ಡ್ರೆಸ್ ಕಳಚಿ ಹಾಟ್ ಆಗಿ ಕಾಣಿಸಿಕೊಂಡ ಬಿಗ್ಬಾಸ್ ನಟಿ, ಸೋನಾಲಿ ಸೌಂದರ್ಯಕ್ಕೆ ಕ್ಲೀನ್ ಬೋಲ್ಡ್!
ಬಿಗ್ಬಾಸ್ ಖ್ಯಾತಿಯ ಸೋನಾಲಿ ವಿಡಿಯೋ ಒಂದರಲ್ಲೇ ಶರ್ಟ್ ಕಳಚಿ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ವೈಟ್ ಬ್ರಾ, ರಿಪ್ಪಡ್ ಜೀನ್ಸ್ನಲ್ಲಿ ಬಿಸಿ ಏರಿಸಿ, ಸಾಮಾಜಿಕ ಮಾಧ್ಯಮದಲ್ಲಿ ಕಿಚ್ಚು ಹಚ್ಚಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ಹಾಟ್ ಬೆಡಗಿಯರು ಪ್ರತಿ ದಿನ ಟ್ರೆಂಡ್ ಆಗುತ್ತಾರೆ. ಇದೀಗ ಹಿಂದಿ ಬಿಗ್ಬಾಸ್ ಖ್ಯಾತಿ ಸೋನಾಲಿ ರಾವುತ್ ಸರದಿ. ವಿಡಿಯೋ ಒಂದರಲ್ಲಿ ಡ್ರೆಸ್ ಕಳಚಿದ ಸೋನಾಲಿ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.
ಬಿಗ್ಬಾಸ್ ಬಳಿಕ ಸೋನಾಲಿ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಹಾಟ್ ಫೋಟೋಗಳು, ವಿಡಿಯೋಗಳನ್ನು ಪೋಸ್ಟ್ ಮಾಡಿ ಎಲ್ಲರ ಗಮನಸೆಳೆಯುತ್ತಿದ್ದಾರೆ. ಇದೀಗ ಮೈಮಾಟ ಪ್ರದರ್ಶಿಸಿ ಬಿಸಿ ಏರಿಸಿದ್ದಾರೆ.
ರಿಪ್ಪಡ್ ಜೀನ್ಸ್, ವೈಟ್ ಬ್ರಾ ಹಾಗೂ ಅದರ ಮೇಲೊಂದು ಜೀನ್ಸ್ ಶರ್ಟ್ ಮೂಲಕ ಕಾಣಿಸಿಕೊಂಡ ಸೋನಾಲಿ, ವಿಡಿಯೋದಲ್ಲಿ ಜೀನ್ಸ್ ಶರ್ಟ್ ಕಳಚಿದ್ದಾರೆ.
ವೈಟ್ ಬ್ರಾ ಹಾಗೂ ಜೀನ್ಸ್ ಮೂಲಕ ತಮ್ಮ ಫಿಟ್ ಅಂಡ್ ಫೈನ್ ದೇಹ ಸೌಂದರ್ಯ ಪ್ರದರ್ಶಿಸಿದ್ದಾರೆ. ಇನ್ನು ಕತ್ತಿನ ಹಿಂಭಾಗದಲ್ಲಿನ ಸೋನಾಲಿ ಟ್ಯಾಟೂ ಕೂಡ ರಾರಾಜಿಸಿದೆ.
ಪಿಂಕ್ ಲಿಪ್ಸ್ಟಿಕ್ ಮೂಲಕ ಪ್ರತ್ಯಕ್ಷವಾಗಿರುವ ಸೋನಾಲಿ ರೌವುತ್ ಬಿ ಗುಡ್, ಡು ಗುಡ್, ಲುಕ್ ಗುಡ್ ಎಂದು ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಸೋನಾಲಿ ರಾವುತ್ 2014ರಲ್ಲಿ ಬಾಲಿವುಡ್ಗೆ ಎಂಟ್ರಿಕೊಟ್ಟಿದ್ದಾರೆ. ಆದರೆ ಬಾಲಿವುಡ್ನಲ್ಲಿ ಸೋನಾಲಿ ಕರಿಯರ್ಗೆ ತಕ್ಕ ಚಿತ್ರಗಳು ಸಿಗಲಿಲ್ಲ. ಸಿಕ್ಕ ಪಾತ್ರಗಳಲ್ಲಿ ಸೋನಾಲಿ ಜನರ ಮನಸ್ಸು ಗೆಲ್ಲಲು ಸಾಧ್ಯವಾಗಲಿಲ್ಲ.
2010ರಲ್ಲಿ ಸೋನಾಲಿ ರಾವುತ್ ಖ್ಯಾತ ಕಿಂಗ್ಫಿಶರ್ ಕ್ಯಾಲೆಂಡರ್ನಲ್ಲಿ ಕಾಣಿಸಿಕೊಳ್ಳುವ ಮೂಲಕ ಹಾಟ್ ಬೆಡಗಿಯಾಗಿ ಗುರುತಿಸಿಕೊಂಡಿದ್ದರು. ಮಾಡೆಲಿಂಗ್ ಕ್ಷೇತ್ರದಲ್ಲೂ ಸೋನಾಲಿ ಸದ್ದು ಮಾಡಿದ್ದಾರೆ.
ಸೋನಾಲಿ ರಾವುತ್ ಇನ್ಸ್ಟಾಗ್ರಾಂನಲ್ಲಿ 3 ಮಿಲಿಯನ್ಗೂ ಅಧಿಕ ಫಾಲೋವರ್ಸ್ ಹೊಂದಿದ್ದಾರೆ. ಇದೀಗ ಬಾಲಿವುಡ್, ಬಿಗ್ಬಾಸ್ ಖ್ಯಾತಿಗಿಂತ ಸೋಶಿಯಲ್ ಮೀಡಿಯಾ ಸ್ಟಾರ್ ಆಗಿ ಗುರುತಿಸಿಕೊಂಡಿದ್ದಾರೆ.