ಈ ಆಟಗಾರರೆಲ್ಲಾ ಒಂದೇ ತಂಡದಲ್ಲಿ ಆಡಿದರೇ ಇವರನ್ನು ಸೋಲಿಸಲು ಸಾಧ್ಯನಾ..?

First Published 28, Mar 2020, 7:27 PM

ಈಗಾಗಲೇ 2019ರ ಐಸಿಸಿ ಏಕದಿನ ವಿಶ್ವಕಪ್ ಮುಕ್ತಾಯವಾಗಿದೆ. ಇನ್ನು ಕೊರೋನಾ ಭೀತಿಯಿಂದಾಗಿ ಸದ್ಯ ಕ್ರೀಡಾ ಚಟುವಟಿಕೆಗಳು ಸ್ತಬ್ಧವಾಗಿವೆ. ಐಪಿಎಲ್, ಏಷ್ಯಾಕಪ್ ಕ್ರಿಕೆಟ್‌ ಟೂರ್ನಿಗಳು ಅಡೆತಡೆಗಳಿಲ್ಲದೇ ನಡೆಯುವುದು ಅನುಮಾನ ಎನಿಸಿದೆ. ಹೀಗಿರುವಾಗ ಸುವರ್ಣ ನ್ಯೂಸ್.ಕಾಂ 2019-20ನೇ ಸಾಲಿನ ಬಲಿಷ್ಠ ತಂಡವನ್ನು ಕಟ್ಟಿದೆ. ಈ ತಂಡ ವಿಶ್ವದ ಯಾವುದೇ ತಂಡವನ್ನು ಮಣಿಸುವ ಸಾಮರ್ಥ್ಯವಿದೆ ಎಂದರೆ ಅತಿಶಯೋಕ್ತಿಯಾಗಲಾರದು.
ಹೌದು, ಈ ತಂಡದಲ್ಲಿ ವಿಶ್ವದ ಶ್ರೇಷ್ಠ ಪ್ರತಿಭಾನ್ವಿತ ಆಟಗಾರರನ್ನು ಹೊಂದಿದ್ದು, ಯಾವುದೇ ಪಿಚ್‌ನಲ್ಲಾದರೂ ಏಕಾಂಗಿಯಾಗಿ ಪಂದ್ಯವನ್ನು ಗೆಲ್ಲಿಸುವ ಸಾಮರ್ಥ್ಯ ಹೊಂದಿದ್ದಾರೆ. ಈ ತಂಡ ಹಾಲಿ ವಿಶ್ವಕಪ್ ಚಾಂಪಿಯನ್ ಇಂಗ್ಲೆಂಡ್ ತಂಡವನ್ನು ಬಗ್ಗುಬಡಿಯುವ ಸಾಮರ್ಥ್ಯ ಹೊಂದಿದೆ. ವಿಶ್ವದ ಬಲಿಷ್ಠ ತಂಡದಲ್ಲಿ ಯಾರೆಲ್ಲಾ ಸ್ಥಾನ ಪಡೆದಿದ್ದಾರೆ ಎನ್ನುವುದನ್ನು ನೀವೊಮ್ಮೆ ನೋಡಿ ಬಿಡಿ  

1. ರೋಹಿತ್ ಶರ್ಮಾ: ಸ್ಫೋಟಕ ಆರಂಭಿಕ, ದೊಡ್ಡ ಇನಿಂಗ್ಸ್ ಕಟ್ಟಬಲ್ಲ ಆಟಗಾರ

2. ಡೇವಿಡ್ ವಾರ್ನರ್: ಎದುರಾಳಿ ಬೌಲರ್‌ಗಳ ಎದೆಯಲ್ಲಿ ನಡುಕ ಹುಟ್ಟಿಸಬಲ್ಲ ಸಿಡಿಲಬ್ಬರದ ಎಡಗೈ ಬ್ಯಾಟ್ಸ್‌ಮನ್

3. ವಿರಾಟ್ ಕೊಹ್ಲಿ: ಅಗತ್ಯಕ್ಕೆ ತಕ್ಕಂತೆ ಆಡಬಲ್ಲ ಆಧುನಿಕ ಕ್ರಿಕೆಟ್‌ನ ರನ್ ಮಷೀನ್.

4. ಕೇನ್ ವಿಲಿಯಮ್ಸನ್(ನಾಯಕ): ಯಾವುದೇ ತಂಡವನ್ನಾದರೂ ಯಶಸ್ವಿಯಾಗಿ ಮುನ್ನಡೆಸಬಲ್ಲ ಚಾಣಾಕ್ಷ ಹಾಗೆಯೇ ಕೂಲ್ ಕ್ಯಾಪ್ಟನ್

5. ಶಕೀಬ್ ಅಲ್ ಹಸನ್: ಬೌಲಿಂಗ್, ಬ್ಯಾಟಿಂಗ್ ಹಾಗೂ ಫೀಲ್ಡಿಂಗ್‌ನಲ್ಲಿ ತಂಡಕ್ಕೆ ಉಪಯುಕ್ತ ಕಾಣಿಕೆ ನೀಡಬಲ್ಲ ಅನುಭವಿ ಆಲ್ರೌಂಡರ್

6. ಕ್ವಿಂಟನ್ ಡಿಕಾಕ್(ವಿಕೆಟ್ ಕೀಪರ್): ವಿಕೆಟ್ ಕೀಪರ್‌ ಬ್ಯಾಟ್ಸ್‌ಮನ್

7. ಆಂಡ್ರೆ ರಸೆಲ್: ಡೆತ್ ಓವರ್‌ನಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸಬಲ್ಲ ಬ್ಯಾಟ್ಸ್‌ಮನ್

8. ರಶೀದ್ ಖಾನ್: ಚಾಣಾಕ್ಷ ಸ್ಪಿನ್ನರ್, ಬ್ಯಾಟಿಂಗ್‌ನಲ್ಲೂ ಕಾಣಿಕೆ ನೀಡಬಲ್ಲ ಆಟಗಾರ

9. ಮಿಚೆಲ್ ಸ್ಟಾರ್ಕ್: ಮಾರಕ ಎಡಗೈ ವೇಗಿ, ಡೆತ್ ಓವರ್ ಸ್ಪೆಷಲಿಸ್ಟ್

10. ಮೊಹಮ್ಮದ್ ಅಮೀರ್: ಮತ್ತೋರ್ವ ಎಡಗೈ ಮಾರಕ ವೇಗಿ

11. ಜಸ್ಪ್ರೀತ್ ಬುಮ್ರಾ: ವಿಶ್ವ ಕ್ರಿಕೆಟ್‌ನ ಡೇಂಜರಸ್ ಡೆತ್ ಓವರ್ ಸ್ಪೆಷಲಿಸ್ಟ್

loader