಿಸಿಕೊಂಡಿದೆ. ಲಖನೌ ಫ್ರಾಂಚೈಸಿಯು ಗರಿಷ್ಠ 4 ವಿದೇಶಿ ಆಟಗಾರರನ್ನು ಖರೀದಿಸಲು ಅವಕಾಶವಿದೆ.
 

910
02. ಪಂಜಾಬ್ ಕಿಂಗ್ಸ್‌: 32.20 ಕೋಟಿ ರುಪಾಯಿ

02. ಪಂಜಾಬ್ ಕಿಂಗ್ಸ್‌: 32.20 ಕೋಟಿ ರುಪಾಯಿ

ಚೊಚ್ಚಲ ಟ್ರೋಫಿ ಕನವರಿಕೆಯಲ್ಲಿರುವ ಪಂಜಾಬ್ ತಂಡವು ನಾಯಕ ಮಯಾಂಕ್ ಅಗರ್‌ವಾಲ್ ಸೇರಿದಂತೆ 9 ಆಟಗಾರರನ್ನು ರಿಲೀಸ್ ಮಾಡಿದ್ದು, ಮಿನಿ ಹರಾಜಿಗೆ 32.2 ಕೋಟಿ ರುಪಾಯಿ ಉಳಿಸಿಕೊಂಡಿದೆ. ಇನ್ನು ಸಿಎಸ್‌ಕೆ ಫ್ರಾಂಚೈಸಿಯು ಮಿನಿ ಹರಾಜಿಗೆ ಗರಿಷ್ಠ ಮೂವರು ವಿದೇಶಿ ಆಟಗಾರರನ್ನು ಖರೀದಿಸಲು ಅವಕಾಶವಿದೆ.
 

1010
01. ಸನ್‌ರೈಸರ್ಸ್‌ ಹೈದರಾಬಾದ್: 42.25 ಕೋಟಿ ರುಪಾಯಿ

01. ಸನ್‌ರೈಸರ್ಸ್‌ ಹೈದರಾಬಾದ್: 42.25 ಕೋಟಿ ರುಪಾಯಿ

ಕಳೆದ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ನೀರಸ ಪ್ರದರ್ಶನ ತೋರಿದ್ದ ಸನ್‌ರೈಸರ್ಸ್ ತಂಡವು ಮೇಜರ್‌ ಸರ್ಜರಿಗೆ ಮುಂದಾಗಿದ್ದು ನಾಯಕ ಕೇನ್ ವಿಲಿಯಮ್ಸನ್ ಸೇರಿದಂತೆ 12 ಆಟಗಾರರನ್ನು ರಿಲೀಸ್‌ ಮಾಡಿದ್ದು, ಮಿನಿ ಹರಾಜಿಗೆ ಗರಿಷ್ಠ(42.25 ಕೋಟಿ ರುಪಾಯಿ) ಹಣ ಉಳಿಸಿಕೊಂಡಿದೆ. ಸನ್‌ರೈಸರ್ಸ್ ಗರಿಷ್ಠ ನಾಲ್ವರು ವಿದೇಶಿ ಆಟಗಾರರನ್ನು ಖರೀದಿಸಲು ಅವಕಾಶವಿದೆ.
 

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

NK
Naveen Kodase
ನವೀನ್ ಕೊಡಸೆ ಏಷ್ಯಾನೆಟ್ ಕನ್ನಡದಲ್ಲಿ ಮುಖ್ಯ ಉಪಸಂಪಾದಕ. ಕಳೆದ 9 ವರ್ಷಗಳಿಂದಲೂ ಮಾಧ್ಯಮ ಜಗತ್ತಿನಲ್ಲಿದ್ದೇನೆ. ಅಪ್ಪಟ ಮಲೆನಾಡಿನ ಹುಡುಗ. ಕುವೆಂಪು ವಿವಿಯ ಪತ್ರಿಕೋದ್ಯಮ ಪದವಿ ಇದೆ. ರಾಜ್‌ ನ್ಯೂಸ್‌ ಮೂಲಕ ಮಾಧ್ಯಮ ಲೋಕಕ್ಕೆ ಕಾಲಿಟ್ಟವನು. ಡಿಜಿಟಲ್‌ ಮಾಧ್ಯಮ ಲೋಕದಲ್ಲಿ ಪಳಗಿದರೂ, ಕಲಿಯೋದಿದೆ ಅಪಾರ. ಕ್ರೀಡೆ, ರಾಜಕೀಯ, ಸಾಹಿತ್ಯದಲ್ಲಿದೆ ಆಸಕ್ತಿ. ಕ್ರೀಡಾ ಸುದ್ದಿಯೇ ನನ್ನ ಜೀವಾಳ.
ಕ್ರಿಕೆಟ್
ಇಂಡಿಯನ್ ಪ್ರೀಮಿಯರ್ ಲೀಗ್ ಆಟಗಾರರ ಹರಾಜು

Latest Videos
Recommended Stories
Recommended image1
ಇಂಗ್ಲೆಂಡ್ ವಿರುದ್ಧ ಸೆಮಿಫೈನಲ್ ಗೆದ್ರೆ ಭಾರತಕ್ಕೆ ಟ್ರೋಫಿ ಖಚಿತ, ಟಿ20 ವಿಶ್ವಕಪ್‌ನಲ್ಲಿದೆ ಸಂಪ್ರದಾಯ
Recommended image2
ಇಂಗ್ಲೆಂಡ್‌ನ ಈ ವೇಗಿ ಎದುರು ಸಂಜು ಸ್ಯಾಮ್ಸನ್ ಮೂರು ಸಲ ಡಕ್‌ ಔಟ್! ಸೆಮಿಫೈನಲ್‌ಗೂ ಮುನ್ನ ಫ್ಯಾನ್ಸ್‌ಗೆ ಶುರುವಾಯ್ತು ಹೊಸ ತಲೆನೋವು!
Recommended image3
ಸಚಿನ್ ಅಂಜಲಿಯಂತೆ ಪುತ್ರ ಅರ್ಜುನ್ ಸಾನಿಯಾ ಜೋಡಿಯಲ್ಲಿದೆ ವಯಸ್ಸಿನ ಅಂತರ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved