ಆರ್‌ಸಿಬಿ ಫೈನಲ್ ಕ್ರೇಜ್, ಬೆಂಗಳೂರಿನ ಬಹುತೇಕ ಪಬ್, ರೆಸ್ಟೋರೆಂಟ್ ಟಿಕೆಟ್ ಸೋಲ್ಡ್ ಔಟ್
ಆರ್‌ಸಿಬಿ ಫೈನಲ್ ಪಂದ್ಯಕ್ಕೆ ಅಭಿಮಾನಿಗಳು ಕಾಯುತ್ತಿದ್ದಾರೆ. ಈಗಲೇ ಬೆಂಗಳೂರಿನಲ್ಲಿ ಕ್ರೇಜ್ ಹೆಚ್ಚಾಗಿದೆ. ವಿಶೇಷ ಅಂದರೆ ಬೆಂಗಳೂರಿನ ಬುಹುತೇಕ ಪಬ್, ರೆಸ್ಟೋರೆಂಟ್ ಟಿಕೆಟ್ ಸೋಲ್ಡ್ ಔಟ್ ಆಗಿದೆ.

ಆರ್‌ಸಿಬಿ ಈಗಾಗಲೇ ಫೈನಲ್ ತಲುಪಿದೆ. ಜೂನ್ 3ರಂದು ನಡೆಯಲಿರುವ ಫೈನಲ್ ಪಂದ್ಯಕ್ಕೆ ಇದೀಗ ಅಭಿಮಾನಿಗಳು ಕಾಯುತ್ತಿದ್ದಾರೆ. ಅಹಮ್ಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಫೈನಲ್ ಪಂದ್ಯ ನಡೆಯಲಿದೆ. ಆರ್‌ಸಿಬಿ ಅಭಿಮಾನಿಗಳು, ಬೆಂಗಳೂರು ಸೇರಿ ಕರ್ನಾಟಕದಲ್ಲಿ ಐಪಿಎಲ್ ಫೈನಲ್ ಕ್ರೇಜ್ ಹೆಚ್ಚಾಗಿದೆ. ಬೆಂಗಳೂರಿನ ಬಹುತೇಕ ಪಬ್, ರೆಸ್ಟೋರೆಂಟ್‌ಗಳ ಟಿಕೆಟ್ ಸೋಲ್ಡ್ ಔಟ್ ಆಗಿದೆ.
ಐಪಿಎಲ್ ಫೈನಲ್ ಮಂಗಳವಾರ ನಡೆಯಲಿದೆ. ಅಂದರೆ ವೀಕೆಡ್ ಡೇನಲ್ಲಿ ನಡೆಯಲಿದೆ. ವೀಕೆಂಡ್‌ಗಳಲ್ಲಿ ಪಬ್, ರೆಸ್ಟೋರೆಂಟ್ ಸಾಮಾನ್ಯವಾಗಿ ತುಂಬಿರುತ್ತದೆ. ಆದರೆ ಈ ಬಾರಿ ವೀಕ್ ಡೇ ಟಿಕೆಟ್ ಕೂಡ ಸೋಲ್ಡ್ ಔಟ್ ಆಗಿದೆ. ಇದೀಗ ರೆಸ್ಟೋರೆಂಟ್ ಹಾಗೂ ಪಬ್ ಮಾಲೀಕರು ಈ ಕುರಿತು ಪ್ರತಿಕ್ರಿಯಿಸಿದ್ದಾರೆ. ವೀಕ್ ಡೇಗಳಲ್ಲಿ ಪಬ್, ರೆಸ್ಟೋರೆಂಟ್ ಫುಲ್ ಇರುವುದಿಲ್ಲ. ಆದರೆ ಐಪಿಎಲ್ ಫೈನಲ್ ದಿನ ಕ್ರೌಡ್ ಹೆಚ್ಚಾಗಲಿದೆ ಎಂದಿದ್ದಾರೆ.
ಮಾರ್ಥಹಳ್ಳಿಯಲ್ಲಿರುವ ಪಬ್ ಆ್ಯಂಡ್ ರೆಸ್ಟೋರೆಂಟ್ ಮಾಲೀಕರು ಈ ಕುರಿತು ಪ್ರತಿಕ್ರಿಯಿಸಿದ್ದಾರೆ. ಮಂಗಳವಾರ ಸಾಮಾನ್ಯವಾಗಿ 350 ರಿಂದ 400 ಮಂದಿ ಆಗಮಿಸುತ್ತಿದ್ದರು. ಆದರೆ ಆರ್‌ಸಿಬಿ ಫೈನಲ್ ಪಂದ್ಯ ಇರುವ ಕಾರಣ 700 ರಿಂದ 800 ಮಂದಿ ನಿರೀಕ್ಷಿಸಲಾಗಿದೆ. ಹಲವು ಬಾರ್, ಪಬ್, ರೆಸ್ಟೋರೆಂಟ್ ಟಿಕೆಟ್ ಸೋಲ್ಡ್ ಆಗಿದೆ ಎಂದಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಒಟ್ಟು 6 ಪಂದ್ಯಗಳನ್ನು ಆಡಿದ್ದು, 3 ರಲ್ಲಿ ಗೆಲುವು ಮತ್ತು 3 ರಲ್ಲಿ ಸೋಲು ಕಂಡಿದೆ. ಕಳೆದ 4 ಪಂದ್ಯಗಳಲ್ಲಿ ಇಲ್ಲಿ ತಂಡಕ್ಕೆ ಕೇವಲ 1 ಗೆಲುವು ಸಿಕ್ಕಿದೆ. ಆದಾಗ್ಯೂ, ಈ ಬಾರಿ ಆರ್‌ಸಿಬಿ ತಂಡ ವಿಭಿನ್ನವಾಗಿ ಕಾಣುತ್ತಿದೆ. ತಂಡವು ಹೆಚ್ಚಿನ ಪಂದ್ಯಗಳನ್ನು ಬೇರೆಡೆ ಗೆದ್ದಿದೆ. ತಂಡದ ಬೌಲಿಂಗ್, ಬ್ಯಾಟಿಂಗ್ ಮತ್ತು ಫೀಲ್ಡಿಂಗ್ ಸಂಪೂರ್ಣವಾಗಿ ಸಮತೋಲಿತವಾಗಿದೆ. ಪ್ರತಿ ಪಂದ್ಯದಲ್ಲೂ ಹೊಸ ಮ್ಯಾಚ್ ವಿನ್ನರ್ ತಂಡಕ್ಕೆ ಮುಂದೆ ಬಂದಿದ್ದಾರೆ. ಹೀಗಾಗಿ ಮತ್ತೊಮ್ಮೆ ಅದೇ ಉತ್ಸಾಹದಿಂದ ತಂಡ ಫೈನಲ್‌ನಲ್ಲಿ ಕಣಕ್ಕಿಳಿಯಲು ಬಯಸುತ್ತದೆ.
ಐಪಿಎಲ್ 2025 ರಲ್ಲಿ ವಿರಾಟ್ ಕೊಹ್ಲಿ ಬ್ಯಾಟ್ ಕೂಡ ನಿರಂತರವಾಗಿ ರನ್ ಬಾರಿಸುತ್ತಿದೆ. ಮತ್ತೊಮ್ಮೆ ಫೈನಲ್‌ನಲ್ಲಿ ಕಿಂಗ್ ಕೊಹ್ಲಿಯಿಂದ ಮ್ಯಾಚ್ ವಿನ್ನಿಂಗ್ ಇನ್ನಿಂಗ್ಸ್ ನಿರೀಕ್ಷಿಸಲಾಗಿದೆ. ನರೇಂದ್ರ ಮೋದಿ ಕ್ರೀಡಾಂಗಣ ಅಹಮದಾಬಾದ್‌ನಲ್ಲಿ ವಿರಾಟ್ ಅವರ ಅಂಕಿಅಂಶಗಳನ್ನು ನೋಡಿದರೆ, ಇಲ್ಲಿ ಐಪಿಎಲ್‌ನಲ್ಲಿ ಅವರ ಸರಾಸರಿ 54.75 ಆಗಿದೆ. ಒಟ್ಟು 6 ಪಂದ್ಯಗಳಲ್ಲಿ ಕೊಹ್ಲಿ 219 ರನ್ ಗಳಿಸಿದ್ದಾರೆ, ಇದರಲ್ಲಿ 2 ಅರ್ಧಶತಕಗಳು ಸೇರಿವೆ. ಇಲ್ಲಿ ಅವರ ಸರಾಸರಿ 39. ಈ ಅಂಕಿಅಂಶಗಳ ಪ್ರಕಾರ, ವಿರಾಟ್ ಮತ್ತೊಮ್ಮೆ ಹೊಸದನ್ನು ಮಾಡಲು ಯೋಚಿಸುತ್ತಾರೆ. ಮೊದಲ ಟ್ರೋಫಿ ಗೆಲ್ಲುವ ಅನ್ವೇಷಣೆಯಲ್ಲಿ ಅವರು ಅದ್ಭುತ ಪ್ರದರ್ಶನ ನೀಡಲು ಬಯಸುತ್ತಾರೆ.