ರಣವೀರ್ ಸಿಂಗ್ ನಗ್ನ ಫೋಟೋ ಶೂಟ್: ದೀಪಿಕಾ ವಿರುದ್ಧ ಕಿಡಿಕಾರಿದ ಶೆರ್ಲಿನ್ ಚೋಪ್ರಾ
ಮ್ಯಾಗಜಿನ್ಗಾಗಿ ರಣವೀರ್ ಸಿಂಗ್ (Ranveer Singh) ಅವರ ನಗ್ನ ಫೋಟೋಶೂಟ್ ಮತ್ತೊಮ್ಮೆ ಸದ್ದು ಮಾಡುತ್ತಿದೆ. ಈ ಬಾರಿ ಶೆರ್ಲಿನ್ ಚೋಪ್ರಾ (Sherlyn Chopra) ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ರಣವೀರ್ ಸಿಂಗ್ ನ್ಯೂಡ್ ಫೋಟೋ ಶೂಟ್ ಅನ್ನು ಕೆಲವರು ಹೊಗಳಿದ್ದಾರೆ. ಆದೆರೆ ತನ್ನ ಬೋಲ್ಡ್ ಮ್ಯಾಗಜೀನ್ ಫೋಟೋಶೂಟ್ಗಾಗಿ ತನ್ನನ್ನು 'ಕ್ಯಾರೆಕ್ಟರ್ಲೆಸ್' ಎಂದು ಏಕೆ ಕರೆಯಲಾಯಿತು ಎಂದು ಪ್ರಶ್ನಿಸಿದ್ದಾರೆ. ಕಾರ್ಯಕ್ರಮವೊಂದರಲ್ಲಿ ದೀಪಿಕಾ ಪಡುಕೋಣೆ ತಮ್ಮ ಉಡುಪನ್ನು ಕೀಳಾಗಿ ನೋಡುತ್ತಿದ್ದುದನ್ನು ಅವರು ನೆನಪಿಸಿಕೊಂಡರು.
ಅಂತಾರಾಷ್ಟ್ರೀಯ ನಿಯತಕಾಲಿಕೆಗಾಗಿ ರಣವೀರ್ ಸಿಂಗ್ ಅವರ ಇತ್ತೀಚಿನ ಫೋಟೋಶೂಟ್ ಸದ್ದು ಮಾಡಿತ್ತು. ಫೋಟೋಶೂಟ್ನಲ್ಲಿ ನಗ್ನ ಪೋಸ್ ನೀಡಿದ ನಟನ ವಿರುದ್ಧ ಹಲವು ಪೊಲೀಸ್ ದೂರುಗಳು ಸಹ ದಾಖಲಾಗಿವೆ. ಬಂಗಾಳಿ ನಟಿ ಮತ್ತು ರಾಜಕಾರಣಿ ಮಿಮಿ ಚಕ್ರವರ್ತಿ ಮತ್ತು ನಟಿ ಸ್ವರಾ ಭಾಸ್ಕರ್ ಅವರು ರಣವೀರ್ ಅವರ ನಗ್ನ ಫೋಟೋಗಳಿಗೆ ಪ್ರತಿಕ್ರಿಯಿಸಿದ ನಂತರ, ಈಗ ಶೆರ್ಲಿನ್ ಚೋಪ್ರಾ ಸಮಾಜದ ಡಬಲ್ ಸ್ಟಾಂಡರ್ಡ್ ಅನ್ನು ಪ್ರಶ್ನಿಸಿದ್ದಾರೆ.
ಅವರು ದೀಪಿಕಾ ಪಡುಕೋಣೆ ಅವರನ್ನೂ ತರಾಟೆಗೆ ತೆಗೆದುಕೊಂಡರು. ದೀಪಿಕಾ ಒಮ್ಮೆ ಈವೆಂಟ್ಗೆ 'ಕಡಿಮೆ ಬಟ್ಟೆ' ಧರಿಸಿದ್ದಕ್ಕಾಗಿ ನನ್ನನ್ನು ಜಡ್ಜ್ ಮಾಡಿದ್ದರು ಎಂದು ಶೆರ್ಲಿನ್ ಚೋಪ್ರಾ ಆರೋಪಿಸಿದ್ದಾರೆ.
ಪೇಪರ್ ಮ್ಯಾಗಜೀನ್ಗಾಗಿ ಪೋಟೋಶೂಟ್ನ ಫೋಟೋಗಳನ್ನು ಆನ್ಲೈನ್ನಲ್ಲಿ ಶೆರ್ಲಿನ್ ಹಂಚಿಕೊಂಡ ನಂತರ ಸೆಲೆಬ್ರೆಟಿಗಳು ಮತ್ತು ಅಭಿಮಾನಿಗಳಿಂದ ಸಾಕಷ್ಟು ಪ್ರತಿಕ್ರಿಯೆಗಳು ಹಾಗೂ ಮೆಚ್ಚುಗೆ ಗಳಿಸಿದ್ದಾರೆ.
ಈಗ, ಶೆರ್ಲಿನ್ ರಣವೀರ್ ಸಿಂಗ್ ಅವರ ನಗ್ನ ಫೋಟೋಶೂಟ್ ಬಗ್ಗೆ ಮತ್ತು ಇಂಟರ್ನೆಟ್ ಅದರ ಬಗ್ಗೆ ಹೇಗೆ ಯೋಚಿಸುತ್ತಿದೆ ಎಂಬ ವಿಷಯದ ಬಗ್ಗೆ ಮಾತಾನಾಡಿದ್ದಾರೆ.
ಅಂತಾರಾಷ್ಟ್ರೀಯ ನಿಯತಕಾಲಿಕೆಗಾಗಿ ತಾನು ಇದೇ ರೀತಿಯ ಫೋಟೋಶೂಟ್ ಮಾಡಿದ್ದೇನೆ, ಆದರೆ ಕೆಟ್ಟ ಮತ್ತು ಲೈಂಗಿಕ ಕಾಮೆಂಟ್ಗಳನ್ನು ಎದುರಿಸಬೇಕಾಯಿತು ಎಂದು ನಟಿ ಹೇಳಿದರು.
ನಾನು ಅಂತಾರಾಷ್ಟ್ರೀಯ ನಿಯತಕಾಲಿಕೆಗಾಗಿ ಬೋಲ್ಡ್ ಫೋಟೋಶೂಟ್ ಮಾಡಿದಾಗ, ಸಮಾಜವು ನನ್ನನ್ನು ಕ್ಯಾರೆಕ್ಟರ್ಲೆಸ್ ಮತ್ತು ಇತರ ಅನೇಕ ಹೆಸರುಗಳೆಂದು ಕರೆಯಿತು. ಡಬಲ್ ಸ್ಟಾಂಡರ್ಡ್ ಏಕೆ? ಏಕೆ ಬೂಟಾಟಿಕೆ? ನಾನು ಇದೇ ರೀತಿಯ ಫೋಟೋಶೂಟ್ ಮಾಡಿದಾಗ, ನನ್ನ ದೇಹದಲ್ಲಿ ಏನಾದರೂ ದೋಷವಿದೆಯೇ ? ಇಂಡಿಯಾ ಟುಡೇಗೆ ನೀಡಿದ ಸಂದರ್ಶನದಲ್ಲಿ ಶೆರ್ಲಿನ್ ಹೇಳಿದ್ದಾರೆ.
ರಣವೀರ್ನ ಫೋಟೋಶೂಟ್ಗೆ ತಾನು ಏಕೆ ಪ್ರತಿಕ್ರಿಯಿಸುತ್ತಿದ್ದೇನೆ ಎಂಬುದರ ಕುರಿತು ಮಾತನಾಡಿದ ಶೆರ್ಲಿನ್, ನಾನು ಒಮ್ಮೆ ಕಡಿಮೆ ಬಟ್ಟೆಗಳನ್ನು ಧರಿಸಿದ್ದಕ್ಕಾಗಿ ಅವರ ಪತ್ನಿ ದೀಪಿಕಾ ನನ್ನನ್ನು ಜಡ್ಜ್ ಮಾಡಿದ್ದರು ಎಂದು ಹೇಳಿದರು. ತನ್ನ ಮ್ಯಾಗಜೀನ್ ಫೋಟೋಗಳಲ್ಲಿ ಬೆತ್ತಲೆಯಾಗಿದ್ದ ರಣವೀರ್ಗೆ ಹೋಲಿಸಿದರೆ ಅವರು 'ಕನಿಷ್ಠ ಏನನ್ನಾದರೂ ಧರಿಸಿದ್ದೆ ಎಂದು ಶೆರ್ಲಿನ್ ಇನ್ನಷ್ಟೂ ಹೇಳಿದ್ದಾರೆ.
ಇದೆಲ್ಲಾ ಓಕೆ ಎಂದು ಹೇಳಬೇಡಿ ಮತ್ತು ನಾವು ಅವರ ಫೋಟೋಶೂಟ್ನಿಂದ ಸಮಸ್ಯೆಯನ್ನು ಮಾಡುತ್ತಿದ್ದೇವೆ, ಅದು ವಿಷಯವಲ್ಲ. ಆದರೆ ಇದು ಒಂದು ಸಮಸ್ಯೆ. ಒಂದು ಜೊತೆ ಶಾರ್ಟ್ಸ್ನೊಂದಿಗೆ ಸಣ್ಣ ಟಾಪ್ ಧರಿಸಿದ್ದಕ್ಕಾಗಿ ದೀಪಿಕಾ ಪಡುಕೋಣೆ ನನ್ನನ್ನು ಮೇಲಿನಿಂದ ಕೆಳಕ್ಕೆ ನೋಡಿ ಜಡ್ಜ್ ಮಾಡಿರುವುದು ಸಮಸ್ಯೆ . ಕನಿಷ್ಠ, ನಾನು ಸ್ವಲ್ಪ ಬಟ್ಟೆ ಧರಿಸಿದ್ದೆ. ಅವಳ ಗಂಡನ ಬಗ್ಗೆ ಏನು, ಅವನು ಏನು ಧರಿಸಿದ್ದಾನೆ? ಅವನು ಏನನ್ನೂ ಧರಿಸಿಲ್ಲ ಎಂದು ಶೆರಲಿನ್ ಪ್ರಶ್ನಿಸಿದ್ದಾರೆ.