ಹೊಸ ರಾಯಲ್ ಎನ್‌ಫೀಲ್ಡ್ ಸ್ಕ್ರ್ಯಾಮ್ 440 ಬೈಕ್ ಲಾಂಚ್, ಇದರ ಬೆಲೆ ಎಷ್ಟು?
ರಾಯಲ್ ಎನ್‌ಫೀಲ್ಡ್ ಹೊಸ ಸ್ಕ್ರ್ಯಾಮ್ 440 ಬೈಕ್ ಬಿಡುಗಡೆ ಮಾಡಿದೆ. 443 ಸಿಸಿ ಎಂಜಿನ್ ಹೊಂದಿರುವ ಈ ಬೈಕ್ ಹೆಚ್ಚು ಸ್ಪೋರ್ಟೀವ್ ಲುಕ್ ಹೊಂದಿದೆ. ಇದರ ಬೆಲೆ ಹಾಗೂ ಫೀಚರ್ಸ್ ಏನು?

ರಾಯಲ್ ಎನ್‌ಫೀಲ್ಡ್ ಅತ್ಯಂತ ಜನಪ್ರಿಯ ಹಾಗೂ ಬಹುತೇಕರ ನೆಚ್ಚಿನ ಬೈಕ್. ಸದ್ಯ ಹಲವು ಪೈಪೋಟಿ ಎದುರಿಸುತ್ತಿದ್ದರೂ, ರಾಯಲ್ ಎನ್‌ಫೀಲ್ಡ್ ಮಾರುಕಟ್ಟೆಯಲ್ಲಿ ತನ್ನದೇ ಛಾಪು ಹೊಂದಿದೆ. ಹೊಸ ಹೊಸ ಮಾಡೆಲ್ ಬೈಕ್‌ಗಳನ್ನು ಬಿಡುಗಡೆ ಮಾಡುತ್ತಿದೆ. ಇದೀಗ ಹೊಸ ರಾಯಲ್ ಎನ್‌ಫೀಲ್ಡ್ ಹೊಸ ಸ್ಕ್ರ್ಯಾಮ್ 440 ಬೈಕ್ ಬಿಡುಗಡೆ ಮಾಡಿದೆ. ಹೊಸ ಸ್ಕ್ರ್ಯಾಮ್ 440 ಬೈಕ್ ಬಿಡುಗಡೆಯಿಂದ ಇದೀಗ ಸ್ಕ್ರ್ಯಾಮ್ 411 ಬೈಕ್ ಸ್ಥಗಿತಗೊಳಿಸಾಗಿದೆ. ನೂತನ ಸ್ಕ್ರ್ಯಾಮ್ 440 ಬೈಕ್ ಬೆಲೆ 2.08 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ಆರಂಭಗೊಳ್ಳುತ್ತಿದೆ.
ರಾಯಲ್ ಎನ್‌ಫೀಲ್ಡ್ ಸ್ಕ್ರ್ಯಾಮ್ 440 ಬೆಲೆ(ಎಕ್ಸ್ ಶೋ ರೂಂ)
ಟ್ರೈಲ್ ವೇರಿಯೆಂಟ್ ಬೆಲೆ (ಬೇಸ್ ಮಾಡೆಲ್), 2.08 ಲಕ್ಷ ರೂಪಾಯಿ
ಸ್ಪೆಕ್ ಫೋರ್ಸ್ ವೆರಿಯೆಂಟ್(ಟಾಪ್ ಮಾಡೆಲ್), 2.15 ಲಕ್ಷ ರೂಪಾಯಿ
ಹಳೇ ಸ್ಕ್ರ್ಯಾಮ್ 411 ಬೈಕ್‌ಗಿಂತ ಹೊಸ ಸ್ಕ್ರ್ಯಾಮ್ 440 ಬೈಕ್ ಹೆಚ್ಚು ಶಕ್ತಿಯುತ ಎಂಜಿನ್ ಹೊಂದಿದೆ. ಸಿಸಿ ಕೂಡ ಹೆಚ್ಚು. ವಿಶೇಷ ಅಂದರೆ ಬೆಲೆಯಲ್ಲಿ ಭಾರಿ ವ್ಯತ್ಯಸವಿಲ್ಲ. ಹೊಸ ಸ್ಕ್ರ್ಯಾಮ್ 440 ಬೈಕ್ ಬೆಲೆ ಹಳೇ 411 ಮಾಡೆಲ್‌ಗಿಂತ ಕೇವಲ 1,300 ರೂಪಾಯಿ ಮಾತ್ರ ಹೆಚ್ಚಾಗಿದೆ.
ಸ್ಕ್ರ್ಯಾಮ್ 440 ಬೈಕ್ 443cc ಎಂಜಿನ್ ಹೊಂದಿದೆ. ಸಿಂಗಲ್ ಸಿಲಿಂಡರ್, ಏರ್ ಕೂಲ್ಡ್ ಎಂಜಿನ್ ಹೊಂದಿದೆ. 25.4 Bhp ಪವರ್ ಹಾಗೂ 34 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. ಹೊಸ ಬೈಕ್‌ನಲ್ಲಿ 6 ಸ್ಪೀಡ್ ಗೇರ್‌ಬಾಕ್ಸ್ ಇದೆ. ಆದರೆ ಸ್ಥಗಿತಗೊಳಿಸಿರುವ 411 ಸ್ಕ್ರ್ಯಾಮ್ ಬೈಕ್ 5 ಸ್ಪೀಡ್ ಗೇರ್‌ಬಾಕ್ಸ್ ಹೊಂದಿತ್ತು.
ನೂತನ ಬೈಕ್ ಸ್ಪ್ಲಿಟ್ ಕ್ರೇಡಲ್ ಫ್ರೇಮ್ ಹೊಂದಿದೆ. ಮುಂಭಾಗದಲ್ಲಿ 41mm ಟೆಲಿಸ್ಕೋಪಿಕ್ ಫೋರ್ಕ್ಸ್ ಹೊಂದಿದ್ದರೆ, ರೇರ್‌ನಲ್ಲಿ ಮೊನೋಶಾಕ್ ಹೊಂದಿದೆ. ಬೈಕ್ ತೂಕ 179 kg. ಬೈಕ್ ಗ್ರೌಂಡ್ ಕ್ಲಿಯರೆನ್ಸ್ 200 mm. LED ಲೈಟಿಂಗ್, ಯುಎಸ್‌ಬಿ ಟೈಪ್ ಚಾರ್ಜಿಂಗ್, ಡಿಜಿಟಲ್ ಅನಲಾಗ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಫೀಚರ್ಸ್ ಹೊಂದಿದೆ. 5 ಬಣ್ಣದಲ್ಲಿ ಬೈಕ್ ಲಭ್ಯವಿದೆ. ಡ್ಯುಯೆಲ್ ಚಾನೆಲ್ ಎಬಿಸ್ ಬ್ರೇಕ್ ಹೊಂದಿದೆ. ಈ ಮೂಲಕ ತಕ್ಷಣ ಬ್ರೇಕ್ ಹಾಕಿದರೂ ಯಾವುದೇ ಸ್ಕಿಡ್ಡಿಂಗ್ ಅನುಭವ ಇರುವುದಿಲ್ಲ. ಸಲೀಸಾಗಿ ಹಾಗೂ ಸುಲಭವಾಗಿ ಬೈಕ್ ವೇಗ ನಿಯಂತ್ರಿಸಲು ಸಾಧ್ಯವಾಗುತ್ತದೆ.