Sunny Leone; ಪತಿಯ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡ ಹಾಟ್ ನಟಿ ಸನ್ನಿ ಲಿಯೋನ್
ಮೇ 13 ಮಾದಕ ನಟಿ ಸನ್ನಿ ಲಿಯೋನ್ ಹುಟ್ಟುಹಬ್ಬ. ಮಾಜಿ ನೀಲಿ ತಾರೆಯ ಹುಟ್ಟುಹಬ್ಬಕ್ಕೆ ಅಭಿಮಾನಿಗಳು, ಸ್ನೇಹಿತರಿಂದ ಶುಭಾಶಯಗಳ ಮಳೆಯ ಬಂದಿತ್ತು. ಸಾಮಾಜಿಕ ಜಾಲತಾಣದಲ್ಲಿ ಸನ್ನಿಲಿಯೋನ್ ಫೋಟೋ ಶೇರ್ ಮಾಡಿ ಅಭಿಮಾನಿಗಳು ಪ್ರೀತಿಯ ವಿಶ್ ಮಾಡುತ್ತಿದ್ದರು.
sunny
ಬಾಲಿವುಡ್ನ ಹಾಟ್ ಆಂಡ್ ಬೋಲ್ಡ್ ನಟಿ ಸನ್ನಿಲಿಯೋನ್ ಇತ್ತೀಚಿಗಷ್ಟೆ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿಕೊಂಡಿದ್ದಾರೆ. 41ನೇ ವರ್ಷಕ್ಕೆ ಕಾಲಿಟ್ಟ ನಟಿ ಸನ್ನಿ ಲಿಯೋನ್ ಪತಿ ಡೇನಿಯಲ್ ವೆಬರ್ ಜೊತೆ ಹುಟ್ಟುಹಬ್ಬ ಆಚರಿಸಿ ಸಂಭ್ರಮಿಸಿದ್ದಾರೆ.
ಮೇ 13 ಮಾದಕ ನಟಿ ಸನ್ನಿ ಲಿಯೋನ್ ಹುಟ್ಟುಹಬ್ಬ. ಮಾಜಿ ನೀಲಿ ತಾರೆಯ ಹುಟ್ಟುಹಬ್ಬಕ್ಕೆ ಅಭಿಮಾನಿಗಳು, ಸ್ನೇಹಿತರಿಂದ ಶುಭಾಶಯಗಳ ಮಳೆಯ ಬಂದಿತ್ತು. ಸಾಮಾಜಿಕ ಜಾಲತಾಣದಲ್ಲಿ ಸನ್ನಿಲಿಯೋನ್ ಫೋಟೋ ಶೇರ್ ಮಾಡಿ ಅಭಿಮಾನಿಗಳು ಪ್ರೀತಿಯ ವಿಶ್ ಮಾಡುತ್ತಿದ್ದರು.
ಭಾರತ ಮಾತ್ರವಲ್ಲದೇ ಅಂತರಾಷ್ಟ್ರೀಯ ಮಟ್ಟದಲ್ಲೂ ಅಪಾರ ಸಂಖ್ಯೆಯ ಅಭಿಮಾನಿ ಬಳಗ ಹೊಂದಿದ್ದಾರೆ ಸನ್ನಿ ಲಿಯೋನ್. ಈ ಬಾರಿಯ ಹುಟ್ಟುಹಬ್ಬವನ್ನು ಸನ್ನಿ ಲಿಯೋನ್ ಪತಿಯ ಜೊತೆ ಸೆಲೆಬ್ರೇಟ್ ಮಾಡಿದ್ದಾರೆ.
ಡೇನಿಯಲ್ ವೆಬರ್ ಜೊತೆ ಕೇಕ್ ಕತ್ತರಿಸಿ ಹುಟ್ಟುಹಬ್ಬ ಸಂಭ್ರಮಿಸಿದ ಸನ್ನಿ ಲಿಯೋನ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಕಪ್ಪು ಬಣ್ಣದ ಡ್ರೆಸ್ ನಲ್ಲಿ ಸನ್ನಿ ಲಿಯೋನ್ ಕಂಗೊಳಿಸುದ್ದರು. ಪತಿ ಕೂಡ ಕಪ್ಪು ಬಣ್ಣದ ಫಾರ್ಮೆಲ್ಸ್ ನಲ್ಲಿ ಮಿಂಚಿದ್ದಾರೆ.
ಸನ್ನಿ ಲಿಯೋನ್ ಹುಟ್ಟುಹಬ್ಬಕ್ಕೆ ಪತಿ ಡೇನಿಲಯ್ ವೆಬರ್ ಪ್ರೀತಿಯ ವಿಶ್ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸನ್ನಿ ಲಿಯೋನ್ ಅವರ ಚಿಕ್ಕ ವಯಸ್ಸಿನ ಫೋಟೋ ಶೇರ್ ಮಾಡಿದ್ದಾರೆ. ಹುಟ್ಟುಹಬ್ಬದ ಶುಭಾಶಯಗಳು ಬೇಬಿ ಎಂದು ದೀರ್ಘವಾಗಿ ಬರೆದುಕೊಂಡಿದ್ದಾರೆ.
ನಟಿ ಸನ್ನಿ ಲಿಯೋನ್ ಮೂವರು ಮಕ್ಕಳ ತಾಯಿ. ಮೂರು ಮಕ್ಕಳನ್ನು ದತ್ತು ಪಡೆದಿರುವ ನಟಿ ಸನ್ನಿ ಲಿಯೋನ್ ಮಕ್ಕಳಿಗೆ ನಿಶಾ, ಆಶರ್ ಮತ್ತು ನೂರ್ ಮಕ್ಕಳ ಎಂದು ನಾಮಕರಣ ಮಾಡಿದ್ದಾರೆ. ಈ ಮೂವರು ಮಕ್ಕಳ ಫೋಟೋಗಳನ್ನು ಸನ್ನಿ ಆಗಾಗ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುತ್ತಿರುತ್ತಾರೆ.
ಸನ್ನಿ ಲಿಯೋನ್ ಬಾಲಿವುಡ್ ನ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಜೊತೆಗೆ ಐಟಂ ಹಾಡಿನಲ್ಲೂ ಮಿಂಚಿದ್ದಾರೆ. ಹಿಂದಿ ಮಾತ್ರವಲ್ಲದೇ ಬೇರೆ ಬೇರೆ ಭಾಷೆಯಲ್ಲೂ ನಟಿಸುವ ಮೂಲಕ ಸನ್ನಿ ಮೋಡಿ ಮಾಡಿದ್ದಾರೆ. ಕನ್ನಡದಲ್ಲೂ ಮಾದಕ ನಟಿ ನಟಿಸುವ ಮೂಲಕ ಅಭಿಮಾನಿಗಳ ನಿದ್ದೆ ಗೆಡಿಸಿದ್ದಾರೆ.
ಸನ್ನಿ ಲಿಯೋನ್ ಬಗ್ಗೆ 2016ರಲ್ಲಿ ಸಿನಿಮಾ ನಿರ್ದೇಶಕ ದಿಲೀಪ್ ಮೆಹ್ತಾ ಅವರು ಸಾಕ್ಷ್ಯಚಿತ್ರವನ್ನು ಮಾಡಿದ್ದರು. ಟೊರೊಂಟೊ ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ನಲ್ಲಿ ಮೊದಲ ಬಾರಿಗೆ ಪ್ರದರ್ಶನಗೊಂಡಿತು. ಆದರೆ ಭಾರತದಲ್ಲಿ ಇದನ್ನು ಬಿಡುಗಡೆ ಮಾಡಲು ಸನ್ನಿ ಲಿಯೋನ್ ಒಪ್ಪಿಕೊಂಡಿಲ್ಲ.