ವೈರಲ್ ಆಗುತ್ತಿದೆ ಶಾರುಖ್ ಮಗಳು ಸುಹಾನಾಳ ಹೊಸ ಗ್ಲಾಮರಸ್ ಪೋಟೋ
ಶಾರುಖ್ ಖಾನ್ ಪುತ್ರಿ ಸುಹಾನಾ ಖಾನ್ ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಆ್ಯಕ್ಟಿವ್.ಸುಹಾನಾ ತನ್ನ ಸ್ಟೈಲಿಗೆ ಫೇಮಸ್. ಇತ್ತೀಚೆಗೆ ಸುಹಾನಾಕೆಲವು ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾಳೆ. ಈವ್ನಿಂಗ್ ಮೇಕಪ್‌ನಲ್ಲಿ ಕಾಣಿಸಿಕೊಂಡಿರುವ ಸುಹಾನಾಳ ಲುಕ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಕಪ್ಪು ಟಾಪ್ ಮತ್ತು ತೆರೆದ ಕೂದಲಿನ ಸುಹಾನಾಳ ಫೋಟೋಗೆ ಸಖತ್ ಕಾಮೆಂಟ್‌ಗಳು ಬರುತ್ತಿವೆ.
ಸುಹಾನಾಳ ಈ ಲೇಟೇಸ್ಟ್ ಪೋಟೋಗೆ ಬೋಲ್ದ್ ಆಗಿರುವ ಅವಳ ಫಾಲೋವರ್ಸ್.
ಕಿಂಗ್ ಖಾನ್ ಪುತ್ರಿಯ ಹೊಸ ಗ್ಲಾಮರಸ್ ಲುಕ್‌ಗೆ ಸಿಗುತ್ತಿದೆ ಸಖತ್ ಕಾಮೆಂಟ್
ಕೆಲವರು ಅವಳ ಲುಕ್‌ಗೆ ಬೆರಗಾದರೆ, ಇನ್ನೂ ಕೆಲವರು ಗಾರ್ಜಿಯಸ್ ಎಂದಿದ್ದಾರೆ.
'walked into the room, you know you made my eyes burn it was like James Dean' ಎಂದು ಕಾಪ್ಷನ್ ಜೊತೆ ಫೋಟೋ ಪೋಸ್ಟ್ ಮಾಡಿದ್ದಾಳೆ.
ಸುಹಾನಾ ಲಂಡನ್‌ನಲ್ಲಿ ಓದುತ್ತಿದ್ದು, ಕೊರೋನಾ ವೈರಸ್ ಕಾರಣ ಲಾಕ್‌ಡೌನ್‌ನಿಂದಾಗಿ ಸದ್ಯಕ್ಕೆ ಫ್ಯಾಮಿಲಿ ಜೊತೆ ಮುಂಬೈನಲ್ಲಿದ್ದಾಳೆ.
ಪಪ್ಪಾ ಶಾರುಖ್‌ನಂತೆ ನಟನಾ ಕ್ಷೇತ್ರದಲ್ಲಿ ಕೆರಿಯರ್ ಮುಂದುವರಿಸಲು ಬಯಸುವ ಸುಹಾನಾ ಶಾಲೆಯಲ್ಲಿ ಅನೇಕ ನಾಟಕಗಳಲ್ಲಿ ಭಾಗವಹಿಸಿದ್ದಾಳೆ.
ಶಾರುಖ್ ಮುದ್ದಿನ ಮಗಳು ಬಾಲಿವುಡ್‌ನ ಫೇಮಸ್ ಸ್ಟಾರ್ ಕಿಡ್ ಸಿನಿಮಾಕ್ಕೆ ಎಂಟ್ರಿ ಕೊಡುವ ಮೊದಲೇ ಸಾಕಷ್ಟು ಫ್ಯಾನ್ಸ್ ಹೊಂದಿದ್ದಾಳೆ ಈ ಹುಡುಗಿ.
'ಹುಡುಗ ನನ್ನ ಮಗಳ ತುಟಿಗಳಿಗೆ ಮುತ್ತಿಟ್ಟರೆ, ನಾನು ಅವನ ತುಟಿಯನ್ನು ಹರಿದು ಹಾಕುತ್ತೇನೆ' ಎಂದು ಮಗಳ ಬಗ್ಗೆ ಪ್ರಶ್ನೆಗೆ ಶಾರುಖ್ ಒಮ್ಮೆ ಕರಣ್ ಜೋಹರ್ ಅವರ 'ಕಾಫಿ ವಿಥ್ ಕರಣ್' ಕಾರ್ಯಕ್ರಮದಲ್ಲಿ ಹೇಳಿದರು.
ಮಗಳು ಸುಹಾನಾಳನ್ನು ಡೇಟ್ ಮಾಡಲು ಬಯಸುವ ಹುಡುಗರಿಗಾಗಿ ಕೆಲವು ಷರತ್ತುಗಳನ್ನು ಹಾಕಿದ್ದೇನೆ ಹಾಗೂ ಮಗಳ ಜೀವನದಲ್ಲಿ ಒಳ್ಳೆಯ ವ್ಯಕ್ತಿ ಬರಬೇಕೆಂದು ಬಯಸುತ್ತೇನೆ ಎಂದೂ ಶಾರುಖ್ ಕೆಲವು ವರ್ಷಗಳ ಹಿಂದೆ, ಶಾರುಖ್ ಖಾನ್ 'ಫೆಮಿನಾ'ಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರು.
ಆಗಸ್ಟ್ 2018 ರಲ್ಲಿ, 18 ವರ್ಷದ ಸುಹಾನಾ ಮ್ಯಾಗ್‌ಜೀನ್ ಕವರ್‌ಪೇಜಿನಲ್ಲಿ ಕಾಣಿಸಿಕೊಂಡಿದ್ದರು. ಗ್ಲಾಮರ್ ಮ್ಯಾಗ್‌ಜೀನ್ ವೋಗ್ನದಲ್ಲಿ ಮೋಹಕ ಅವತಾರದಲ್ಲಿ ಕಾಣಿಸಿಕೊಂಡದ್ದಿಳು. ಶಾರುಖ್ ಸ್ವತಃ ಪತ್ರಿಕೆಯ ಮುಖಪುಟವನ್ನು ಲಾಂಚ್ ಮಾಡಿದ್ದರು.
ಸುಹಾನಾ ಖಾನ್‌ಗಿಂತ ಮೊದಲು, ತಾಯಿ ಗೌರಿ ಖಾನ್ ಶಾರುಖ್ ಖಾನ್ ವಾಕ್ಸ್ ಸ್ಟ್ಯಾಚು ಜೊತೆ ಪೋಸ್ ನೀಡಿದ ಫೋಟೋವನ್ನು ಹಂಚಿಕೊಂಡಿದ್ದರು. ರಿಯಲ್ ಶಾರುಖ್ ಕೂಡ ಈ ಫೋಟೋದಲ್ಲಿದ್ದರು.
ಈ ಫೋಟೋ ಕುರಿತು ಪ್ರತಿಕ್ರಿಯಿಸಿದ ಶಾರುಖ್, ಕಳೆದ ಒಂದೂವರೆ ವರ್ಷದಿಂದ ಯಾವುದೇ ಕೆಲಸವಿಲ್ಲದೆ ಮನೆಯಲ್ಲಿದ್ದೇನೆ ಎಂದು ಹೇಳಿದರು.