ಇಂಟರ್‌ವ್ಯೂಗೆ ಹೋಗ್ತೀರಾ? ಹಾಗಾದ್ರೆ ಮೊದ್ಲು ಈ ಪ್ರಶ್ನೋತ್ತರಗಳನ್ನ ಓದ್ಕೊಳ್ಳಿ..

First Published Jun 5, 2020, 8:32 PM IST

ಸ್ನೇಹಿತರೇ.. ಈಗಿನ ಸ್ಪರ್ಧಾತ್ಮಕ ಯುಗದಲ್ಲಿ ಕೆಪಿಎಸ್‌ಸಿ ಮತ್ತು ಯುಪಿಎಸ್‌ಸಿ ನಂತಹ ನಾಗರಿಕ ಸೇವಾ ಪರೀಕ್ಷೆಗಳನ್ನು ಎದುರಿಸುವುದು ಅಷ್ಟು ಸುಲಭದ ಮಾತಲ್ಲ. ಅದರಲ್ಲೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಈ ಪರೀಕ್ಷೆಗಳು ಕಬ್ಬಿಣದ ಕಡಲೆ ಎಂಬ ಮಾತು ಆಗಾಗ್ಗೆ ಕೇಳಿ ಬರುತ್ತವೆ. ಹಾಗಂತ ಸುಮ್ಮನೆ ಕೂರದೆ ಅಗತ್ಯ ಪೂರ್ವ ಸಿದ್ಧತೆಗೊಂದಿಗೆ ಪರೀಕ್ಷೆ ಬರೆದರೆ ಖಂಡಿತಾ ಯಶಸ್ವಿಯಾಗಬಹುದು. ಅದರಲ್ಲೂ ಇಂಟರ್‌ವ್ಯೂನಲ್ಲಿ ಗೆಲ್ಲಬೇಕು ಅಂದ್ರೆ ಅದಕ್ಕೊಂದಿಷ್ಟು ತಯಾರಿ ಮತ್ತು ಇಂಟರ್ ವ್ಯೂ ಬಗೆಗೆ ಸ್ವಲ್ಪ ಮಾಹಿತಿ ತಿಳಿದುಕೊಂಡಿರುವುದು ಒಳಿತು. ಸರಿಯಾದ ಉತ್ತರಗಳನ್ನು ನೀಡಲು ಅನೇಕ ಅಭ್ಯರ್ಥಿಗಳು ವಿಫಲರಾಗುತ್ತಾರೆ. ಅಭ್ಯರ್ಥಿಯ ವ್ಯಕ್ತಿತ್ವವನ್ನು ಪರೀಕ್ಷಿಸಲು ಒಗಟುಗಳಂತಹ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಇಂತಹ ಬೆರಗುಗೊಳಿಸುವ ಪ್ರಶ್ನೆಗಳಿಗೆ ಉತ್ತರಗಳು ಕೂಡ ವಕ್ರವಾಗಿವೆ. ಒಂದಷ್ಟು ಇಲ್ಲಿವೆ ನೋಡಿ.