- Home
- Jobs
- Central Government Jobs
- ಮೋದಿ ಸರ್ಕಾರದ ಗುಡ್ ನ್ಯೂಸ್, ಸರ್ಕಾರಿ ನೌಕರರ ಖಾತೆಗೆ ಮಾರ್ಚ್‌ನಲ್ಲಿ 10,000 ರೂ
ಮೋದಿ ಸರ್ಕಾರದ ಗುಡ್ ನ್ಯೂಸ್, ಸರ್ಕಾರಿ ನೌಕರರ ಖಾತೆಗೆ ಮಾರ್ಚ್‌ನಲ್ಲಿ 10,000 ರೂ
ಸರ್ಕಾರಿ ನೌಕರರಿಗೆ ಹೊಸ ವರ್ಷದ ಆರಂಭದಲ್ಲೇ ಬಂಪರ್. ವೇತನ ಆಯೋಗದ ಶಿಫಾರಸ್ಸಿನ ನಂತರ, ಈಗ ತುಟ್ಟಿಭತ್ಯೆ ಅಥವಾ ಡಿಎ ಹೆಚ್ಚಳದ ಘೋಷಣೆ ಮಾಡಲಾಗಿದೆ. ಮಾರ್ಚ್ ತಿಗಳಲ್ಲೇ ಖಾತೆಗೆ ಜಮೆ ಆಗಲಿದೆ.

ಮಾರ್ಚ್‌ನಲ್ಲಿ ಡಿಎ ಹೆಚ್ಚಳ
ಹೊಸ ವರ್ಷದಲ್ಲಿ ಕೇಂದ್ರ ಸರ್ಕಾರಿ ನೌಕಕರಿಗೆ ಮತ್ತೊಂದು ಗುಡ್ ನ್ಯೂಸ್ ಸಿಕ್ಕಿದೆ. ಆರ್ಥಿಕ ವರ್ಷದ ಆರಂಭದಲ್ಲಿ ನೌಕಕರ ಖಾತೆಗೆ 10,000 ರೂಪಾಯಿ ಜಮೆ ಆಗಲಿದೆ. ವೇತನ ಆಯೋಗದ ಶಿಫಾರಸ್ಸಿನ ನಂತರ, ಈಗ ತುಟ್ಟಿಭತ್ಯೆ ಅಥವಾ ಡಿಎ ಹೆಚ್ಚಳದ ಘೋಷಣೆ. ಮಾರ್ಚ್‌ನಲ್ಲಿ ಡಿಎ ಹೆಚ್ಚಾಗಬಹುದು.
ಹೋಳಿ ಬಂಪರ್!
ಕಳೆದ ವರ್ಷವೂ ಮಾರ್ಚ್‌ನಲ್ಲಿ ಕೇಂದ್ರ ಸರ್ಕಾರ ಡಿಎ ಅಥವಾ ತುಟ್ಟಿಭತ್ಯೆಯನ್ನು ಘೋಷಿಸಿತ್ತು. ಈ ಬಾರಿಯೂ ಹೋಳಿ ಹಬ್ಬದ ಮುನ್ನವೇ ಡಿಎ ಘೋಷಣೆಯಾಗುವ ಸಾಧ್ಯತೆ ಇದೆ. ಹೀಗಾಗಿ ಸರ್ಕಾರಿ ನೌಕರರ ಸಂಭ್ರಮ ಡಬಲ್ ಆಗಿದೆ.
ಬುಧವಾರ ಸಂಪುಟ ಸಭೆ
ಮುಂದಿನ ಬುಧವಾರ ಸಂಪುಟ ಸಭೆ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಸರ್ಕಾರಿ ನೌಕರರ ಡಿಎ ಹೆಚ್ಚಳದ ಬಗ್ಗೆ ಮಹತ್ವದ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಈ ಮೂಲಕ ನೌಕರರ ಖಾತೆಗೆ ಶೀಘ್ರದಲ್ಲೇ ಡಿಎ ಹೆಚ್ಚಳವಾಗಲಿದೆ.
ಎಷ್ಟು ಶೇಕಡಾ ಡಿಎ ಹೆಚ್ಚಳ
ಕೇಂದ್ರ ಸರ್ಕಾರದ ಮೂಲಗಳ ಪ್ರಕಾರ, ಈ ಬಾರಿ 7ನೇ ವೇತನ ಆಯೋಗದ ಅಡಿಯಲ್ಲಿ ಶೇ 3ರಿಂದ 4ರಷ್ಟು ಡಿಎ ಹೆಚ್ಚಾಗುವ ಸಾಧ್ಯತೆ ಇದೆ. ಹೀಗಾಗಿ ಕನಿಷ್ಠ 10,000 ರೂಪಾಯಿ ಹೆಚ್ಚಳವಾಗವು ಸಾಧ್ಯತೆ ಇದೆ ಎಂದು ಅಭಿಪ್ರಾಯಗಳು ಕೇಳಿಬರುತ್ತಿದೆ.
ಎರಡು ಬಾರಿ ಡಿಎ ಘೋಷಣೆ
ಕೇಂದ್ರ ಸರ್ಕಾರ ಸಾಮಾನ್ಯವಾಗಿ ವರ್ಷಕ್ಕೆ ಎರಡು ಬಾರಿ ಡಿಎ ಹೆಚ್ಚಳವನ್ನು ಘೋಷಿಸುತ್ತದೆ. ಜನವರಿ ಮತ್ತು ಜುಲೈ ತಿಂಗಳಲ್ಲಿ. ಆದರೆ ಕೊನೆಯ ಡಿಎ ಹೆಚ್ಚಳವನ್ನು ಕಳೆದ ವರ್ಷ ಅಕ್ಟೋಬರ್‌ನಲ್ಲಿ ದೀಪಾವಳಿಗೂ ಮುನ್ನ ಮಾಡಲಾಗಿತ್ತು.
ಎಷ್ಟು ಹಣ ಹೆಚ್ಚಳ
ಕೇಂದ್ರ ಸರ್ಕಾರವು ಶೇ 3ರಿಂದ 4ರಷ್ಟು ಡಿಎ ಹೆಚ್ಚಿಸಿದರೆ, ಕೇಂದ್ರ ಸರ್ಕಾರಿ ನೌಕರರ ವೇತನವು ಏಕಾಏಕಿ 10 ಸಾವಿರ ರೂಪಾಯಿ ಹೆಚ್ಚಾಗಬಹುದು. ಇದರಿಂದ ಕೇಂದ್ರ ಸರ್ಕಾರಿ ನೌಕರರ ವೇತನದಲ್ಲಿ ಗಣನೀಯ ಏರಿಕೆ ಕಾಣದಲಿದೆ.
ವೇತನಕ್ಕೆ ಅನುಗುಣವಾಗಿ ಹೆಚ್ಚಳ
ಕನಿಷ್ಠ 18,000 ರೂಪಾಯಿ ಮಾಸಿಕ ವೇತನ ಪಡೆಯುವ ಸರ್ಕಾರಿ ನೌಕರರು ಪ್ರತಿ ತಿಂಗಳು ಹೆಚ್ಚುವರಿಯಾಗಿ 540 ರೂಪಾಯಿಯಿಂದ 750 ರೂಪಾಯಿ ಪಡೆಯಬಹುದು.ಕೇಂದ್ರ ಸರ್ಕಾರಿ ನೌಕರರ ಸಂಖ್ಯೆ ಸುಮಾರು 50 ಲಕ್ಷ. ನಿವೃತ್ತ ನೌಕರರ ಸಂಖ್ಯೆ 65 ಲಕ್ಷ. ಅಂದರೆ 1 ಕೋಟಿಗೂ ಹೆಚ್ಚು ಜನರಿಗೆ ಅನುಕೂಲವಾಗಲಿದೆ.
ಶೇ 53ರ ದರದಲ್ಲಿ ಲೆಕ್ಕ
ಪ್ರಸ್ತುತ ಶೇ 53ರ ದರದಲ್ಲಿ 9540 ರೂಪಾಯಿ ತುಟ್ಟಿಭತ್ಯೆ ಪಡೆಯುತ್ತಿದ್ದಾರೆ. ಶೇ 3ರಿಂದ 4ರಷ್ಟು ಹೆಚ್ಚಿಸಿದರೆ ವೇತನದೊಂದಿಗೆ ಸುಮಾರು 10,080 ರೂಪಾಯಿ ಅಥವಾ 10,290 ರೂಪಾಯಿ ಆಗಬಹುದು.ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಶೇ 3ರಷ್ಟು ಡಿಎ ಘೋಷಿಸಿದೆ. ಇದರಿಂದ ಸರ್ಕಾರಿ ನೌಕರರು ಬೇಸರಗೊಂಡಿದ್ದಾರೆ. ಏಕೆಂದರೆ ಅವರು ಕೇಂದ್ರದ ದರದಲ್ಲಿ ಡಿಎ ನೀಡಬೇಕೆಂದು ಬಹಳ ದಿನಗಳಿಂದ ಒತ್ತಾಯಿಸುತ್ತಿದ್ದಾರೆ.