ಹೋಳಿ ಹಬ್ಬದ ಡಿಸ್ಕೌಂಟ್ ಆಫರ್ ಘೋಷಿಸಿದ ಓಲಾ,ಬರೋಬ್ಬರಿ 26,750 ರೂ ಕಡಿತ
ಹೋಳಿ ಹಬ್ಬಕ್ಕೆ ಓಲಾ ಎಲೆಕ್ಟ್ರಿಕ್ ಸ್ಕೂಟರ್ ವಿಶೇಷ ಡಿಸ್ಕೌಂಟ್ ಆಫರ್ ಘೋಷಿಸಿದೆ. ಬರೋಬ್ಬರಿ 26,750 ರೂಪಾಯಿ ಕಡಿತಗೊಳಿಸಿದೆ. ಇದೀಗ ಓಲಾ ಸ್ಕೂಟರ್ ಕೈಗೆಟುಕುವ ದರದಲ್ಲಿ ಲಭ್ಯವಿದೆ. ಆಫರ್ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.

ದೇಶಾದ್ಯಂತ ಹೋಳಿ ಹಬ್ಬ ಆಚರಿಸಲಾಗುತ್ತಿದೆ. ಹಲವು ಬ್ರ್ಯಾಂಡ್ ಹೋಳಿ ಹಬ್ಬಕ್ಕೆ ವಿಶೇಷ ರಿಯಾಯಿತಿ ಘೋಷಿಸಿದೆ. ಇದೀಗ ಓಲಾ ಎಲೆಕ್ಟ್ರಿಕ್ ಸ್ಕೂಟರ್ ಹೋಳಿ ಹಬ್ಬಕ್ಕೆ ಡಿಸ್ಕೌಂಟ್ ಆಫರ್ ಘೋಷಿಸಿದೆ. ಹೋಳಿ ಹಬ್ಬದ ಪ್ರಯುಕ್ತ ಮಾರಾಟ ಹೆಚ್ಚಿಸಲು ಹಾಗೂ ಹೊಸ ಗ್ರಾಹಕರನ್ನು ಸೆಳೆಯಲು ಭರ್ಜರಿ ಡಿಸ್ಕೌಂಟ್ ಘೋಷಿಸಿದೆ. ಈ ಡಿಸ್ಕೌಂಟ್‌ನಿಂದ ಇದೀಗ ಓಲಾ ಎಲೆಕ್ಟ್ರಿಕ್ ಸ್ಕೂಟರ್ ಅತೀ ಕಡಿಮೆ ಬೆಲೆಯಲ್ಲಿ ಲಭ್ಯವಿದೆ.
ಇದು ಹೋಳಿ ಹಬ್ಬದ ಲಿಮಿಟೆಡ್ ಪಿರಿಯೆಡ್ ಆಫರ್ ಆಗಿದೆ. ಹೀಗಾಗಿ ಈ ಆಫರ್ ಮಾರ್ಚ್ 13 ರಿಂದ ಮಾರ್ಚ್ 17 ವರೆಗೆ ಮಾತ್ರ ಇದೆ. ಇದರೊಳಗೆ ಓಲಾ ಎಲೆಕ್ಟ್ರಿಕ್ ಸ್ಕೂಟರ್ ಬುಕ್ ಮಾಡುವ ಗ್ರಾಹಕರಿಗೆ ಈ ಆಫರ್ ಲಭ್ಯವಾಗಲಿದೆ. ಬರೋಬ್ಬರಿ 27,750 ರೂಪಾಯಿ ಡಿಸ್ಕೌಂಟ್ ಘೋಷಿಸಲಾಗಿದೆ. ಹೀಗಾಗಿ ಓಲಾ ಸ್ಕೂಟರ್ ಬೆಲೆ ಗಣನೀಯವಾಗಿ ಕಡಿಮೆಯಾಗಿದೆ.
ಓಲಾ ಹೋಳಿ ಹಬ್ಬದ ಡಿಸ್ಕೌಂಟ್ ಆಫರನ್ನು ಓಲಾ ಎಸ್1 ವೇರಿಯೆಂಟ್ ಸ್ಕೂಟರ್ ಮೇಲೆ ನೀಡಲಾಗಿದೆ. S1 ಏರ್ ಹಾಗೂ S1 X+ (Gen 2) ಸ್ಕೂಟರ್‌ನ್ನು ಹೋಳಿ ಡಿಸ್ಕೌಂಟ್ ಆಫರ್ ಮೂಲಕ ಖರೀದಿಸಹುದು.ಓಲಾ ಎಸ್1 ಏರ್ ಬೆಲೆ 89,999 ರೂಪಾಯಿ(ಎಕ್ಸ್ ಶೋ ರೂಂ). ಈ ಸ್ಕೂಟರ್ ಮೇಲೆ ಹೋಳಿ ಹಬ್ಬದ 27,750 ರೂಪಾಯಿ ಡಿಸ್ಕೌಂಟ್ ನೀಡಲಾಗಿದೆ. ಇನ್ನು ಓಲಾ S1 X+ ಸ್ಕೂಟರ್ ಬೆಲೆ 82,999 ರೂಪಾಯಿ (ಎಕ್ಸ್ ಶೋ ರೂಂ). ಈ ಸ್ಕೂಟರ್ ಮೇಲೆ 22,000 ರೂಪಾಯಿ ಡಿಸ್ಕೌಂಟ್ ಆಫರ್ ನೀಡಲಾಗಿದೆ.
ಡಿಸ್ಕೌಂಟ್ ಬಳಿಕ ಇದೀಗ ಎಸ್1 ಏರ್ ಬೆಲೆ 63,249 ರೂಪಾಯಿಗೆ (ಎಕ್ಸ್ ಶೋ ರೂಂ) ಇಳಿಕೆಯಾಗಿದೆ. ಇನ್ನು ಓಲಾ S1 X+ ಸ್ಕೂಟರ್ ಬೆಲೆ 60,999 ರೂಪಾಯಿ (ಎಕ್ಸ್ ಶೋ ರೂಂ) ಇಳಿಕೆಯಾಗಿದೆ. ಇದರ ಜೊತೆಗೆ ಎಸ್1 ರೇಂಜ್‌ನ ಇತರ ಓಲಾ ಸ್ಕೂಟರ್ ಮೇಲೂ ಡಿಸ್ಕೌಂಟ್ ನೀಡಲಾಗಿದೆ. ಇತ್ತೀಚೆಗೆ ಬಿಡುಗಡೆಯಾದ S1 ಜೆನ್ 3 ರೇಂಜ್ ಸ್ಕೂಟರ್ ಮೇಲೆ 25,000 ರೂಪಾಯಿ ಡಿಸ್ಕೌಂಟ್ ಘೋಷಿಸಲಾಗಿದೆ. ಡಿಸ್ಕೌಂಟ್ ಬಳಿಕ
ಡಿಸ್ಕೌಂಟ್ ಆಫರ್ ಬಳಿಕ ಓಲಾ ಎಸ್ 1 ಜೆನ್ 2 ಸ್ಕೂಟರ್ ಬೆಲೆ 69,999 ರೂಪಾಯಿ (ಎಕ್ಸ್ ಶೋ ರೂಂ) ಗೆ ಇಳಿಕೆಯಾಗಿದೆ. ಇನ್ನು ಓಲಾ ಎಸ್1 ಜೆನ್ 3 ಸ್ಕೂಟರ್ ಬೆಲೆ 1,79,999 ರೂಪಾಯಿಗೆ ಇಳಿಕೆಯಾಗಿದೆ. ಇದರ ಜೊತೆಗೆ ಓಲಾ ಬರೋಬ್ಬರಿ 10,500 ರೂಪಾಯಿವರೆಗೆ ಹೆಚ್ಚುವರಿ ಆಫರ್ ನೀಡುತ್ತಿದೆ. ಹೆಚ್ಚುವರಿ ವಾರೆಂಟಿ, ಒಂದು ವರ್ಷ ಉಚಿತ ಒಸ್ ಮೂವ್ ಸೇರಿದಂತೆ ಇತರ ಸೌಲಭ್ಯಗಳು ಈ ಹೆಚ್ಚುವರಿ ಆಫರ್‌ನಲ್ಲಿ ಸೇರಿದೆ
ಓಲಾ ಹೋಳಿ ಹಬ್ಬದ ಆಫರ್ ಮೂಲಕ ಮತ್ತೆ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಿದೆ. ಹಲವು ಟೀಕೆಗೆ ಒಳಗಾಗಿದ್ದ ಓಲಾ ಇದೀಗ ಮತ್ತೆ ಮಾರುಕಟ್ಟೆಯಲ್ಲಿ ಹಿಡಿತ ಸಾಧಿಸಲು ಮುಂದಾಗಿದೆ. ಹೋಳಿ ಹಬ್ಬಕ್ಕೆ ಭಾರಿ ಡಿಸ್ಕೌಂಟ್ ಘೋಷಿಸುವ ಮೂಲಕ ಹೊಸ ಹೆಜ್ಜೆ ಇಟ್ಟಿದೆ.