ಟೀಂ ಇಂಡಿಯಾ ಹೆಸರಿನಲ್ಲಿವೇ 4 ಅತಿ ಕೆಟ್ಟ ದಾಖಲೆಗಳು..!

First Published 12, Apr 2020, 7:59 PM

ಟೀಂ ಇಂಡಿಯಾ ಕಳೆದ 88 ವರ್ಷಗಳಿಂದ ಅಂತಾರಾಷ್ಟ್ರೀಯ ಕ್ರಿಕೆಟ್ ಆಡುತ್ತಿದೆ. ಈ ಅವಧಿಯಲ್ಲಿ ಭಾರತ ಕ್ರಿಕೆಟ್ ತಂಡ 1655 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದೆ. ವಿಶ್ವಕ್ರಿಕೆಟ್‌ನಲ್ಲಿ ಟೀಂ ಇಂಡಿಯಾ ಹಲವಾರು ಸ್ಮರಣೀಯ ಕ್ಷಣಗಳಿಗೆ ಸಾಕ್ಷಿಯಾಗಿದೆ. 
ಇನ್ನು ಟೀಂ ಇಂಡಿಯಾ ಹಲವು ಅಪರೂಪದ ದಾಖಲೆಗಳನ್ನೂ ಬರೆದಿದೆ. ಇದರ ಜತೆಗೆ ಕುಖ್ಯಾತಿಗೂ ಭಾರತ ಕ್ರಿಕೆಟ್ ತಂಡ ಪಾತ್ರವಾಗಿದೆ. ಟೀಂ ಇಂಡಿಯಾ ಹೆಸರಿನಲ್ಲಿರುವ 5 ಕೆಟ್ಟ ದಾಖಲೆಗಳ ಪರಿಚಯ ನಿಮ್ಮ ಮುಂದೆ

1. ಏಕದಿನ ಕ್ರಿಕೆಟ್‌ನಲ್ಲಿ ಅತಿಹೆಚ್ಚು ಸೋಲು

1. ಏಕದಿನ ಕ್ರಿಕೆಟ್‌ನಲ್ಲಿ ಅತಿಹೆಚ್ಚು ಸೋಲು

ಟೀಂ ಇಂಡಿಯಾ 2015ರಿಂದೀಚೆಗೆ ಶೇ.70ರಷ್ಟು ಗೆಲುವು ಸಾಧಿಸಿದೆ. ಆದರೆ ಟೀಂ ಇಂಡಿಯಾ ಇದುವರೆಗೂ ಒಟ್ಟು 987 ಏಕದಿನ ಪಂದ್ಯಗಳನ್ನಾಡಿದ್ದು, 423 ಬಾರಿ  ಮುಗ್ಗರಿಸುವ ಮೂಲಕ ಅತಿಹೆಚ್ಚು ಸೋಲು ಕಂಡ ತಂಡ ಎನಿಸಿದೆ. ಶ್ರೀಲಂಕಾ ಹಾಗೂ ಪಾಕಿಸ್ತಾನ ಆನಂತರದ ಸ್ಥಾನದಲ್ಲಿವೆ.

2. ಅತಿಹೆಚ್ಚು ಬಾರಿ 350+ ರನ್ ಬಿಟ್ಟುಕೊಟ್ಟ ತಂಡ ಭಾರತ

ಟೀಂ ಇಂಡಿಯಾ ಆ ಕಾಲದಿಂದಲೂ ಬಲಿಷ್ಠ ಬೌಲಿಂಗ್ ಪಡೆಯನ್ನು ಹೊಂದಿದೆಯಾದರೂ, ಬರೋಬ್ಬರಿ 12 ಬಾರಿ ಎದುರಾಳಿ ತಂಡ ಭಾರತ ವಿರುದ್ಧ 350+ ರನ್ ಬಾರಿಸಿದೆ. ಈ ಮೂಲಕ ಅತಿಹೆಚ್ಚು ಬಾರಿ 350+ ರನ್ ಬಿಟ್ಟುಕೊಟ್ಟ ತಂಡ ಎನ್ನುವ ಕುಖ್ಯಾತಿ ಟೀಂ ಇಂಡಿಯಾ ಹೆಸರಿನಲ್ಲಿದೆ.

3. ಟೆಸ್ಟ್ ಪಂದ್ಯವೊಂದರಲ್ಲಿ ಅತಿ ಹೆಚ್ಚು ಇತರೆ ರನ್ ಬಿಟ್ಟುಕೊಟ್ಟಿದೆ ಟೀಂ ಇಂಡಿಯಾ

ಭಾರತ ಕ್ರಿಕೆಟ್ ತಂಡ ಶಿಸ್ತು ಹಾಗೂ ಕ್ರೀಡಾಸ್ಪೂರ್ತಿಯ ವಿಚಾರದಲ್ಲಿ ರಾಜಿಯಾಗಿಲ್ಲ. ಇದರ ಹೊರತಾಗಿಯೂ ಟೆಸ್ಟ್ ಪಂದ್ಯವೊಂದರಲ್ಲಿ ಗರಿಷ್ಠ ಇತರೆ ರನ್ ನೀಡಿ ಟೀಕೆಗೆ ಗುರಿಯಾಗಿದೆ. 2007ರಲ್ಲಿ ಪಾಕಿಸ್ತಾನ ವಿರುದ್ದ ಬೆಂಗಳೂರಿನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಭಾರತ 76 ರನ್‌ಗಳನ್ನು ಇತರೆಯಾಗಿ ನೀಡಿ ಟೀಕೆಗೆ ಗುರಿಯಾಗಿತ್ತು.

4.  ಅತಿಹೆಚ್ಚು ಬೌಂಡರಿ ನೀಡಿದ ತಂಡವೂ ಭಾರತವೇ..!

ಚೊಚ್ಚಲ ಟಿ20 ವಿಶ್ವಕಪ್ ಚಾಂಪಿಯನ್ ಟೀಂ ಇಂಡಿಯಾ ಕೇವಲ ರನ್ ಬಿಟ್ಟುಕೊಡುವ ವಿಚಾರದಲ್ಲಷ್ಟೇ ಕುಖ್ಯಾತಿಗೆ ಒಳಗಾಗಿಲ್ಲ. ಬದಲಾಗಿ ಟಿ20 ಕ್ರಿಕೆಟ್‌ನಲ್ಲಿ ಅತಿಹೆಚ್ಚು ಬೌಂಡರಿ ನೀಡಿದ ತಂಡವು ಭಾರತವೇ ಆಗಿದೆ. 2009ರಲ್ಲಿ ಶ್ರೀಲಂಕಾ ತಂಡವು ಭಾರತ ಪ್ರವಾಸ ಕೈಗೊಂಡಿತ್ತು. ಈ ವೇಳೆ ನಡೆದ ಟಿ20 ಪಂದ್ಯದಲ್ಲಿ ಭಾರತೀಯ ಬೌಲರ್‌ಗಳು ಒಂದೇ ಪಂದ್ಯದಲ್ಲಿ 29 ಬೌಂಡರಿ ಹೊಡೆಸಿಕೊಂಡಿದ್ದರು.

loader