ಮದ್ಯವಯಸ್ಸಿನ ಜೀವನದ ಸುತ್ತುವ ಕಥಾವಸ್ತು, ಈ ಚಿತ್ರಗಳು ಓಟಿಟಿಯಲ್ಲಿ ಲಭ್ಯ!
ಈಗಿನ ಸಿನಿಮಾಗಳ ಕಥೆಗಳು ಕೇವಲ ಪ್ರೀತಿ ಅಥವಾ ಫ್ಯಾಮಿಲಿ ಡ್ರಾಮಾಕ್ಕೆ ಮಾತ್ರ ಸೀಮಿತವಾಗಿಲ್ಲ. ಹದಿಹರೆಯದ ಸಮಸ್ಯೆಗಳಿಂದ ಹಿಡಿದು ಮಧ್ಯವಯಸ್ಕರ ತುಮಲಗಳು ಮತ್ತು ವಯೋವೃದ್ಧರ ಮನಸ್ಥಿತಿಯವರೆಗೆ ವಿಭಿನ್ನ ಕಥಾವಸ್ತುಗಳನ್ನು ಹೊಂದಿರುತ್ತವೆ. ಅದರಲ್ಲೂ ಈ ದಿನಗಳಲ್ಲಿ 40 ವರ್ಷದ ನಂತರದ ಜೀವನದ ಬಗ್ಗೆಯ ಕಥೆಗಳನ್ನು ಹೊಂದಿರುವ ಸಿನಿಮಾಗಳು ಸಾಕಷ್ಷು ಸದ್ದು ಮಾಡುತ್ತಿವೆ. ಇಂಗ್ಲೀಷ್ ವಿಂಗ್ಲಿಷ್, ಪಿಕು, ಡಿಯರ್ ಜಿಂದಗಿ , ಥ್ರೀ ಅಫ್ ಅಸ್ ಈ ಪಟ್ಟಿಯಲ್ಲಿರುವ ಕೆಲವು ಟಾಪ್ ಸಿನಿಮಾಗಳಾಗಿವೆ.
Three of Us
ಥ್ರೀ ಆಫ್ ಅಸ್:
ನರಗಳಿಗೆ ಸಂಬಂಧಿಸಿದ ಖಾಯಿಲೆಯಿಂದ ನೆನಪು ಕಳೆದುಕೊಳ್ಳುತ್ತಿರುವ ಮಹಿಳೆ ತನ್ನ ಹಿಂದಿನ ನೆನಪನ್ನು ಮರುಶೋಧಿಸುವ ಕಥೆಯೇ ಥ್ರೀ ಆಫ್ ಅಸ್ ಸಿನಿಮಾ. ಇದು Netflix ನಲ್ಲಿದೆ.
Piku
ಪಿಕು:
ಪಿಕು ಪ್ರಾಥಮಿಕವಾಗಿ ಅಮಿತಾಭ್ ಬಚ್ಚನ್ ಮತ್ತು ದೀಪಿಕಾ ಪಡುಕೋಣೆ ನಿರ್ವಹಿಸಿದ ತಂದೆ ಮತ್ತು ಮಗಳ ನಡುವಿನ ಸಂಬಂಧದ ಮೇಲೆ ಕೇಂದ್ರೀಕರಿಸುತ್ತದೆ. ಈ ಚಲನಚಿತ್ರವು ಸೋನಿ ಲೈವ್‌ನಲ್ಲಿ ಲಭ್ಯವಿದೆ.
ಡಿಯರ್ ಜಿಂದಗಿ:
ಡಿಯರ್ ಜಿಂದಗಿ ಸಿನಿಮಾ ಒಂದು ಯುವತಿ ಮತ್ತುಅವಳ ಥೆರೆಪಿಸ್ಟ್ ಅವರ ಸ್ವಯಂ ಅನ್ವೇಷಣೆಯ ಪ್ರಯಾಣವನ್ನು ಪ್ರಾರಂಭಿಸುವ ಸುತ್ತುವ ಕಥೆ. ಇದು ನೆಟ್‌ಫ್ಲಿಕ್ಸ್‌ನಲ್ಲಿದೆ
ಇಂಗ್ಲೀಷ್ ವಿಂಗ್ಲಿಷ್:
ಇಂಗ್ಲಿಷ್ ವಿಂಗ್ಲಿಷ್ ಸಿನಿಮಾವು ಇಂಗ್ಲಿಷ್ ಕಲಿತು ತನ್ನಲ್ಲಿ ಆತ್ಮವಿಶ್ವಾಸವನ್ನುಗಳಿಸುವ ಮಹಿಳೆಯ ಸ್ವಯಂ ಅನ್ವೇಷಣೆ ಮತ್ತು ಸಬಲೀಕರಣದ ಪ್ರಯಾಣವನ್ನು ಅನುಸರಿಸುತ್ತದೆ. ಇದು jiocinema ನಲ್ಲಿದೆ.
ಲಂಚ್ ಬಾಕ್ಸ್:
ಲಂಚ್ ಬಾಕ್ಸ್ ಒಂದು ಅನನ್ಯ ಮತ್ತು ಹೃದಯವನ್ನು ಬೆಚ್ಚಗಾಗುವ ಅಸಂಭವ ಸ್ನೇಹದ ಕಥೆಯಾಗಿದ್ದು, ಅದು ಊಟದ ಪೆಟ್ಟಿಗೆಗಳನ್ನು ವಿನಿಮಯ ಮಾಡಿಕೊಳ್ಳುವ ಮೂಲಕ ಅರಳುತ್ತದೆ. ಈ ಸಿನಿಮಾ ಪ್ರೈಮ್ ವೀಡಿಯೋದಲ್ಲಿ ಲಭ್ಯ
ನಿಲ್ ಬಟ್ಟಿಯೇ ಸನ್ನಾಟ:
ನಿಲ್ ಬಟ್ಟಿಯೆ ಸನ್ನಾಟವು ಶಿಕ್ಷಕಿನಾಗುವ ಕನಸು ಕಾಣುತ್ತಿರುವ ಒಂಟಿ ತಾಯಿಯ ಹೃದಯ ಸ್ಪರ್ಶಿ ಕಥೆ. ಇದು ಜಿಯೋ ಸಿನಿಮಾದಲ್ಲಿದೆ
102 ನಾಟ್‌ಔಟ್:
102 ನಾಟ್ ಔಟ್ 102 ವರ್ಷದ ತಂದೆ ಮತ್ತು 75 ವರ್ಷದ ಅವರ ಮಗನ ಸಂಬಂಧವನ್ನು ಅನ್ವೇಷಿಸುವ ಹಾಸ್ಯ ನಾಟಕ. ಇದು ಪ್ರೈಮ್ ವಿಡಿಯೋದಲ್ಲಿದೆ.
ಬಾಗ್ಬಾನ್:
ಬಾಗ್ಬಾನ್ ತಮ್ಮ ಮಕ್ಕಳಿಂದ ತ್ಯಜಿಸಲ್ಪಟ್ಟ ವೃದ್ಧ ದಂಪತಿ ಕಥೆಯನ್ನು ಚಿತ್ರಿಸುತ್ತದೆ. ಈ ಸಿನಿಮಾ Disney+ hotStarನಲ್ಲಿ ಸ್ಟ್ರೀಮ್ ಆಗುತ್ತಿದೆ.
ಚೀನಿ ಕಮ್:
ಚೀನಿ ಕಮ್ 64 ವರ್ಷದ ಬಾಣಸಿಗ 34 ವರ್ಷದ ಮಹಿಳೆಯೊಂದಿಗೆ ಪ್ರೀತಿಯಲ್ಲಿ ಬೀಳುತ್ತಾರೆ ಮತ್ತು ಪ್ರೀತಿ, ವಯೋಮಾನ ಮತ್ತು ಸಾಮಾಜಿಕ ಮಾನದಂಡಗಳನ್ನು ಅನ್ವೇಷಿಸುವ ಸುತ್ತ ಸುತ್ತುತ್ತದೆ,. zee5 ನಲ್ಲಿ ಲಭ್ಯವಿದೆ.
ಫೈಂಡಿಗ್ ಫ್ಯಾನಿ:
ಫೈಡಿಂಗ್ ಫ್ಯಾನಿ ತನ್ನ ಕಳೆದ ಪ್ರೀತಿಯನ್ನು ಹುಡುಕಲು ರೋಡ್ ಟ್ರಿಪ್ ಕೈಗೊಳ್ಳುವ ವಿಧವೆಯ ಒಂದು ಹಾಸ್ಯಮಯ ಚಿತ್ರ. ಈ ಚಿತ್ರವು ಡಿಸ್ನಿ+ ಹಾಟ್‌ಸ್ಟಾರ್‌ನಲ್ಲಿದೆ.