ಕೇವಲ 9,000 ರೂ ಮುಂಗಡ ಪಾವತಿಯಲ್ಲಿ ಖರೀದಿಸಿ 165ಕಿ.ಮಿ ಮೈಲೇಜ್ ಹೀರೋ ವಿಡಾ ವಿ2
ಹೀರೋ ವಿಡಾ V2 ಎಲೆಕ್ಟ್ರಿಕ್ ಸ್ಕೂಟರ್ ಬೇಡಿಕೆ ಹೆಚ್ಚಾಗುತ್ತಿದೆ. ವಿಶೇಷ ಅಂದರೆ ಕೇವಲ ₹9,000 ಮುಂಗಡ ಪಾವತಿಸಿದರೆ ಸಾಕು, ಬೈಕ್ ಖರೀದಿ ಸಾಧ್ಯವಾಗಲಿದೆ. ಒಮ್ಮೆ ಚಾರ್ಜ್ ಮಾಡಿದರೆ 165 ಕಿ.ಮೀ. ವರೆಗೆ ಪ್ರಯಾಣಿಸಬಹುದು.

₹9,000 ಮುಂಗಡ; 165 ಕಿಮೀ ಮೈಲೇಜ್ ಹೀರೋ ಸ್ಕೂಟರ್
ಇಂದು ನಮ್ಮ ದೇಶದಲ್ಲಿ ಹಲವು ಕಂಪನಿಗಳ ಎಲೆಕ್ಟ್ರಿಕ್ ಸ್ಕೂಟರ್‌ಗಳು ಬರುತ್ತಿವೆ. ಬಜೆಟ್ ವ್ಯಾಪ್ತಿಯಲ್ಲಿ ಉತ್ತಮ ಎಲೆಕ್ಟ್ರಿಕ್ ಸ್ಕೂಟರ್‌ಗಾಗಿ ಹುಡುಕುತ್ತಿದ್ದರೆ, ಹೀರೋ ಮೋಟಾರ್‌ನ ಹೀರೋ ವಿದಾ V2 ಉತ್ತಮ ಆಯ್ಕೆಯಾಗಿದೆ. ಕಡಿಮೆ ಬಜೆಟ್ ಇರುವವರು ₹9000 ಎರಡು ಸುಲಭ ಕಂತುಗಳಲ್ಲಿ ಪಾವತಿಸಿ ಖರೀದಿಸಬಹುದು. ಕಡಿಮೆ ಡೌನ್‌ಪೇಮೆಂಟ್ ಮೂಲಕ ಹೀರೋ ವಿಡಾ ವಿ2 ಸ್ಕೂಟರ್ ಖರೀದಿಸಲು ಸಾಧ್ಯವಿದೆ.
ಬಜೆಟ್ ಸ್ಕೂಟರ್
ಓಲಾ ಮತ್ತು ಬಜಾಜ್ ಬ್ರ್ಯಾಂಡ್‌ಗಳ ಜೊತೆಗೆ ಸ್ಪರ್ಧಿಸುವ ಈ ಸ್ಕೂಟರ್ ಒಮ್ಮೆ ಚಾರ್ಜ್ ಮಾಡಿದರೆ 165 ಕಿ.ಮೀ. ಮೈಲೇಜ್ ನೀಡುತ್ತದೆ. ₹85,000 ಆರಂಭಿಕ ಬೆಲೆಯಿದ್ದು, ₹9,000 ಮುಂಗಡ ಪಾವತಿಸಿ, 9.7% ಬಡ್ಡಿದರದಲ್ಲಿ 3 ವರ್ಷಗಳಿಗೆ ಸಾಲ ಪಡೆಯಬಹುದು. ವಿಡಾ ಸ್ಕೂಟರ್ ಖರೀದಿ ಮುಂಗಡ ಪಾವತಿ, ಸಾಲದ ಮೇಲಿನ ಬಡ್ಡಿದರ ಸೇರಿದಂತೆ ಹಲವು ಆಕರ್ಷಕ ಕೊಡುಗೆಗಳು ಲಭ್ಯವಿರುವ ಕಾರಣ ಹೆಚ್ಚಿನ ತಲೆನೋವಿಲ್ಲದೆ ಸ್ಕೂಟರ್ ಖರೀದಿಸಲು ಸಾಧ್ಯವಿದೆ.
ಹೀರೋ ವಿದಾ V2 ಎಲೆಕ್ಟ್ರಿಕ್ ಸ್ಕೂಟರ್
ಮುಂದಿನ 36 ತಿಂಗಳಿಗೆ ಮಾಸಿಕ EMI ₹2,596 ರೂಪಾಯಿ ಪಾವತಿಸಿದರೆ ಸಾಕು. ಅಡೆ ತಡೆ ಇಲ್ಲದೆ ಸ್ಕೂಟರ್ ನಿಮ್ಮದಾಗಲಿದೆ. 6 kW ಪವರ್ ಎಲೆಕ್ಟ್ರಿಕ್ ಮೋಟಾರ್, 3.9 kWh ಲಿಥಿಯಂ-ಐಯಾನ್ ಬ್ಯಾಟರಿಯನ್ನು ಹೊಂದಿದೆ. ಒಮ್ಮೆ ಚಾರ್ಜ್ ಮಾಡಿದರೆ 165 ಕಿ.ಮೀ. ವರೆಗೆ ಪ್ರಯಾಣಿಸಬಹುದು. ಸುದೀರ್ಘ ಮೈಲೇಜ್ ರೇಂಜ್ ನೀಡುತ್ತಿರುವ ಕಾರಣ ಹೀರೋ ವಿಡಾ ಇದೀಗ ನಗರ ಹಾಗೂ ಗ್ರಾಮೀಣ ಭಾಗದಲ್ಲೂ ಹೆಚ್ಚು ಬಳಕೆಯಾಗುತ್ತಿದೆ.
ಹೀರೋ ವಿದಾ V2
ನಗರ ಸವಾರಿ ಮತ್ತು ದೀರ್ಘ ಪ್ರಯಾಣಕ್ಕೆ ಉತ್ತಮ ಆಯ್ಕೆ. ಆಧುನಿಕ ಮತ್ತು ಸ್ಟೈಲಿಶ್ ವಿನ್ಯಾಸ, ಸ್ಮಾರ್ಟ್ ಡಿಜಿಟಲ್ ಡಿಸ್‌ಪ್ಲೇ, ಹಲವು ರೈಡಿಂಗ್ ಮೋಡ್‌ಗಳನ್ನು ಹೊಂದಿದೆ. ಉತ್ತಮ ಫೀಚರ್ಸ್ ಈ ಸ್ಕೂಟರ್‌ನಲ್ಲಿ ಲಭ್ಯವಿದೆ. ಹೀರೋ ಬ್ರ್ಯಾಂಡ್ ಸ್ಕೂಟರ್ ಆಗಿರು ಕಾರಣ ಉತ್ತಮ ಬಾಳಿಕೆಯೂ ಬರಲಿದೆ ಎಂದು ಕಂಪನಿ ಹೇಳುತ್ತಿದೆ.
V2 ಎಲೆಕ್ಟ್ರಿಕ್ ಸ್ಕೂಟರ್
ಕೈಗೆಟುಕುವ ಬೆಲೆ, EMI ಯೋಜನೆಗಳು, ಪವರ್‌ಫುಲ್ ಮೋಟಾರ್ ಮತ್ತು ದೀರ್ಘ ಬಾಳಿಕೆ ಬ್ಯಾಟರಿಯೊಂದಿಗೆ ಹೀರೋ ವಿದಾ V2 ಮಾರುಕಟ್ಟೆಯಲ್ಲಿ ಪ್ರಮುಖ ಸ್ಥಾನ ಪಡೆದಿದೆ. ಸದ್ಯ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ ಏರಿಕೆಯಾಗುತ್ತಿರುವ ಹಿನ್ನಲೆಯಲ್ಲಿ ಹೀರೋ ವಿಡಾ ವಿ2 ಕಡಿಮೆ ಮುಂಗಡ ಪಾವತಿಯಲ್ಲಿ ಲಭ್ಯವಿದೆ. ಇದು ಜನಸಾಮಾನ್ಯರ ಸ್ಕೂಟರ್ ಖರೀದಿ ಕನಸನ್ನು ನನಸು ಮಾಡಲಿದೆ.