ವಿಶ್ವದ ಅತೀ ದೊಡ್ಡ ಫ್ಯಾಕ್ಟರಿ; ಒಲಾ ಘಟಕದಲ್ಲಿ ಪ್ರತಿ 2 ನಿಮಿಷಕ್ಕೊಂಡು ಸ್ಕೂಟರ್ ನಿರ್ಮಾಣ!
ಒಲಾ ಕ್ಯಾಬ್ಸ್ ಇದೀಗ ಒಲಾ ಎಲೆಕ್ಟ್ರಿಕ್ ಸ್ಕೂಟರ್ ನಿರ್ಮಾಣದಲ್ಲಿ ತೊಡಗಿದೆ. ವಿಶ್ವದ ಅತೀ ದೊಡ್ಡ ಎಲೆಕ್ಟ್ರಿಕ್ ಸ್ಕೂಟರ್ ಘಟಕ ತಲೆ ಎತ್ತಿದೆ. ಈ ಘಚಕದಲ್ಲಿ ಹಲವು ವಿಶೇಷತೆಗಳಿವೆ. ಇದರ ನಡುವೆ ಮೊದಲ ಒಲಾ ಸ್ಕೂಟರ್ ಇಮೇಜ್ ಕೂಡ ಬಹಿರಂಗಗೊಂಡಿದೆ. ಒಲಾ ಘಟಕ, ಸ್ಕೂಟರ್ ಸೇರಿದಂತೆ ಹೆಚ್ಚಿನ ಮಾಹಿತಿ ಇಲ್ಲಿದೆ.
ಎಲೆಕ್ಟ್ರಿಕ್ ವಾಹನ ವಿಭಾಗದಲ್ಲಿ ಒಲಾ ಭಾರಿ ಸಂಚಲನ ಮೂಡಿಸುತ್ತಿದೆ. ತಮಿಳುನಾಡಿನಲ್ಲಿ ಈಗಾಗಲೇ ವಿಶ್ವದ ಅತೀ ದೊಡ್ಡ ಒಲಾ ಎಲೆಕ್ಟ್ರಿಕ್ ಸ್ಕೂಟರ್ ಘಟಕ ನಿರ್ಮಾಣ ಮಾಡುತ್ತಿದೆ.
ಈ ಘಟಕದಲ್ಲಿ ಪ್ರತಿ 2 ನಿಮಿಷಕ್ಕೊಂದು ಒಲಾ ಎಲೆಕ್ಟ್ರಿಕ್ ಸ್ಕೂಟರ್ ನಿರ್ಮಾಣವಾಗಲಿದೆ. ಅಷ್ಟರ ಮಟ್ಟಿಗೆ ಸುಸಜ್ಜಿತ ಹಾಗೂ ಅತೀ ದೊಡ್ಡ ಎಲೆಕ್ಟ್ರಿಕ್ ಸ್ಕೂಟರ್ ಘಟಕ ಇದಾಗಿದೆ.
ಬರೋಬ್ಬರಿ 500 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಿರುವ ಒಲಾ ಎಲೆಕ್ಟ್ರಿಕ್ ಘಟಕದಲ್ಲಿ ಪ್ರತಿ ವರ್ಷ 1 ಕೋಟಿ ಸ್ಕೂಟರ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.
ಒಲಾ ಎಲೆಕ್ಟ್ರಿಕ್ ಸ್ಕೂಟರ್ ಮೊದಲ ಇಮೇಜ್ ಬಿಡುಗಡೆಯಾಗಿದೆ. ರೆಟ್ರೋ ಹಾಗೂ ಮಾಡರ್ನ್ ಶೈಲಿಯಲ್ಲಿ ಸ್ಕೂಟರ್ ವಿನ್ಯಾಸ ಮಾಡಲಾಗಿದ್ದು, 200ಕ್ಕಿಂತ ಹೆಚ್ಚು ಮೈಲೇಜ್ ನೀಡಲಿದೆ ಎಂದು ಒಲಾ ಕಂಪನಿ ಹೇಳಿದೆ.
ಒಲಾ ಘಟಕದಿಂದ 10,000 ನೇರ ಉದ್ಯೋಗ ಸೃಷ್ಟಿಯಾಗುತ್ತಿದೆ. ಇನ್ನು ಪರೋಕ್ಷ ಉದ್ಯೋಗಗಳು ಕೂಡ ನಿರ್ಮಾಣವಾಗಲಿದೆ. ಘಟಕ 1ನೇ ಹಂತದಲ್ಲಿ ಸ್ಕೂಟರ್ ಉತ್ಪಾದನೆ ಯಾಗುತ್ತಿದೆ.
ಘಟಕವನ್ನು ಒಟ್ಟು 4 ಹಂತದಲ್ಲಿ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದೆ. 2022ಕ್ಕೆ ಒಲಾ ಎಲೆಕ್ಟ್ರಿಕ್ ಘಟಕ ಸಂಪೂರ್ಣವಾಗಲಿದೆ.
ಒಲಾ ಸ್ಕೂಟರ್ ರೋಡ್ ಟೆಸ್ಟ್ ಪೂರ್ಣಗೊಳಿಸಿದೆ. ಒಂದು ಬಾರಿ ಚಾರ್ಜ್ ಮಾಡಿದರೆ ಸರಿಸುಮಾರು 240 ಕಿ.ಮೀ ಮೈಲೇಜ್ ನೀಡಲಿದೆ ಎಂದು ಒಲಾ ಹೇಳಿದೆ.
ಒಲಾ ಸ್ಕೂಟರ್ ಬೆಲೆ 1 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. ಒಲಾ ಹಾಗೂ ನೆದರ್ಲೆಂಡ್ ಎಲೆಕ್ಟ್ರಿಕ್ ಸ್ಕೂಟರ್ ದಿಗ್ಗಜ ಎಟೆರ್ಗೋ ಜಂಟಿಯಾಗಿ ಸ್ಕೂಟರ್ ನಿರ್ಮಾಣ ಮಾಡಲಿದೆ.