ಆಸೀಸ್ ವಿರುದ್ಧ ಸಚಿನ್ ತೆಂಡುಲ್ಕರ್ ದಾಖಲೆ ಸರಿಗಟ್ಟಿದ ವಿರಾಟ್ ಕೊಹ್ಲಿ..!
ಸಿಡ್ನಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಫಾರ್ಮ್‌ಗೆ ಮರಳುವಲ್ಲಿ ಯಶಸ್ವಿಯಾಗಿದ್ದಾರೆ. ಇದರ ಜತೆಗೆ ಕ್ರಿಕೆಟ್ ದಿಗ್ಗಜ ಸಚಿನ ತೆಂಡುಲ್ಕರ್ ದಾಖಲೆಯನ್ನು ಸರಿಗಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
ಹೌದು, ಈಗಾಗಲೇ ತಂಡವೊಂದರ ವಿರುದ್ಧ ಅತಿ ಕಡಿಮೆ ಇನಿಂಗ್ಸ್‌ಗಳಲ್ಲಿ 2000 ರನ್ ಬಾರಿಸಿದ ದಾಖಲೆ ವಿರಾಟ್ ಕೊಹ್ಲಿ ಹೆಸರಿನಲ್ಲಿದೆ. ವಿರಾಟ್ ಕೊಹ್ಲಿ ವೆಸ್ಟ್ ಇಂಡೀಸ್ ತಂಡದ ವಿರುದ್ಧ ಕೇವಲ 34 ಇನಿಂಗ್ಸ್‌ಗಳಲ್ಲಿ ಎರಡು ಸಾವಿರ ರನ್ ಪೂರೈಸಿದ ಸಾಧನೆ ಮಾಡಿದ್ದಾರೆ. ಇನ್ನು ಆಸ್ಟ್ರೇಲಿಯಾ ವಿರುದ್ಧ ಸಚಿನ್ ತೆಂಡುಲ್ಕರ್ 40 ಇನಿಂಗ್ಸ್‌ಗಳಲ್ಲಿ 2000 ರನ್ ಬಾರಿಸಿದ್ದರು. ಆ ದಾಖಲೆಯನ್ನು ಇದೀಗ ವಿರಾಟ್ ಕೊಹ್ಲಿ ಸರಿಗಟ್ಟಿದ್ದಾರೆ
ಅತಿವೇಗವಾಗಿ ತಂಡವೊಂದರ ವಿರುದ್ಧ 2000 ರನ್ ಬಾರಿಸಿದ 6 ಸಾಧಕರ ವಿವರ ಇಲ್ಲಿದೆ ನೋಡಿ
1. ವಿರಾಟ್ ಕೊಹ್ಲಿ: ವೆಸ್ಟ್ ಇಂಡೀಸ್ ವಿರುದ್ಧ 34 ಇನಿಂಗ್ಸ್‌ಗಳಲ್ಲಿ 2000 ರನ್ ಬಾರಿಸಿದ್ದಾರೆ.
2. ರೋಹಿತ್ ಶರ್ಮಾ: ಆಸ್ಟ್ರೇಲಿಯಾ ವಿರುದ್ಧ 37 ಇನಿಂಗ್ಸ್‌ಗಳಲ್ಲಿ 2000 ರನ್ ಬಾರಿಸಿದ್ದಾರೆ.
3. ಸಚಿನ್ ತೆಂಡುಲ್ಕರ್: ಆಸ್ಟ್ರೇಲಿಯಾ ವಿರುದ್ಧ 40 ಇನಿಂಗ್ಸ್‌ಗಳಲ್ಲಿ 2000 ರನ್ ಬಾರಿಸಿದ್ದಾರೆ.
4. ವಿರಾಟ್ ಕೊಹ್ಲಿ: ಆಸ್ಟ್ರೇಲಿಯಾ ವಿರುದ್ಧ 40 ಇನಿಂಗ್ಸ್‌ಗಳಲ್ಲಿ 2000 ರನ್ ಬಾರಿಸಿ ಸಚಿನ್ ದಾಖಲೆ ಸರಿಗಟ್ಟಿದ್ದಾರೆ
5. ವೀವ್ ರಿಚರ್ಡ್ಸ್: ಆಸ್ಟ್ರೇಲಿಯಾ ವಿರುದ್ಧ 44 ಇನಿಂಗ್ಸ್‌ಗಳಲ್ಲಿ 2000 ರನ್ ಸಿಡಿಸಿದ್ದಾರೆ
6. ವಿರಾಟ್ ಕೊಹ್ಲಿ: ಶ್ರೀಲಂಕಾ ವಿರುದ್ಧ 44 ಇನಿಂಗ್ಸ್‌ಗಳಲ್ಲಿ 2 ಸಾವಿರ ರನ್ ಪೂರೈಸುವ ಮೂಲಕ ವೀವ್ ರಿಚರ್ಡ್ಸ್ ದಾಖಲೆ ಸರಿಗಟ್ಟಿದ್ದಾರೆ