ಜಾವಾ 350 ಲೆಗೆಸಿ ಎಡಿಶನ್ ಬಿಡುಗಡೆ, ಕೇವಲ 500 ಬೈಕ್ ಮಾತ್ರ ಉತ್ಪಾದನೆ, ಬೆಲೆ ಎಷ್ಟು?
ವಿಂಟೇಜ್ ಬೈಕ್ ಪ್ರಿಯರಿಗಾಗಿ ಇದೀಗ ಜಾವಾ ಲಿಮಿಟೆಡ್ ಎಡಿಶನ್ ಬೈಕ್ ಜಾವಾ ಲೆಗೆಸಿ 350 ಬೈಕ್ ಬಿಡುಗಡೆ ಮಾಡಿದೆ. ಮೊದಲು ಬುಕ್ ಮಾಡುವ 500 ಗ್ರಾಹಕರಿಗೆ ಮಾತ್ರ ಈ ಬೈಕ್ ಲಭ್ಯವಾಗಲಿದೆ. ಇದರ ಬೆಲೆ, ಫೀಚರ್ ಏನು?

ಜಾವಾ 350 ಲೆಗೆಸಿ
ಒಂದು ವರ್ಷದ ಹಿಂದೆ, ಜಾವಾ 350 ಭಾರತದಲ್ಲಿ ಒಂದು ಕ್ಲಾಸಿಕ್ ಬೈಕ್ ಆಗಿ ಬಿಡುಗಡೆಯಾಯಿತು. ಇದು ಬೆಸ್ಟ್ ಡಿಸೈನ್ ಮತ್ತು ಅಪ್‌ಡೇಟೆಡ್ ಟೆಕ್ನಾಲಜಿಯ ಹೊಂಂದಿದೆ. ಜಾವಾ ಭಾರತದಲ್ಲಿ ಹೊಸ ಮಾದರಿಯಲ್ಲಿ ಬೈಕ್ ಬಿಡುಗಡೆ ಮಾಡಿ ಅಪಾರ ಜನಮನ್ನಣೆ ಗಳಿಸಿದೆ. ಇದೀಗ ಜಾವಾ ವಿಂಟೇಜ್ ಬೈಕ್ ಪ್ರಿಯರಿಗೆ ಲಿಮಿಟೆಡ್ ಎಡಿಶನ್ ಲೆಗೆಸಿ 350 ಬೈಕ್ ಬಿಡುಗಡೆ ಮಾಡಿದೆ.
ಜಾವಾ 350 ಲೆಗಸಿ ಎಡಿಷನ್
ಇದು ಮಾರುಕಟ್ಟೆಯಲ್ಲಿ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಮತ್ತು ಹೋಂಡಾ ಸಿಬಿ 350 ಗೆ ಟಫ್ ಕಾಂಪಿಟೇಷನ್ ನೀಡಲು ಲೆಗಸಿ 350 ಬೈಕ್ ಬಿಡುಗಡೆ ಮಾಡಿದೆ. ಇದು ರೆಟ್ರೋ ಶೈಲಿ, ವಿಂಟೇಜ್ ರಾಯಲ್ ಲುಕ್ ಸೇರಿದಂತೆ ಹಲವು ವಿಶೇಷತೆಗಳನ್ನು ಹೊಂದಿದೆ.
334 ಸಿಸಿ ಎಂಜಿನ್, ಸಿಂಗಲ್ ಸಿಲಿಂಡ್ ಲಿಕ್ವಿಡ್ ಕೂಲ್ಡ್ ಎಂಜಿನ್ ಹೊಂದಿದೆ. 22 ಹೆಚ್‌ಪಿ ಪವರ್ ಹಾಗೂ 28.1 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. 6 ಸ್ಪೀಡ್ ಗೇರ್‌ಬಾಕ್ಸ್ ಹೊಂದಿದೆ.
ಜಾವಾ 350 ಲೆಗಸಿ ಬೆಲೆ
ಬೈಕ್‌ನಲ್ಲಿ 35 ಎಂಎಂ ಟೆಲಿಸ್ಕೋಪಿಕ್ ಫೋರ್ಕ್ ಮತ್ತು 5-ಸ್ಟೆಪ್ ಪ್ರಿಲೋಡ್ ಅಡ್ಜಸ್ಟಬಿಲಿಟಿ ಹೊಂದಿರುವ ಡ್ಯುಯಲ್ ಶಾಕ್ ಅಬ್ಸಾರ್ಬರ್‌ಗಳಿವೆ. ಇದರ ಬೆಲೆ 1.99 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಇದು ಲಿಮಿಟೆಡ್ ಎಡಿಶನ್ ಬೈಕ್. ಹೀಗಾಗಿ ಮೊದಲು ಬುಕ್ ಮಾಡುವ 500 ಗ್ರಾಹಕರಿಗೆ ಮಾತ್ರ ಈ ಬೈಕ್ ಲಭ್ಯವಾಗಲಿದೆ. ಜಾವಾ ಪರಂಪರನೆಯನ್ನು ಮುಂದುವರಿಸುವ ನಿಟ್ಟಿನಲ್ಲಿ ಈ ಬೈಕ್ ಡಿಸೈನ್ ಮಾಡಲಾಗಿದೆ. ಈ ಪೈಕಿ ಜಾವಾ 350 ಲೆಗೆಸಿ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದೆ.