ತುಂಡುಡುಗೆಯಲ್ಲಿ ಆನಿಮಲ್ ನಟಿ ತೃಪ್ತಿ ದಿಮ್ರಿ ಹಾಟ್ ಲುಕ್; ಫೋಟೋಸ್ ವೈರಲ್
ಅನಿಮಲ್ ಚಿತ್ರದಲ್ಲಿ ರಣಬೀರ್ ಕಪೂರ್ ಅವರ ಜೊತೆ ಬಿಂದಾಸ್ ಆಗಿ ನಟಿಸಿದ ನಂತರದಿಂದ ನಟಿ ತೃಪ್ತಿ ಡಿಮ್ರಿ ಸಖತ್ ಜನಪ್ರಿಯವಾಗಿದ್ದಾರೆ. ಈಗ ಮತ್ತೊಮ್ಮೆ ತೃಪ್ತಿ ತನ್ನ ಹಾಟ್ ಆವತಾರದಿಂದ ನ್ಯೂಸ್ ಆಗಿದ್ದಾರೆ. ನಟಿಯ ಹೊಸ ಬೋಲ್ಡ್ ಫೋಟೋಗಳು ವೈರಲ್ ಆಗಿವೆ.
ಅನಿಮಲ್ ಚಿತ್ರದಲ್ಲಿನ ಪಾತ್ರಕ್ಕೆ ಹೆಸರುವಾಸಿ ತೃಪ್ತಿ ಡಿಮ್ರಿ ಮುಂಬರುವ ಚಿತ್ರ ಬ್ಯಾಡ್ ನ್ಯೂಜ್ ಸಿನಿಮಾದಲ್ಲಿ ವಿಕ್ಕಿ ಕೌಶಲ್ ಜೊತೆಗೆ ನಟಿಸಲು ಸಜ್ಜಾಗುತ್ತಿದ್ದಾರೆ.
ಬ್ಯಾಡ್ ನ್ಯೂಸ್ ಸಿನಿಮಾದ ಟ್ರೈಲರ್ ಲಾಂಚ್ನಲ್ಲಿ ಕಪ್ಪು ಮಿನುಗುವ ಮಿನಿ ಡ್ರೆಸ್ನಲ್ಲಿ ಸಿಕ್ಕಾಪಟ್ಟೆ ಹಾಟ್ ಆಗಿ ಕಾಣಿಸಿಕೊಂಡ ನಟಿ ತೃಪ್ತಿ ಡಿಮ್ರಿ ಎಲ್ಲರ ಗಮನ ಸೆಳೆದಿದ್ದಾರೆ.
ತೃಪ್ತಿ ಡಿಮ್ರಿ, ವಿಕ್ಕಿ ಕೌಶಲ್ ಮತ್ತು ಆಮಿ ವಿರ್ಕ್ ನಟಿಸಿರುವ ಬ್ಯಾಡ್ ನ್ಯೂಸ್ ನಗು ಮತ್ತು ಭಾವನೆಗಳ ರೋಲರ್ ಮಿಶ್ರಣ ಎಂದು ಸಿನಿಮಾದ ಟ್ರೈಲರ್ ಸುಳಿವು ನೀಡುತ್ತದೆ.
ನಟಿ ತೃಪ್ತಿ ಅವರು ತನ್ನ ಹುಟ್ಟಲಿರುವ ಮಗುವಿನ ತಂದೆಯ ಯಾರು ಎಂಬ ಸಂದಿಗ್ಧತೆಯನ್ನು ಎದುರಿಸುವ ಪಾತ್ರವನ್ನು ನಿರ್ವಹಿಸಲಿದ್ದಾರೆ.
ತೃಪ್ತಿಯ ಪಾತ್ರವು ತನ್ನ ಮಗುವಿನ ತಂದೆಯ ಬಗ್ಗೆ ಹೊಂದಿರುವ ಗೊಂದಲವು ಅಸ್ತವ್ಯಸ್ತವಾಗಿರುವ ಮತ್ತು ಹಾಸ್ಯ ಸನ್ನಿವೇಶಗಳನ್ನು ಹುಟ್ಟು ಹಾಕುತ್ತದೆ.
.
ಆನಂದ್ ತಿವಾರಿ ನಿರ್ದೇಶಿಸಿದ ಈ ಚಿತ್ರ ವಿನೋದ ಮತ್ತು ಭಾವನಾ ಪ್ರಪಂಚದ ಕಥೆಯನ್ನು ಹೊಂದಿದೆ. ಈ ಹಿಂದೆ ತೆರೆ ಕಂಡ ಗುಡ್ ನ್ಯೂಸ್ ಸಿನಿಮಾವನ್ನು ನೆನಪಿಸುವಂತಿದೆ ಎಂದೆನಿಸುತ್ತದೆ.
ಧರ್ಮ ಪ್ರೊಡಕ್ಷನ್ಸ್ ನಿರ್ಮಿಸಿದ ಬ್ಯಾಡ್ ನ್ಯೂಸ್ ಹಾಸ್ಯಮಯ ತಿರುವುಗಳ ನಡುವೆ ಸಂಬಂಧ ಮತ್ತು ಪೋಷಕರನ್ನು ಅನ್ವೇಷಿಸುವ ಕಥಾವಸ್ತುವನ್ನು ಹೊಂದಿರುವ ಚಿತ್ರ.
ಕ್ರೊಯೇಷಿಯಾದಲ್ಲಿ ವಿಕ್ಕಿ ಕೌಶಲ್ ಮತ್ತು ತೃಪ್ತಿಯ ಕೆಮಿಸ್ಟ್ರಿ ಚಿತ್ರೀಕರಣದ ಫೋಟೋಗಳು ವೈರಲ್ ಆಗಿದೆ. ಜುಲೈ 19 ರಂದು ಥಿಯೇಟರ್ಗಳನ್ನು ತಲುಪಲಿರುವ ಚಿತ್ರದ ನಿರೀಕ್ಷೆಯನ್ನು ಹೆಚ್ಚಿಸಿದೆ
.