ಭಾರತದ ಎಲೆಕ್ಟ್ರಿಕ್ ವಾಹನ ಇದೀಗ ವಿದೇಶಕ್ಕೆ ರಫ್ತು, ಇತಿಹಾಸ ಬರೆದ ಪ್ಯೂರ್ ಇವಿ!
ಮಧ್ಯ ಪ್ರಾಚ್ಯ ಆಫ್ರಿಕಾ ದೇಶಗಳಿಗೆ ಪ್ಯೂರ್ ಎಲೆಕ್ಟ್ರಿಕ್ ಬೈಕ್ ಪೂರೆಕೆಯಾಗುತ್ತಿದೆ. ಬರೋಬ್ಬರಿ 50,000 ಎಲೆಕ್ಟ್ರಿಕ್ ಬೈಕ್ ವಿದೇಶಗಳಲ್ಲಿ ಮೋಡಿ ಮಾಡಲು ಸಜ್ಜಾಗಿದೆ. ಭಾರತದ ಅತೀ ದೊಡ್ಡ ಎಲೆಕ್ಟ್ರಿಕ್ ಸ್ಕೂಟರ್ ಹಾಗೂ ಬೈಕ್ ತಯಾರಕ ಪ್ಯೂರ್ ಹೊಸ ಅಧ್ಯಾಯ ರಚಿಸಿದೆ.
ಭಾರತದಲ್ಲಿ ಹಲವು ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿಗಳಿವೆ. ಕೈಕೆಟುಕುವ ದರದಲ್ಲಿ ಸ್ಕೂಟರ್ ಹಾಗೂ ಬೈಕ್ ನೀಡುತ್ತಿದೆ. ಗರಿಷ್ಠ ಮೈಲೇಜ್, ಕಡಿಮೆ ಚಾರ್ಜಿಂಗ್ ಸಮಯ ಸೇರಿದಂತೆ ಹಲವು ವಿಶೇಷತೆಗಳು ಹೊಂದಿದೆ. ಈ ಪೈಕಿ ಭಾರತದ ಪ್ರಮುಖ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಪ್ಯೂರ್ ಇವಿ ಇದೀಗ ಎಲ್‌ಎಲ್‌ಸಿಯ ಅಂಗಸಂಸ್ಥೆಯಾದ ಅರ್ವಾ ಎಲೆಕ್ಟ್ರಿಕ್ ವೆಹಿಕಲ್ಸ್ ಮ್ಯಾನುಫ್ಯಾಕ್ಚರಿಂಗ್ ಎಲ್‌ಎಲ್‌ಸಿ ಸಂಸ್ಥೆ ಜೊತೆ ಒಪ್ಪಂದ ಮಾಡಿಕೊಂಡಿದೆ. ಇದರಿಂದ ಮಧ್ಯಪ್ರಾಚ್ಯ ಹಾಗೂ ಆಫ್ರಿಕಾ ದೇಶಗಳಿಗೆ ಪ್ಯೂರ್ ಇವಿ ಮೊದಲ ಹಂತದಲ್ಲಿ 50,000 ಎಲೆಕ್ಟ್ರಿಕ್ ಬೈಕ್ ರಫ್ತು ಮಾಡಲಿದೆ.
ಪ್ಯೂರ್ ಇವಿ ತನ್ನ ಪ್ರಮುಖ ಇಕೋಡ್ರೈಫ್ಟ್ ಮತ್ತು ಇಟ್ರಿಸ್ಟ್ ಎಕ್ಸ್ ಮಾಡೆಲ್ ಗಳ 50,000 ಯುನಿಟ್ ಗಳನ್ನು ಆರಂಭಿಕ ಬ್ಯಾಚ್ ನಲ್ಲಿ ಪೂರೈಕೆ ಮಾಡಲಿದೆ. ಪ್ಯೂರ್ ಇವಿ ಸಂಸ್ಥೆಯು ಅರ್ವಾ ಎಲೆಕ್ಟ್ರಿಕ್ ಗೆ ಪೂರೈಕೆ ಮಾಡಲಿದೆ. ಈ ಆರಂಭಿಕ ಬ್ಯಾಚ್ ನ ಬಳಿಕ ಮುಂದಿನ ಒಂದೆರಡು ವರ್ಷಗಳಲ್ಲಿ ವಾರ್ಷಿಕವಾಗಿ 60,000 ಯೂನಿಟ್ ಗಳನ್ನು ರಫ್ತು ಮಾಡುವ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಈ ಸಹಭಾಗಿತ್ವವು ಮಧ್ಯ ಪ್ರಾಚ್ಯ, ಆಫ್ರಿಕಾದಂತಹ ಉದಯೋನ್ಮುಖ ಮಾರುಕಟ್ಟೆಗಳಲ್ಲಿ ಪ್ಯೂರ್ ಇವಿಯ ಉಪಸ್ಥಿತಿಯನ್ನು ಹೆಚ್ಚಿಸಲಿದೆ.
ಯುಎಇ ಎಲೆಕ್ಟ್ರಿಕ್ ದ್ವಿಚಕ್ರ ವಾಹನ (ಇ2ಡಬ್ಲ್ಯೂ) ಮಾರುಕಟ್ಟೆಯು 2024-2031ರ ವೇಳೆಗೆ ಶೇ. 9.11 ಸಿಎಜಿಆರ್ ತಲುಪಲಿದೆ ಎಂದು ಅಂದಾಜಿಸಲಾಗಿದೆ. 2023 ರಲ್ಲಿ ಯುಎಸ್ ಡಾಲರ್ 29.97 ಮಿಲಿಯನ್ ಇರುವುದು 2031ರ ವೇಳೆಗೆ ಯುಎಸ್ ಡಾಲರ್ 60.19 ಮಿಲಿಯನ್ ವರೆಗೆ ಬೆಳೆಯುವ ನಿರೀಕ್ಷೆ ಇಡಲಾಗಿದೆ. ಎಲೆಕ್ಟ್ರಿಕ್ ಮೋಟಾರ್ ಸೈಕಲ್ ವಾಹನಗಳು ಸುಲಭವಾಗಿ ಲಭ್ಯವಾಗುವುದರಿಂದ, ಗ್ಯಾಸೋಲಿನ್ ಉತ್ಪನ್ನಗಳ ಏರುತ್ತಿರುವ ಬೆಲೆಗಳು ಮತ್ತು ಸಾಂಪ್ರದಾಯಿಕ ವಾಹನಗಳಿಗೆ ಹೋಲಿಸಿದರೆ ವಾಹನಗಳ ದಕ್ಷತೆಯನ್ನು ಹೆಚ್ಚಿಸುವುದರಿಂದ ಯುಎಇ ಎಲೆಕ್ಟ್ರಿಕ್ ಟು-ವ್ಹೀಲರ್ ಮಾರುಕಟ್ಟೆಯು ವೇಗವಾಗಿ ಬೆಳವಣಿಗೆ ಹೊಂದಲಿದೆ.
ಮೋಟಾರ್ ಸೈಕಲ್ ಗಳಿಗೆ ಸಂಬಂಧಿಸಿದ ಎಲ್ಲಾ ಆಸ್ತಿ ಹಕ್ಕುಗಳನ್ನು ಪ್ಯೂರ್ ಇವಿ ಸಂಸ್ಥೆಯೇ ನಿರ್ವಹಣೆ ಮಾಡಲಿದೆ. ಅವರು ಅವರ ಮಾರುಕಟ್ಟೆ ವಿಸ್ತರಣೆ ಮಾಡಿದಂತೆ ಸ್ವಾಮ್ಯದ ತಂತ್ರಜ್ಞಾನಗಳ ರಕ್ಷಣೆಗಾಗಿ ಪ್ಯೂರ್ ಇವಿ ಈ ಕ್ರಮ ಕೈಗೊಂಡಿದೆ. ವಿಶೇಷವಾಗಿ ಕಾರ್ಯಾಚರಣೆ ನಡೆಸಲು ಅನುಮೋದನೆ ದೊರೆತ ಬಳಿಕ ಮಧ್ಯಪ್ರಾಚ್ಯ ದೇಶಗಳಲ್ಲಿ ದೊರೆಯತ್ತಿರುವ ಏಕೈಕ ಭಾರತೀಯ ಎಲೆಕ್ಟ್ರಿಕ್ ಮೋಟಾರ್ ಸೈಕಲ್ ಎಂದರೆ ಅದು ಪ್ಯೂರ್ ಇವಿಯ ಮೋಟಾರ್ ಸೈಕಲ್ ಆಗಿವೆ. ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸಲು ಮತ್ತು ಮಾರಾಟ ಮಾಡಲು ಸರ್ಕಾರವು ವಿವಿಧ ಪ್ರೋತ್ಸಾಹ ಮತ್ತು ಸಬ್ಸಿಡಿಗಳನ್ನು ನೀಡಲು ಯೋಜನೆ ಹಾಕುತ್ತಿದೆ.
ಮೋಟಾರ್ ಸೈಕಲ್ ಗಳನ್ನು ಪೂರೈಸುವುದರ ಜೊತೆಗೆ ಪ್ಯೂರ್ ಇವಿ ಸಂಸ್ಥೆಯು ಅರ್ವಾ ಎಲೆಕ್ಟ್ರಿಕ್ ಸಂಸ್ಥೆಗೆ ತಂತ್ರಜ್ಞಾನ ಪಾಲುದಾರರಾಗಿ ಕೂಡ ಕಾರ್ಯನಿರ್ವಹಿಸುತ್ತದೆ ಮತ್ತು ವಿತರಣಾ ಪ್ರಕ್ರಿಯೆಯ ಉದ್ದಕ್ಕೂ ತನ್ನ ನೆರವನ್ನು ಒದಗಿಸುತ್ತದೆ.