Christmas 2021: ಫ್ಯಾಮಿಲಿ ಜೊತೆ ದುಬೈನಲ್ಲಿ ಧೋನಿ ಕ್ರಿಸ್ಮಸ್ ಸೆಲೆಬ್ರೆಷನ್!
ಡಿಸೆಂಬರ್ 25 ರಂದು ವಿಶ್ವದಾದ್ಯಂತ ಕ್ರಿಸ್‌ಮಸ್ ಹಬ್ಬವನ್ನು (Christmas 2021) ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗಿದೆ. ಇದಕ್ಕೂ ಒಂದು ದಿನ ಮುನ್ನ ಅಂದರೆ ಡಿಸೆಂಬರ್ 24ರಂದು ಅನೇಕ ಆಟಗಾರರು ಕ್ರಿಸ್‌ಮಸ್ ಈವ್ ಅನ್ನು ಸಹ ಆಚರಿಸಿದರು. ಆ ಸಮಯದ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಆಟಗಾರರ ಕ್ರಿಸ್‌ಮಸ್ ಆಚರಣೆ ಹೇಗಿತ್ತು ನೋಡಿ.

ಮಹೇಂದ್ರ ಸಿಂಗ್ ಧೋನಿ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಸದ್ಯ ಕುಟುಂಬ ಸಮೇತ ದುಬೈನಲ್ಲಿ ಹಾಲಿಡೇ ಮಾಡುತ್ತಿದ್ದಾರೆ. ಅವರ ಪತ್ನಿ ಸಾಕ್ಷಿ ಧೋನಿ ಇನ್‌ಸ್ಟಾ ಸ್ಟೋರಿಯಲ್ಲಿ ಕ್ರಿಸ್‌ಮಸ್ ಆಚರಣೆಯ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಅವರ ಮಗಳು ಸಾಂತನ ಕೆಂಪು ಟೋಪಿ ಧರಿಸಿ ಕಾಣಿಸಿಕೊಂಡಿದ್ದಾಳೆ.
ಕ್ರಿಸ್ಟಿಯಾನೋ ರೊನಾಲ್ಡೊ: ವಿಶ್ವದ ಶ್ರೇಷ್ಠ ಫುಟ್ಬಾಲ್ ಆಟಗಾರರಲ್ಲಿ ಒಬ್ಬರಾದ ಕ್ರಿಸ್ಟಿಯಾನೋ ರೊನಾಲ್ಡೊ ಅವರು ತಮ್ಮ ಇಡೀ ಕುಟುಂಬದೊಂದಿಗೆ ಕ್ರಿಸ್ಮಸ್ ಆಚರಿಸಿದರು. ಈ ಫೋಟೋದಲ್ಲಿ, ಅವರ ಪೋಷಕರು, ಅವರ ಮಕ್ಕಳು ಮತ್ತು ಪ್ರೆಗ್ನೆಂಟ್ ಗರ್ಲ್‌ಫ್ರೆಂಡ್ ಸಹ ಕಾಣಿಸಿಕೊಂಡಿದ್ದಾರೆ.
ಕ್ರಿಸ್ ಗೇಲ್: ಕೆರಿಬಿಯನ್ ಸ್ಟಾರ್ ಮತ್ತು ಯೂನಿವರ್ಸಲ್ ಬಾಸ್ ಕ್ರಿಸ್ ಗೇಲ್ ಜಮೈಕಾದಲ್ಲಿ ತಮ್ಮ ತಂದೆಯೊಂದಿಗೆ ಕ್ರಿಸ್ಮಸ್ ಆಚರಿಸಿದರು. ಕ್ರಿಸ್‌ಮಸ್ ಟ್ರೀಯ ಮುಂದೆ ಕೂತು ತಂದೆಯ ಕೈ ಹಿಡಿದಿರುವುದು ಫೋಟೋದಲ್ಲಿ ಕಾಣಬಹುದು
ಯುಜ್ವೇಂದ್ರ ಚಹಾಲ್: ಭಾರತೀಯ ಕ್ರಿಕೆಟ್ ತಂಡದ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ಅವರು ತಮ್ಮ ಪತ್ನಿ ಧನಶ್ರೀ ವರ್ಮಾ ಅವರೊಂದಿಗೆ ಗುಲ್ಮಾರ್ಗ್‌ನಲ್ಲಿ ಹಾಲಿಡೇ ಎಂಜಾಯ್ ಮಾಡುತ್ತಿದ್ದಾರೆ. ಅಲ್ಲಿಂದ ಅವರ ಪತ್ನಿ ಎಲ್ಲಾ ಅಭಿಮಾನಿಗಳಿಗೆ ಕ್ರಿಸ್‌ಮಸ್ ಹಬ್ಬಕ್ಕೆ ಶುಭಾಶಯ ಕೋರಿದರು ಮತ್ತು ಹಿಮಭರಿತ ಪರ್ವತಗಳ ಫೋಟೋವನ್ನು ಹಂಚಿಕೊಂಡಿದ್ದಾರೆ.
ಈ ಫೋಟೋದಲ್ಲಿ, ಭಾರತೀಯ ಕ್ರಿಕೆಟ್ ತಂಡದ ವೇಗದ ಬೌಲಿಂಗ್ ಮೊಹಮ್ಮದ್ ಶಮಿ ಅವರ ಪುತ್ರಿ ಆಯ್ರಾ ಕೆಂಪು ಡ್ರೆಸ್ ಧರಿಸಿ ಸಾಂಟಾ ಕ್ಲಾಸ್‌ಗೆ ಹ್ಯಾಂಡ್ ಶೇಕ್ ಮಾಡುತ್ತಿದ್ದಾಳೆ. ಅದೇ ಸಮಯದಲ್ಲಿ, ಶಮಿ ಯುಎಇಯಲ್ಲಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.