ಕುಟುಂಬ ಸಮೇತ ಪ್ರಯಾಣಿಸಲು ಲಭ್ಯವಿರುವ ಟಾಪ್ 5 ಕಡಿಮೆ ಬೆಲೆಯ 7 ಸೀಟರ್ ಕಾರು!
ಕಾರು ಇದೀಗ ಅತ್ಯವಶ್ಯಕ ವಸ್ತುವಾಗಿದೆ. ಮಧ್ಯಮ ವರ್ಗ ಕುಟುಂಬ ಕೂಡ ಸಣ್ಣ ಕಾರು ಖರೀದಿಸಿ ತಮ್ಮ ಕನಸು ನನಸು ಮಾಡಿಕೊಳ್ಳುತ್ತಿದೆ. ಆದರೆ 5ಕ್ಕಿಂತ ಹೆಚ್ಚು ಸದಸ್ಯರು ಇರುವ ಕುಟುಂಬಕ್ಕೆ ಸಣ್ಣ ಕಾರು ಸಾಧ್ಯವಿಲ್ಲ. ಹಾಗಂತ ಚಿಂತೆ ಪಡುವ ಅಗತ್ಯವಿಲ್ಲ. ಕೈಗೆಟುಕುವ ದರದಲ್ಲಿ 7 ಸೀಟರ್ ಕಾರು ಭಾರತದಲ್ಲಿದೆ. ಹೀಗೆ ಟಾಪ್ ಫೈವ್ 7 ಸೀಟರ್ ಕಾರುಗಳು ಇಲ್ಲಿವೆ.
ಮಹೀಂದ್ರಾ ಬೊಲೆರೊ ನಿಯೋ
ಮಹೀಂದ್ರಾ ಬೊಲೆರೊ ನಿಯೋ 7-ಸೀಟರ್ ವೇರಿಯಂಟ್‌ನಲ್ಲಿ ಲಭ್ಯವಿದೆ. ಬೊಲೆರೊ ನಿಯೋ 1.5-ಲೀಟರ್ ಡೀಸೆಲ್ ಇಂಜಿನ್‌ನೊಂದಿಗೆ 100 bhp ಪವರ್ ಮತ್ತು 260 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಕಾರು 17.4 kmpl ಮೈಲೇಜ್ ನೀಡುತ್ತದೆ. ಬೊಲೆರೊ ನಿಯೋ ಆರಂಭಿಕ ಬೆಲೆ ರೂ. 9,64,000 (ಎಕ್ಸ್-ಶೋರೂಮ್).
ಮಾರುತಿ ಸುಜುಕಿ ಎರ್ಟಿಗಾ..
ಈ ಕಾರು ಭಾರತದೇಶದಲ್ಲಿ ಅತ್ಯಂತ ಜನಪ್ರಿಯ 7 ಸೀಟ್ ಕಾರು. ಕಡಿಮೆ ಬೆಲೆಗೆ, ಉತ್ತಮ ಮೈಲೇಜ್‌ಗೆ, ಸೌಕರ್ಯಕ್ಕೆ ಈ ಕಾರು ತುಂಬಾ ಫೇಮಸ್. ಎರ್ಟಿಗಾ ಬೆಲೆ ರೂ. 8,64,000 (ಎಕ್ಸ್-ಶೋರೂಮ್). ಎರ್ಟಿಗಾ 1.5-ಲೀಟರ್ ಪೆಟ್ರೋಲ್ ಇಂಜಿನ್‌ನೊಂದಿಗೆ 105 bhp ಪವರ್ ಮತ್ತು 138 Nm ಟಾರ್ಕ್ ಅನ್ನು ನೀಡುತ್ತದೆ. ಈ ಕಾರು 24.52 kmpl ಮೈಲೇಜ್ ನೀಡುತ್ತದೆ.
ರೆನಾಲ್ಟ್ ಟ್ರೈಬರ್
ರೆನಾಲ್ಟ್ ಟ್ರೈಬರ್ ಸ್ಟೈಲಿಶ್ ಡಿಸೈನ್, ಹೊಸ ವೈಶಿಷ್ಟ್ಯಗಳು, ಕೈಗೆಟುಕುವ ಬೆಲೆಯ ಕಾರಣ ಜನರಲ್ಲಿ ಬಹಳ ಜನಪ್ರಿಯತೆ ಪಡೆದಿದೆ. ಈ ಕಾರು 18.1 kmpl ಮೈಲೇಜ್ ನೀಡುತ್ತದೆ. ಟ್ರೈಬರ್ ಆರಂಭಿಕ ಬೆಲೆ ರೂ. 6,33,500 (ಎಕ್ಸ್-ಶೋರೂಮ್). ಟ್ರೈಬರ್ 1.0-ಲೀಟರ್ ಪೆಟ್ರೋಲ್ ಇಂಜಿನ್‌ನೊಂದಿಗೆ 72bhp ಪವರ್ ಮತ್ತು 96Nm ಟಾರ್ಕ್ ಅನ್ನು ನೀಡುತ್ತದೆ.
ಟೊಯೋಟಾ ರೂಮಿಯನ್
ಟೊಯೋಟಾ ರೂಮಿಯನ್ ಸ್ಟೈಲಿಶ್ ಡಿಸೈನ್, ಅದ್ಭುತವಾದ ಇಂಟೀರಿಯರ್ ಅನ್ನು ಹೊಂದಿದೆ. ಕಡಿಮೆ ಬೆಲೆ, ಬಜೆಟ್ ಫ್ರೆಂಡ್ಲಿ ಫ್ಯಾಮಿಲಿ ಕಾರ್ ಆಗಿ ಗುರುತಿಸಿಕೊಂಡಿದೆ. ದಿನನಿತ್ಯ ಬಳಕೆಗೆ ಇದು ಉತ್ತಮ ಆಯ್ಕೆ. ಇದು ಆರಾಮದಾಯಕ ಚಾಲನಾ ಅನುಭವ ಮತ್ತು ಸುರಕ್ಷತಾ ವೈಶಿಷ್ಟ್ಯಗಳನ್ನು ನೀಡುತ್ತದೆ. ಈ ಕಾರಿನ ಆರಂಭಿಕ ಬೆಲೆ ರೂ.10,29,000 (ಎಕ್ಸ್-ಶೋರೂಮ್).
ಮಹೀಂದ್ರಾ ಸ್ಕಾರ್ಪಿಯೊ
ಮಹೀಂದ್ರಾ ಸ್ಕಾರ್ಪಿಯೊ ಒಂದು ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್ (SUV). ಇದರ ಆರಂಭಿಕ ಬೆಲೆ ರೂ.13,26,000 (ಎಕ್ಸ್-ಶೋರೂಮ್). ಈ ಕಾರು 7 ಸೀಟ್ ವೇರಿಯಂಟ್‌ನಲ್ಲಿ ಸಹ ಲಭ್ಯವಿದೆ. ಸ್ಕಾರ್ಪಿಯೊ ನಿಯೋ 2.0-ಲೀಟರ್ ಡೀಸೆಲ್ ಇಂಜಿನ್‌ನೊಂದಿಗೆ 138 bhp ಪವರ್ ಮತ್ತು 300 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಕಾರು 14.5 kmpl ಮೈಲೇಜ್ ನೀಡುತ್ತದೆ.