Gehraiyaan Promotion: ಸಿನಿಮಾ ಪ್ರಚಾರದಲ್ಲಿ ಸೆಕ್ಸಿ ಲುಕ್ನಲ್ಲಿ ದೀಪಿಕಾ, ಅನನ್ಯಾ ಪಾಂಡೆ
ಈ ದಿನಗಳಲ್ಲಿ ದೀಪಿಕಾ ಪಡುಕೋಣೆ (Deepika padukone)ಅವರ 'ಗೆಹ್ರಾಯನ್' (Gehraiyaan) ಸಿನಿಮಾ ಕಾರಣದಿಂದ ಚರ್ಚೆಯಲ್ಲಿದ್ದಾರೆ. ಈ ಸಿನಿಮಾದಲ್ಲಿ ಅವರು ತುಂಬಾ ಬೋಲ್ಡ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರವನ್ನು ಫೆಬ್ರವರಿ 11 ರಂದು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಹಾಗಾಗಿ ಇದೀಗ ಚಿತ್ರದ ನಿರ್ದೇಶಕರು ಇಡೀ ತಾರಾ ಬಳಗದ ಜೊತೆ ಪ್ರಚಾರಕ್ಕೆ ಮುಂದಾಗಿದ್ದಾರೆ. ಸೋಮವಾರ, ದೀಪಿಕಾ ಪಡುಕೋಣೆ, ಅನನ್ಯಾ ಪಾಂಡೆ (Ananya Panday), ಸಿದ್ಧಾಂತ್ ಚತುರ್ವೇದಿ (Siddhant Chaturvedi) ಮತ್ತು ಧೈರ್ಯ ಕರ್ವಾ (Dhairya Karwa) ಚಿತ್ರದ ಪ್ರಚಾರದಲ್ಲಿ ಪಾಲ್ಗೊಂಡಿದ್ದರು. ಈ ಸಮಯದಲ್ಲಿ, ದೀಪಿಕಾ ಮತ್ತು ಅನನ್ಯಾ ತುಂಬಾ ಗ್ಲಾಮರಸ್ ಅವತಾರದಲ್ಲಿ ಕಾಣಿಸಿಕೊಂಡರು.
ಸೋಮವಾರ, ಮುಂಬೈನ ತಾಜ್ ಹೋಟೆಲ್ನಲ್ಲಿ ಚಿತ್ರದ ಪ್ರಚಾರ ಕಾರ್ಯಕ್ರಮ ನಡೆಯಿತು, ಇದರಲ್ಲಿ ದೀಪಿಕಾ ಪಡುಕೋಣೆ, ಶಕುನ್ ಬಾತ್ರಾ, ಸಿದ್ಧಾಂತ್ ಚತುರ್ವೇದಿ, ಧೈರ್ಯ ಕರ್ವಾ ಮತ್ತು ಅನನ್ಯಾ ಪಾಂಡೆ ಉಪಸ್ಥಿತರಿದ್ದರು.
ದೀಪಿಕಾ ಪಡುಕೋಣೆ ಮತ್ತು ಅನನ್ಯಾ ಪಾಂಡೆ ಅವರ ಲುಕ್ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ. ಈ ವೇಳೆ ದೀಪಿಕಾ ಪಡುಕೋಣೆ ಆರೆಂಜ್ ಕಟ್ ಔಟ್ ಮ್ಯಾಕ್ಸಿ ಡ್ರೆಸ್ ನಲ್ಲಿ ಕಾಣಿಸಿಕೊಂಡಿದ್ದು, ಅವರ ಸ್ಟೈಲಿಶ್ ಲುಕ್ ಎಲ್ಲರ ಗಮನ ಸೆಳೆದಿದೆ.
ದೀಪಿಕಾ ಪಡುಕೋಣೆ ಈ ಸಮಯದಲ್ಲಿ ಆರೆಂಜ್ ಕಟ್ ಔಟ್ ಮ್ಯಾಕ್ಸಿ ಉಡುಪನ್ನು ಧರಿಸಿದ್ದರು ಗೋಲ್ಡನ್ ಕಿವಿಯೋಲೆಗಳು ಮತ್ತು ಕಪ್ಪು ಹೈ ಹೀಲ್ಸ್ನೊಂದಿಗೆ ನಟಿ ತಮ್ಮ ಲುಕ್ ಪೂರ್ಣಗೊಳಿಸಿದ್ದಾರೆ ಹಾಗೂ ತುಂಬಾ ಗ್ಲಾಮರಸ್ ಆಗಿ ಕಾಣಿಸುತ್ತಿದ್ದರು
ದೀಪಿಕಾ ತನ್ನ ಸ್ಟೈಲ್ ಶೋ ಆಫ್ ಮಾಡಲು ಯಾವುದೇ ಅವಕಾಶ ಬಿಡಲಿಲ್ಲ. ಅವರ ಲುಕ್ನ ಮ್ಯಾಜಿಕ್ ಜನರ ಮೇಲೆ ಕೆಲಸ ಮಾಡುತ್ತಿರುವುದು ಕಂಡು ಬಂದಿದೆ. ಈ ಸಮಯದ ಅವರ ಫೋಟೋಗಳು ಇಂಟರ್ನೆಟ್ನಲ್ಲಿ ಸಖತ್ ವೈರಲ್ ಆಗಿವೆ.
ಅದೇ ಸಮಯದಲ್ಲಿ, ಅನನ್ಯಾ ಪಾಂಡೆಯ ಲುಕ್ ಬಗ್ಗೆ ಹೇಳುವುದಾದರೆ ಅವರು ಬ್ರ್ಯಾಲೆಟ್ ಮತ್ತು ಆಫ್-ವೈಟ್ ಪ್ಯಾಂಟ್ ಡ್ರೆಸ್ನಲ್ಲಿ ಕಾಣಿಸಿಕೊಂಡರು. ಅನನ್ಯಾ ಸಹ ತುಂಬಾ ಸುಂದರವಾಗಿ ಕಾಣುತ್ತಿದ್ದಾರೆ
ಅವರು ಸಿದ್ಧಾಂತ್ ಚತುರ್ವೇದಿ ಅವರೊಂದಿಗೆ ಸಾಕಷ್ಟು ಪೋಸ್ ನೀಡಿದರು. ಸಿನಿಮಾದಲ್ಲಿ ಅನನ್ಯಾ ಅವರ ಫಿಯಾನ್ಸಿ ಆಗಿ ಸಿದ್ದಾಂತ್ ಪಾತ್ರವನ್ನು ಮಾಡಲಿದ್ದಾರೆ, ಆದರೆ ಅವರು ಈಗಾಗಲೇ ಮದುವೆಯಾಗಿರುವ ದೀಪಿಕಾರನ್ನು ಪ್ರೀತಿಸುತ್ತಾರೆ.
Deepika Padukone
'ಗಹ್ರೇಯಾನ್' ಮೊದಲ ಹಾಡು ಸೋಮವಾರ ಬಿಡುಗಡೆಯಾಗಿದೆ. ಈ ಹಾಡು ತುಂಬಾ ಜನರ ಮೆಚ್ಚುಗೆ ಗಳಿಸುತ್ತಿದೆ. ದೀಪಿಕಾ ಪಡುಕೋಣೆ ಮತ್ತು ಸಿದ್ಧಾಂತ್ ಅವರ ಕೆಮಿಸ್ಟ್ರಿ 'ದೂಬೆ' ಹಾಡಿನಲ್ಲಿ ಗೋಚರಿಸುತ್ತದೆ.
ಈ ಸಿನಿಮಾವನ್ನು ಕರಣ್ ಜೋಹರ್ ಅವರು ತಮ್ಮ ಧರ್ಮ ಪ್ರೊಡಕ್ಷನ್ಸ್ ಅಡಿಯಲ್ಲಿ ನಿರ್ಮಿಸಿದ್ದಾರೆ. 'ಗಹ್ರೇಯಾನ್' ಸಿನಿಮಾ ಫೆಬ್ರವರಿ 11 ರಂದು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಯಾಗಲಿದೆ.