ಈ ಮೂವರು ಟೀಂ ಇಂಡಿಯಾ ಸ್ಪಿನ್ನರ್‌ಗಳು ಕುಲ್ದೀಪ್ ಯಾದವ್ ಸ್ಥಾನ ತುಂಬಬಹುದು..!
ಬೆಂಗಳೂರು: ಟೀಂ ಇಂಡಿಯಾ ಚೈನಾಮನ್ ಸ್ಪಿನ್ನರ್ ಖ್ಯಾತಿಯ ಕುಲ್ದೀಪ್ ಯಾದವ್ ಫಾರ್ಮ್ ಕಂಡುಕೊಳ್ಳಲು ಪರದಾಡುತ್ತಿದ್ದಾರೆ. ಇಂಗ್ಲೆಂಡ್ ವಿರುದ್ದದ ಸೀಮಿತ ಓವರ್‌ಗಳ ಸರಣಿಯಲ್ಲಿ 26 ವರ್ಷದ ಕುಲ್ದೀಪ್ ಯಾದವ್‌ಗೆ ಸಾಲು ಸಾಲು ಅವಕಾಶ ನೀಡಲಾಗುತ್ತಿದೆಯಾದರೂ, ಅದನ್ನು ಸರಿಯಾಗಿ ಬಳಸಿಕೊಳ್ಳಲು ಯಶಸ್ವಿಯಾಗುತ್ತಿಲ್ಲ.ಇಂಗ್ಲೆಂಡ್ ವಿರುದ್ದದ ಮೊದಲೆರಡು ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಕುಲ್ದೀಪ್ ಯಾದವ್‌ಗೆ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ನೀಡಿತ್ತು. ಅದರೆ ಎರಡು ಪಂದ್ಯಗಳಲ್ಲೂ ಕುಲ್ದೀಪ್ ಯಾದವ್ ದಯಾನೀಯ ವೈಫಲ್ಯ ಅನುಭವಿಸಿದ್ದರು. ಹೀಗಾಗಿ ಮುಂಬರುವ ಸರಣಿಗಳಲ್ಲಿ ಕುಲ್ದೀಪ್ ಯಾದವ್ ಸ್ಥಾನ ತುಂಬಬಲ್ಲ ಸ್ಪಿನ್ನರ್ ಯಾರು ಎನ್ನುವ ಚರ್ಚೆ ಜೋರಾಗಿದೆ.

1. ವಾಷಿಂಗ್ಟನ್ ಸುಂದರ್:

1. ವಾಷಿಂಗ್ಟನ್ ಸುಂದರ್:

ವಾಷಿಂಗ್ಟನ್ ಸುಂದರ್ 2021ರ ಆರಂಭದಿಂದಲೂ ಭಾರತ ತಂಡದ ಪರ ಸ್ಥಿರ ಪ್ರದರ್ಶನ ತೋರುವ ಮೂಲಕ ಗಮನ ಸೆಳೆಯುತ್ತಾ ಬಂದಿದ್ದಾರೆ. ಬ್ಯಾಟಿಂಗ್ ಹಾಗೂ ಬೌಲಿಂಗ್ ಮೂಲಕ ಸುಂದರ್ ತಂಡಕ್ಕೆ ಉಪಯುಕ್ತ ಆಲ್ರೌಂಡ್ ಪ್ರದರ್ಶನ ತೋರಿದ್ದಾರೆ.

ಪವರ್‌ಪ್ಲೇನಲ್ಲೇ ರನ್ ವೇಗಕ್ಕೆ ಕಡಿವಾಣ ಹಾಕಬಲ್ಲ ಪರಿಣಾಮಕಾರಿ ಎನಿಸಿರುವ ವಾಷಿಂಗ್ಟನ್ ಸುಂದರ್, ಅಗತ್ಯವಿದ್ದರೆ ಬ್ಯಾಟಿಂಗ್‌ನಲ್ಲೂ ರನ್ ಕಾಣಿಸಿ ನೀಡಬಲ್ಲವರಾಗಿದ್ದಾರೆ. ಹೀಗಾಗಿ ಮುಂಬರುವ ಸರಣಿಗಳಲ್ಲಿ ವಾಷಿಂಗ್ಟನ್ ಸುಂದರ್, ಚೈನಾಮನ್ ಸ್ಪಿನ್ನರ್ ಸ್ಥಾನ ತುಂಬಿದರೂ ಅಚ್ಚರಿ ಪಡುವಂತಿಲ್ಲ.

2. ರಾಹುಲ್ ಚಹಾರ್

2. ರಾಹುಲ್ ಚಹಾರ್

ತಮ್ಮ ಫ್ಲೈಟೆಡ್ ಗೂಗ್ಲಿ ಮೂಲಕ ಎದುರಾಳಿ ಬ್ಯಾಟ್ಸ್‌ಮನ್‌ಗಳನ್ನು ತಬ್ಬಿಬ್ಬು ಮಾಡುವ ಕಲೆ ಲೆಗ್‌ಸ್ಪಿನ್ನರ್ ರಾಹುಲ್ ಚಹಾರ್‌ಗೆ ಸಿದ್ದಿಸಿದೆ. ಮಣಿಕಟ್ಟು ಸ್ಪಿನ್ನರ್ ಆಗಿರುವ ಚಹಾರ್ ಎದುರಾಳಿ ಬ್ಯಾಟ್ಸ್‌ಮನ್‌ಗಳ ರನ್ ಗಳಿಕೆಯ ವೇಗಕ್ಕೂ ಕಡಿವಾಣ ಹಾಕುವ ಕ್ಷಮತೆ ಹೊಂದಿದ್ದಾರೆ.

13ನೇ ಆವೃತ್ತಿಯ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ಪರ ಯಶಸ್ವಿ ಸ್ಪಿನ್ನರ್‌ಗಳಲ್ಲಿ ಒಬ್ಬರು ಎನಿಸಿಕೊಂಡಿದ್ದ ಚಹಾರ್ ಮುಂಬರುವ ದಿನಗಳಲ್ಲಿ ಕುಲ್ದೀಪ್ ಅವರನ್ನು ಬದಿಗೆ ಆ ಸ್ಥಾನ ತುಂಬುವ ಸಾಧ್ಯತೆಯಿದೆ.

3. ರವಿಚಂದ್ರನ್ ಅಶ್ವಿನ್

3. ರವಿಚಂದ್ರನ್ ಅಶ್ವಿನ್

ಟೀಂ ಇಂಡಿಯಾ ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಚೈನಾಮನ್ ಸ್ಪಿನ್ನರ್ ಸ್ಥಾನದ ಮೇಲೆ ಕಣ್ಣಿಟ್ಟಿರುವ ಪ್ರಬಲ ಸ್ಪರ್ಧಿ ಎಂದರೆ ತಪ್ಪಾಗಲಾರದು. ಇತ್ತೀಚೆಗಷ್ಟೇ ಮುಕ್ತಾಯವಾದ ಇಂಗ್ಲೆಂಡ್ ವಿರುದ್ದದ ಟೆಸ್ಟ್ ಸರಣಿಯಲ್ಲಿ ಅಶ್ವಿನ್ ವಿಕೆಟ್ ಕಬಳಿಸಿದ ಬೌಲರ್ ಆಗಿ ಹೊರಹೊಮ್ಮಿದ್ದರು.

ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಅಶ್ವಿನ್ ಅಪಾರ ಅನುಭವ ಹೊಂದಿದ್ದು, ಮುಂಬರುವ ಸೀಮಿತ ಓವರ್‌ಗಳ ಸರಣಿಯಲ್ಲಿ ಅಶ್ವಿನ್ ಮಣಿಕಟ್ಟು ಸ್ಪಿನ್ನರ್ ಕುಲ್ದೀಪ್‌ಗೆ ಬೆಂಚ್ ಕಾಯಿಸುವಂತೆ ಮಾಡಿದರೂ ಅಚ್ಚರಿ ಪಡುವಂತಿಲ್ಲ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.