ಮ್ಯಾಂಚೆಸ್ಟರ್ ಟೆಸ್ಟ್ ಪಂದ್ಯ ಮುಗಿದ ಮೇಲೂ ಸಣ್ಣತನ ತೋರಿಸಿದ ಬೆನ್ ಸ್ಟೋಕ್ಸ್!
ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮ್ಯಾಂಚೆಸ್ಟರ್ ಟೆಸ್ಟ್ ಪಂದ್ಯ ಡ್ರಾನಲ್ಲಿ ಮುಕ್ತಾಯವಾದ ಬಳಿಕ ಬೆನ್ ಸ್ಟೋಕ್ಸ್, ಟೀಂ ಇಂಡಿಯಾ ಆಲ್ರೌಂಡರ್ ಜಡೇಜಾ ಜತೆ ನಡೆದುಕೊಂಡ ರೀತಿಯ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ.

ಮ್ಯಾಂಚೆಸ್ಟರ್‌ನಲ್ಲಿ ನಡೆದ 4ನೇ ಟೆಸ್ಟ್ ಡ್ರಾನಲ್ಲಿ ಅಂತ್ಯಗೊಂಡಿತು. 300+ ರನ್‌ಗಳ ಹಿನ್ನಡೆಯಲ್ಲಿದ್ದ ಭಾರತ ಖಾತೆ ತೆರೆಯುವ ಮುನ್ನ 2 ವಿಕೆಟ್ ಕಳೆದುಕೊಂಡಿತು. ಸೋಲಿನ ಭೀತಿಯಲ್ಲಿದ್ದಾಗ ಗಿಲ್ (103), ಜಡೇಜಾ (107*), ಸುಂದರ್ (101*) ಮತ್ತು ರಾಹುಲ್ (90) ಅವರ ಆಟದಿಂದ ಭಾರತ ಐತಿಹಾಸಿಕ ಡ್ರಾ ಸಾಧಿಸಿತು.
ಆಟ ಮುಗಿದ ನಂತರ ಸ್ಟೋಕ್ಸ್ ಜಡೇಜಾ ಜೊತೆ ಕೈಕುಲುಕಲು ನಿರಾಕರಿಸಿದರು. ಜಡೇಜಾ ಕೋಪಗೊಂಡ ಸ್ಟೋಕ್ಸ್‌ರನ್ನು ಮಾತನಾಡಿಸಿದರು. ನಂತರ ಸ್ಟೋಕ್ಸ್ ಮುಖ ನೋಡದೆ ಕೈಕುಲುಕಿದರು. ಅವರ ವರ್ತನೆಗೆ ಅಭಿಮಾನಿಗಳು ಮತ್ತು ಮಾಜಿ ಆಟಗಾರರು ಟೀಕಿಸಿದ್ದಾರೆ. 'ಓವರ್ ಮುಗಿಯುವವರೆಗೂ ಆಟಗಾರರು ಆಡಬಹುದು. ಇಬ್ಬರೂ ಶತಕದ ಸನಿಹದಲ್ಲಿದ್ದಾರೆ. ಸುಂದರ್‌ಗೆ ಇದು ಮೊದಲ ಶತಕ. ಹಾಗಾಗಿ ಸ್ಟೋಕ್ಸ್ ಏಕೆ ಆಟ ಮುಗಿಸಲು ಒತ್ತಾಯಿಸಬೇಕು' ಎಂದು ಕೇಳಿದ್ದಾರೆ.
ಸ್ಟೋಕ್ಸ್ 'ಬೌಲರ್‌ಗಳಿಗೆ ಗಾಯವಾಗದಂತೆ ತಡೆಯಲು ಡ್ರಾಕ್ಕೆ ಮುಂದಾದೆವು. ನಮ್ಮ ಆಟಗಾರರು ಹೆಚ್ಚು ದಣಿದಿದ್ದರು' ಎಂದರು. ಆದರೆ ಅಭಿಮಾನಿಗಳು ಸ್ಟೋಕ್ಸ್‌ರ ವರ್ತನೆ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ