ಹೊಚ್ಚ ಹೊಸ TVS ಅಪಾಚೆ RTR 160 4V ಬೈಕ್ ಬಿಡುಗಡೆ!
TVS ಮೋಟರ್ ಕಂಪನಿಯಿಂದ ನೂತನ TVS ಅಪಾಚೆ RTR 160 4V ಬಿಡುಗಡೆ ಮಾಡಿದೆ. 17.63 PS ನಲ್ಲಿಯೇ ಅತ್ಯುತ್ತಮ ಸಾಮಥ್ರ್ಯ ಹೊಂದಿದೆ. ಹೊಚ್ಚ ಹೊಸ TVS ಅಪಾಚೆ RTR 160 4V ಬೈಕ್ ವಿಶೇಷತೆ ಏನು? ಇಲ್ಲಿದೆ ವಿವರ.
TVS ಮೋಟರ್ ಕಂಪನಿಯು, ಹೆಸರಾಂತ ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳ ಉತ್ಪಾದಕ ಸಂಸ್ಥೆಯಾಗಿದ್ದು, ಈಗ 2021ರ TVS ಅಪಾಚೆ RTR 160 4V ಮೋಟರ್‌ಸೈಕಲ್ ಅನ್ನು ಬಿಡುಗಡೆ ಮಾಡಿದೆ.
ಈ ಮೋಟರ್‍ಸೈಕಲ್ ತನ್ನ ರೇಸಿಂಗ್ ಸಾಮಥ್ರ್ಯಕ್ಕೆ ಅನುಗುಣವಾಗಿ ಇರಲಿದ್ದು, ಉನ್ನತೀಕರಿಸಿದ ಟಾರ್ಕ್, ಶಕ್ತಿಯನ್ನು ಹೊಂದಿದ್ದು, ಗ್ರಾಹಕರ ಅಗತ್ಯಗಳಿಗೆ ಸ್ಪಂದಿಸಲಿದೆ. 17.63 PS ನಲ್ಲಿಯೇ ಅತ್ಯುತ್ತಮ ಸಾಮಥ್ರ್ಯವನ್ನು ಹೊಂದಿದ್ದು, ಈ ವರ್ಗದ ಮೋಟರ್‌ಸೈಕಲ್‌ನಲ್ಲಿ ಅತ್ಯಧಿಕ ಶಕ್ತಿಯುತವಾಗಿದ್ದಾಗಿದೆ.
ರೇಸಿಂಗ್ ವಲಯದಲ್ಲಿ 38 ವರ್ಷಗಳ ಅನುಭವದ ಹಿನ್ನೆಲೆಯಲ್ಲಿ ನೂತನ 2021 ಟಿವಿಎಸ್ ಅಪಾಚೆ RTR 160 4V ವಾಹನವು ಅತ್ಯುತ್ತಮ ಸಾಮಥ್ರ್ಯವನ್ನು ಹೊಂದಿದದು, ಉನ್ನತೀಕರಿಸಿದ ಸಾಮಥ್ರ್ಯ, ಇಳಿಸಲಾದ ತೂಕ ಹೊಂದಿದೆ. ಅತ್ಯಾಧುನಿಕ ತಂತ್ರಜ್ಞಾನ ಒಳಗೊಂಡಿದ್ದು ಗ್ರಾಹಕರಿಗೆ ಅತ್ಯುತ್ತಮ ಚಾಲನಾ ಅನುಭವ ನೀಡಲಿದೆ. ಟಿವಿಎಸ್ ಅಪಾಚೆ ಎಂದಿಗೂ ಉನ್ನತ ಸೂಚ್ಯಂಕವನ್ನು ಗ್ರಾಹಕರ ತೃಪ್ತಿಗೆ ಸಂಬಂಧಿಸಿ ಹೆಚ್ಚಿನ ಮಾನದಂಡಗಳನ್ನು ನೀಡುವಲ್ಲಿ ಬದ್ದವಾಗಿದೆ, ಈ ನೂತನ ಟಿವಿಎಸ್ ಅಪಾಚೆ RTR 160 4V ಮೋಟರ್‍ಸೈಕಲ್ ಕೂಡಾ ಈ ಯಶೋಗಾಥೆಯನ್ನು ಇನ್ನಷ್ಟು ಬಲಪಡಿಸಲಿದೆ ಎಂದು TVS ಮೋಟರ್ ಕಂಪನಿಯ ಮುಖ್ಯಸ್ಥ (ಮಾರ್ಕೆಟಿಂಗ್) ಮೇಘಶ್ಯಾಂ ದಿಘೋಲೆ ಹೇಳಿದರು
TVS ಅಪಾಚೆ RTR 160 4V ಮೋಟರ್‌ಸೈಕಲ್ ಅತ್ಯಾಧುನಿಕ 159.7 CC ಸಾಮಥ್ರ್ಯದ ಎಂಜಿನ್, ಸಿಂಗಲ್ ಸಿಲಿಂಡರ್, 4 ವಾಲ್ವ್, ಆಯಿಲ್ ಕೂಲ್ಡ್ ಎಂಜಿನ್ ಇದ್ದು, 17.63 PS ನೊಂದಿಗೆ 9250 RPM ಮತ್ತು 14.73 NM ಟಾರ್ಕ್‍ನೊಂದಿಗೆ 7250 RMP ಹೊಂದಿದೆ. ಈ ಎಂಜಿನ್ ಜೊತೆಗೆ 5 ಸ್ಪೀಡ್ ಸೂಪರ್ ಸ್ಲಿಕ್ ಗೇರ್ ಬಾಕ್ಸ್ ಇದ್ದು, ಅತ್ಯುತ್ತಮ ಚಾಲನಾ ಅನುಭವವನ್ನು ಒದಗಿಸಲಿದೆ.
ಮೋಟರ್‌ಲೈಕಲ್ ಸಂಪೂರ್ಣ ನವನವೀನ ಡ್ಯುಯೆಲ್ ಟೋನ್ ಸೀಟ್ ಕಾರ್ಬನ್ ಫೈಬರ್ ಮಾದರಿ, LED ಹೆಡ್‍ಲ್ಯಾಂಪ್, ಕ್ಲಾ ಮಾದರಿಯ ಪೊಸಿಷನ್ ಲ್ಯಾಂಪ್ ಇದ್ದು, ಒಟ್ಟಾರೆ ಪ್ರೀಮಿಯಂ ಅನುಭವನನ್ನು ಹೆಚ್ಚಿಸಲಿದೆ. ಹೆಚ್ಚುವರಿಯಾಗಿ ಈ ಮೋಟರ್‍ಸೈಕಲ್ ಈ ಮೊದಲಿನ ವಾಹನಕ್ಕಿಂತ 2 ಕೆ.ಜಿ. ಕಡಿಮೆ ತೂಕವಿದೆ. ಡಿಸ್ಕ್ ಮಾದರಿ ವಾಹನದ ತೂಕ 147 ಕೆ.ಜಿ. ಇದ್ದರೆ, ಡ್ರಂ ಮಾದರಿಯ ವಾಹನದ ತೂಕ 145 ಕೆ.ಜಿ ಆಗಿದೆ.
ನೂತನ TVS ಅಪಾಚೆ RTR 160 4V ಮೋಟರ್‍ಸೈಕಲ್ ಮೂರು ವರ್ಣಗಳಲ್ಲಿ ಲಭ್ಯವಿದೆ. ಅವುಗಳೆಂದರೆ, ರೇಸಿಂಗ್ ರೆಡ್, ನೈಟ್ ಬ್ಲಾಕ್, ಮೆಟಾಲಿಕ್ ಬ್ಲೂ. ಇದು ಎರಡು ಮಾದರಿಗಳಲ್ಲಿ ಲಭ್ಯವಿದೆ. ಡಿಸ್ಕ್ ಮಾದರಿ ವಾಹನದ ದರ 1,10,320 (ಎಕ್ಸ್ ಷೋರೂಂ, ದೆಹಲಿ) ಹಾಗೂ ಡ್ರಂ ಬ್ರೇಕ್ ವೇರಿಯೆಂಟ್ ಬೈಕ್ ಬೆಲೆ 1,07,270 (ಎಕ್ಸ್ ಷೋರೂಂ, ದೆಹಲಿ) ಆಗಿದೆ.