MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Automobile
  • Bike News
  • ಹಬ್ಬದ ಕೊಡುಗೆ, ಆಕರ್ಷಕ ಬೆಲೆಯಲ್ಲಿ ಜಾವಾ 42, ಯೆಜ್ಡಿ ರೋಡ್‌ಸ್ಟರ್ ಬೈಕ್ ಬಿಡುಗಡೆ!

ಹಬ್ಬದ ಕೊಡುಗೆ, ಆಕರ್ಷಕ ಬೆಲೆಯಲ್ಲಿ ಜಾವಾ 42, ಯೆಜ್ಡಿ ರೋಡ್‌ಸ್ಟರ್ ಬೈಕ್ ಬಿಡುಗಡೆ!

ದೇಶದಲ್ಲಿ ಹಬ್ಬದ ವಾತಾವರಣ ಕಳೆಗಟ್ಟಿದೆ. ಈಗಷ್ಟೇ ಗಣೇಶ ಚತುರ್ಥಿ ಮುಗಿದಿದೆ. ಇದೀಗ ದಸರಾ, ದೀಪಾವಳಿ ಹಬ್ಬದ ಸಂಭ್ರಮ ಆರಂಭಗೊಂಡಿದೆ. ಈ ಹಬ್ಬದ ಸಂಭ್ರಮ ಇಮ್ಮಡಿಗೊಳಿಸಲು ಇದೀಗ ಆಕರ್ಷಕ ಬೆಲೆಯಲ್ಲಿ ಜಾವಾ 42, ಯೆಜ್ಡಿ ರೋಡ್‌ಸ್ಟರ್ ಬೈಕ್ ಬಿಡುಗಡೆಯಾಗಿದೆ. 

3 Min read
Suvarna News
Published : Oct 03 2023, 05:43 PM IST
Share this Photo Gallery
  • FB
  • TW
  • Linkdin
  • Whatsapp
19

ಮುಂಗಾರು ಮಳೆ ಕೊರತೆಯಿಂದಲೇ ಮುಗಿದಿದೆ. ಇದೀಗ ಟ್ರಿಪ್, ಸವಾರಿ ಜೊತೆಗೆ ಹಬ್ಬದ ಸಂಭ್ರಮ ಆಗಮಿಸುತ್ತಿದೆ. ಇದರ ನಡುವೆ ಹಬ್ಬದ ಕೊಡುಗೆಯಾಗಿ ಜಾವಾ 42 ಹಾಗೂ ಯೆಜ್ಡಿ ರೋಡ್‌ಸ್ಟರ್ ಬೈಕ್ ಬಿಡುಗಡೆಯಾಗಿದೆ.

29

ಎರಡೂ ಪ್ರೀಮಿಯಂ ರೂಪಾಂತರಗಳನ್ನು ವಿವಿಧ ಸುಧಾರಣೆಗಳೊಂದಿಗೆ ನಾಲ್ಕು ಅತ್ಯಾಕರ್ಷಕ ಹೊಸ ಬಣ್ಣ ಆಯ್ಕೆಗಳಲ್ಲಿ ಪರಿಚಯಿಸಲಾಗುತ್ತಿದೆ. ಹೊಸ ʻಜಾವಾ 42 ಡ್ಯುಯಲ್‌ ಟೋನ್ʼ ಬೈಕ್‌ನ ಬೆಲೆಯು 1,98,142 ರೂಪಾಯಿಂದ ಆರಂಭವಾದರೆ, ಹೊಸ ʻಯೆಜ್ಡಿ ರೋಡ್‌ಸ್ಟರ್ ʼ ಬೈಕ್‌ನ ಬೆಲೆಯು 2,08,829 ರೂಪಾಯಿಂದ ಆರಂಭವಾಗುತ್ತದೆ.  ʻಜಾವಾ 42ʼ ಶ್ರೇಣಿಯ ಬೆಲೆ 1,89,142 ರೂ.ಗಳಿಂದ ಆರಂಭವಾದರೆ, ʻಯೆಜ್ಡಿ ರೋಡ್‌ಸ್ಟರ್ʼ ಶ್ರೇಣಿಯ ಬೆಲೆಯು 2,06,142 ರೂ.ನಿಂದ ಆರಂಭವಾಗುತ್ತದೆ.(ಎಲ್ಲಾ ಬೆಲೆಗಳು ಎಕ್ಸ್‌ಶೋರೂಂ).

39

ಹೊಸ ಜಾವಾ 42 ಡ್ಯುಯಲ್ ಟೋನ್ – ಇದು ʻಜಾವಾ 42’ನ  ರೂಪಾಂತರವಾಗಿದೆ. ಡ್ಯೂಯಲ್‌ ಟೋನ್‌ ರೂಪಾಂತರವು ಸ್ಪಷ್ಟ ಲೆನ್ಸ್ ಇಂಡಿಕೇಟರ್‌ಗಳು, ಶಾರ್ಟ್-ಹ್ಯಾಂಗ್‌ ಫೆಂಡರ್‌ಗಳು ಮತ್ತು ಹೊಸ ಡಿಂಪಲ್ ಇಂಧನ ಟ್ಯಾಂಕ್ ಹೊಂದಿದೆ. ಇವೆಲ್ಲವೂಗಳಿಗೂ ಪೂರಕವೆಂಬಂತೆ ಪ್ರೀಮಿಯಂ ಡೈಮಂಡ್-ಕಟ್ ಅಲಾಯ್ ಚಕ್ರಗಳನ್ನು ಇದು ಒಳಗೊಂಡಿದೆ. ಇದಲ್ಲದೆ, ʻಕಾಸ್ಮಿಕ್ ರಾಕ್ʼ, ʻಇನ್ಫಿನಿಟಿ ಬ್ಲ್ಯಾಕ್ʼ, ʻಸ್ಟಾರ್‌ಶಿಪ್‌ ಬ್ಲೂʼ ಮತ್ತು ʻಸೆಲೆಸ್ಟಿಯಲ್ ಕಾಪರ್ʼ ಸೇರಿದಂತೆ ಪ್ರೀಮಿಯಂ ಡ್ಯುಯಲ್ ಟೋನ್ ಬಣ್ಣಗಳಲ್ಲಿ ಇದು ಲಭ್ಯವಿದೆ. ವರ್ಣಗಳ ವ್ಯತಿರಿಕ್ತತೆಯನ್ನು ಹೆಚ್ಚಿಸಲು ಎಂಜಿನ್ ಮತ್ತು ಎಕ್ಸಾಸ್ಟ್ ಘಟಕಗಳಿಗೆ ʻರಾವೆನ್ ಟೆಕ್ಸ್‌ಚರ್‌ʼ ಫಿನಿಶ್‌ ನೀಡಲಾಗಿದೆ. ಹೊಸ ಸ್ಪೋರ್ಟಿಯರ್ ಸೌಂದರ್ಯಕ್ಕೆ ಹೊಂದಿಕೆಯಾಗುವಂತೆ ಸೀಟ್ ಮರುವಿನ್ಯಾಸಗೊಳಿಸಲಾಗಿದೆ.

49

ಈ ಹೊಸ ರೂಪಾಂತರವು ಮರುವಿನ್ಯಾಸಗೊಳಿಸಿದ ಬ್ಯಾಶ್ ಪ್ಲೇಟ್, ಹೊಸ ಹ್ಯಾಂಡಲ್‌ಬಾರ್ ಮೌಂಟೆಡ್ ಮಿರರ್‌ಗಳು ಮತ್ತು ಹೊಸ ಹ್ಯಾಂಡಲ್‌ಬಾರ್‌ ಗ್ರಿಪ್‌ಗಳನ್ನು ಹೊಂದಿದೆ. ಎಲ್ಲಾ ʻಜಾವಾ 42ʼ ಬೈಕ್‌ಗಳು 294.7 ಸಿಸಿ ಲಿಕ್ವಿಡ್ ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಸಹಾಯದಿಂದ 27.3PS ಮತ್ತು 26.8Nm ಟಾರ್ಕ್  ಉತ್ಪಾದಿಸುತ್ತದೆ. ಕೇವಲ 5,750rpm ನಲ್ಲಿ ಗರಿಷ್ಠ ಟಾರ್ಕ್ ಲಭ್ಯವಿದ್ದು, 42 ಆದರ್ಶ ಸಿಟಿ ಬೈಕ್ ಎನಿಸಿದೆ. ಜೊತೆಗೆ, ಹೆದ್ದಾರಿಯಲ್ಲಿಯೂ ಇದರ ಕಾರ್ನಿರ್ವಹಣೆ ಪ್ರಶಂಸಾರ್ಹವಾಗಿದೆ. ಇದು ನಯವಾದ 6-ಸ್ಪೀಡ್ ಗೇರ್‌ಬಾಕ್ಸ್‌ ಹೊಂದಿದ್ದು, ಸುರಕ್ಷತೆಗಾಗಿ ಈ ವರ್ಗದಲ್ಲೇ ಮುಂಚೂಣಿಯ ʻಡ್ಯುಯಲ್-ಚಾನೆಲ್ʼ ಎಬಿಎಸ್ ಅನ್ನು ಹೊಂದಿದೆ.

59

ಯೆಜ್ಡಿ ರೋಡ್ ಸ್ಟರ್: ಈ ಹೊಸ ʻಯೆಜ್ಡಿ ರೋಡ್‌ಸ್ಟರ್ʼ ದಕ್ಷತೆಯ ವಿಭಾಗದಲ್ಲಿ ಪ್ರಮುಖ ಬದಲಾವಣೆಗಳೊಂದಿಗೆ ಹೆಚ್ಚು ಪ್ರವಾಸ ಸ್ನೇಹಿಯಾಗಿದೆ. ಪ್ರಮುಖ ಬದಲಾವಣೆಗಳಲ್ಲಿ ʻಪರಿಷ್ಕೃತ ರೈಡರ್ ಫೂಟ್‌ಪೆಗ್‌ಗಳು (ಫಾರ್ವರ್ಡ್ ಸೆಟ್ 155 ಎಂಎಂ) ಮತ್ತು ಎತ್ತರದ ಹ್ಯಾಂಡಲ್‌ಬಾರ್ ಸೇರಿವೆ. ಈ ನವೀಕರಣವು ಗ್ರಾಹಕರ ಪ್ರತಿಕ್ರಿಯೆಗೆ ತಕ್ಕಂತೆ ಬ್ರಾಂಡ್‌ನ ಸಕ್ರಿಯ ಕಾರ್ಯವಿಧಾನವನ್ನು ಪ್ರತಿಬಿಂಬಿಸುತ್ತದೆ. ಈ ಹೊಸ ರೂಪಾಂತರವು ಹಾಲಿ ಇರುವ ʻರೋಡ್‌ಸ್ಟರ್ʼ ಜೊತೆಗೆ ಮಾರಾಟವಾಗುವುದರಿಂದ, ಗ್ರಾಹಕರು ಈಗ ತಮಗೆ ಸೂಕ್ತವಾದ ಬೈಕ್‌ ಆವೃತ್ತಿಯನ್ನು ಆಯ್ಕೆ ಮಾಡುವ ಅವಕಾಶ ಪಡೆಯಲಿದ್ದಾರೆ.

69

ಹೊಸ ʻಜಾವಾ 42ʼನಂತೆಯೇ, ʻಯೆಜ್ಡಿ ರೋಡ್‌ಸ್ಟರ್ʼ ಸಹ ಕೆಲವು ವಿನ್ಯಾಸ ನವೀಕರಣಗಳನ್ನು ಹೊಂದಿದೆ. ಉದಾಹರಣೆಗೆ ಸ್ಪೋರ್ಟಿಯರ್-ನೋಟವುಳ್ಳು ಮೊಣಕಾಲು ವಿರಾಮ ಪಟ್ಟಿ, ಪ್ರೀಮಿಯಂ ಡೈಮಂಡ್-ಕಟ್ ಅಲಾಯ್ ಚಕ್ರಗಳು ಮತ್ತು ಎಂಜಿನ್ ಮತ್ತು ಎಕ್ಸಾಸ್ಟ್ ಮೇಲೆ ರಾವೆನ್ ಟೆಕ್ಸ್‌ಚರ್‌ ಫಿನಿಶ್‌ ಇದರಲ್ಲಿ ಸೇರಿವೆ. ಇದು ಗ್ರಾಹಕರ ಪ್ರತಿಕ್ರಿಯೆಯ ಆಧಾರದ ಮೇಲೆ ಮತ್ತೊಂದು ಸುಧಾರಣೆಯನ್ನು ಒಳಗೊಂಡಿದ್ದು, ಹೊಸ ಹ್ಯಾಂಡಲ್‌ಬಾರ್ ಗ್ರಿಪ್‌ಗಳು ಮತ್ತು ಹ್ಯಾಂಡಲ್‌ಬಾರ್-ಮೌಂಟೆಡ್ ಮಿರರ್‌ಗಳನ್ನು ಸಹ ಹೊಂದಿದೆ.

79

ಇದಕ್ಕೆ ಮತ್ತೊಂದು ಮಹತ್ವದ ಹೊಸ ಸೇರ್ಪಡೆಯೆಂದರೆ ಹೊಸ ʻಎಕ್ಸಾಸ್ಟ್‌ʼಗಳು. ಹಿಂದಿನ ಯೆಜ್ಡಿಗಳಿಗೆ ಹೋಲುವ ಅವುಗಳ ಬಾಗಿದ ಹೊಸ ರೂಟಿಂಗ್ ಆಗಿರಲಿ ಅಥವಾ ಅವು ನೀಡುವ ಹೊಸ ರೋರ್ಟಿ ಎಕ್ಸಾಸ್ಟ್ ನೋಟವಾಗಿರಲಿ, ʻರೋಡ್‌ಸ್ಟರ್ʼ ಮೋಜು ಮಾಡುವುದನ್ನು ಗಂಭೀರವಾಗಿ ಪರಿಗಣಿಸುತ್ತದೆ. ಈ ಹೊಸ ಮಾದರಿಯು ʻರಶ್ ಅವರ್ ರೆಡ್ʼ, ʻಫಾರೆಸ್ಟ್ ಗ್ರೀನ್ʼ ಮತ್ತು ʻಲೂನಾರ್ ವೈಟ್ʼ ಎಂಬ ಮೂರು ಡ್ಯುಯಲ್ ಟೋನ್ ಥೀಮ್ ಸೇರಿದಂತೆ ನಾಲ್ಕು ಹೊಸ ಬಣ್ಣಗಳಲ್ಲಿ ಲಭ್ಯವಿದೆ.

89

ʻಯೆಜ್ಡಿ ರೋಡ್‌ಸ್ಟರ್ʼ ಸರಣಿಯಲ್ಲಿ 334 ಸಿಸಿ ಲಿಕ್ವಿಡ್ ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಅಳವಡಿಸಲಾಗಿದ್ದು, 29.5 PS ಮತ್ತು 28.9Nm ಟಾರ್ಕ್ ಉತ್ಪಾದಿಸುತ್ತದೆ. ಇದು ಈ ವರ್ಗದಲ್ಲೇ ಮುಂಚೂಣಿಯ `ಡ್ಯುಯಲ್-ಚಾನೆಲ್ ಎಬಿಎಸ್’ ಅನ್ನು ಹೊಂದಿದೆ ಮತ್ತು ಸುಗಮ ಹೆದ್ದಾರಿ ಪ್ರಯಾಣಕ್ಕಾಗಿ ಉದ್ದವಾದ 1440 ಎಂ.ಎಂ ವ್ಹೀಲ್ ಬೇಸ್ ಅನ್ನು ಹೊಂದಿದೆ.

99

ಹೊಸ ʻಜಾವಾ 42 ಡ್ಯುಯಲ್ ಟೋನ್ʼ ಮತ್ತು ʻಯೆಜ್ಡಿ ರೋಡ್‌ಸ್ಟರ್ʼ ಎರಡೂ ಬೈಕ್‌ಗಳು ಭೂತ, ವರ್ತಮಾನ ಮತ್ತು ಭವಿಷ್ಯದ ನಡುವಿನ ಅಂತರವನ್ನು ಸರಾಗವಾಗಿ ಕಡಿಮೆ ಮಾಡುವ ಮೋಟಾರ್‌ಸೈಕಲ್‌ಗಳಿಗೆ ಉದಾಹರಣೆಯಾಗಿವೆ. ಅವುಗಳು ಶ್ರೀಮಂತ ಪರಂಪರೆಯನ್ನು ಗೌರವಿಸುವುದರ ಜೊತೆಗೆ, ಉತ್ಕೃಷ್ಟತೆಯನ್ನು ತಲುಪಿಸುವ ಬ್ರಾಂಡ್‌ನ ಬದ್ಧತೆಯನ್ನು ಅವು ಪ್ರದರ್ಶಿಸುತ್ತವೆ. ಈ ಹೊಸ ರೂಪಾಂತರಗಳು ʻಜಾವಾʼ ಮತ್ತು ʻಯೆಜ್ಡಿʼ ಉತ್ಸಾಹಿಗಳ ಹೃದಯವನ್ನು ಸಮಾನವಾಗಿ ಸೆರೆಹಿಡಿಯಲು ಸಜ್ಜಾಗಿವೆ. ಕ್ಲಾಸಿಕ್ ವಿನ್ಯಾಸ ಮತ್ತು ಆಧುನಿಕ ವೈಶಿಷ್ಟ್ಯಗಳ ಸಾಮರಸ್ಯದ ಮಿಶ್ರಣವನ್ನು ಬಯಸುವ ಹೊಸ ತಲೆಮಾರಿನ ಸವಾರರನ್ನು ಇವು ಆಕರ್ಷಿಸುತ್ತವೆ.

About the Author

SN
Suvarna News
ಆಟೋಮೊಬೈಲ್
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved