200 ಕಿ.ಮಿ ಮೈಲೇಜ್ ರೇಂಜ್ ಎಲೆಕ್ಟ್ರಿಕ್ ಬೈಕ್ ಬಿಡುಗಡೆ ಮಾಡುತ್ತಾ ಟಾಟಾ?
ಟಾಟಾ ಮೋಟಾರ್ಸ್ 150 ರಿಂದ 200 ಕಿಲೋಮೀಟರ್ ಮೈಲೇಜ್ ನೀಡಬಲ್ಲ ಎಲೆಕ್ಟ್ರಿಕ್ ಬೈಕ್ ಬಿಡುಗಡೆ ಮಾಡಲಿದೆ ಅನ್ನೋ ವರದಿ ಹರಿದಾಡುತ್ತಿದೆ. ಅತೀ ಕಡಿಮೆ ಬೆಲೆಯಲ್ಲಿ ಟಾಟಾ ಈ ಬೈಕ್ ಹೊರತರುತ್ತಿದೆ ಅನ್ನೋ ಮಾತುಗಳು ಕೇಳಿಬಂದಿದೆ. ಟಾಟಾ ಎಲೆಕ್ಟ್ರಿಕ್ ಮೊಬಿಲಿಟಿ ಈ ಬೈಕ್ ಬಿಡುಗಡೆ ಮಾಡುತ್ತಾ? Fact check.
ಟಾಟಾ ಎಲೆಕ್ಟ್ರಿಕ್ ಬೈಕ್
ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ (ಇವಿ) ಬರುವಿಕೆ ವೇಗವಾಗಿ ಬೆಳೆಯುತ್ತಿದೆ. ಪ್ರಮುಖ ಕಂಪನಿಗಳು ಎಲೆಕ್ಟ್ರಿಕ್ ವಾಹನ ತಯಾರಿಕೆಯಲ್ಲಿ ಧುಮುಕಿವೆ. ಎಲೆಕ್ಟ್ರಿಕ್ ಕಾರ್ ವಿಭಾಗದಲ್ಲಿ ಗುರುತಿಸಿಕೊಂಡ ನಂತರ, ಟಾಟಾ ಮೋಟಾರ್ಸ್ ಎಲೆಕ್ಟ್ರಿಕ್ ಬೈಕ್‌ಗಳನ್ನು ತಯಾರಿಸಲು ಸಜ್ಜಾಗಿದೆ ಎಂದು ವರದಿಯಾಗಿದೆ. ಎಲೆಕ್ಟ್ರಿಕ್ ಕಾರು ವಿಭಾಗದಲ್ಲಿ ಟಾಟಾ ಮೋಟಾರ್ಸ್ ಮುಂಚೂಣಿಯಲ್ಲಿದೆ. ಹೀಗಾಗಿ ಇದೀಗ ಎಲೆಕ್ಟ್ರಿಕ್ ಬೈಕ್ ಕ್ಷೇತ್ರಕ್ಕೂ ಕಾಲಿಡುತ್ತಿದೆ. ಕಡಿಮೆ ಬೆಲೆ, ಗರಿಷ್ಠ ಮೈಲೇಜ್ ಸೇರಿದಂತೆ ಹಲವು ಫೀಚರ್ಸ್ ಇದರಲ್ಲಿ ಎಂದು ಹೇಳಲಾಗುತ್ತಿದೆ.
ಟಾಟಾ ಇವಿ ಬೈಕ್
ಟಾಟಾ ಮೋಟಾರ್ಸ್ ಅಧಿಕೃತವಾಗಿ ಎಲೆಕ್ಟ್ರಿಕ್ ಬೈಕ್‌ಗಳನ್ನು ತಯಾರಿಸುವ ಯೋಜನೆ ಘೋಷಿಸಿಲ್ಲ. ಸದ್ಯ ಈ ಕುರಿತು ಹರಿದಾಡುತ್ತಿರುವ ಸುದ್ದಿ ಸುಳ್ಳು. ಟಾಟಾ ಮೋಟಾರ್ಸ್ ಈ ರೀತಿ ಯಾವುದೇ ಘೋಷಣೆ ಮಾಡಿಲ್ಲ. ಎಲೆಕ್ಟ್ರಿಕ್ ಕಾರು ವಿಭಾಗದಲ್ಲಿ ಹಲವು ಪ್ರಯೋಗ, ಸಂಶೋಧನೆ ನಡೆಸುತ್ತಿರುವ ಟಾಟಾ ಇವಿ ಮೊಬಿಲಿಟಿ ಇದೀಗ ಎಲೆಕ್ಟ್ರಿಕ್ ಬೈಕ್ ಕುರಿತು ಯಾವುದೇ ಅಧಿಕೃತ ಪ್ರಕಟಣೆ ಮಾಡಿಲ್ಲ.
ಟಾಟಾ ಮೋಟಾರ್ಸ್
ಸದ್ಯ ಹರಿದಾಡುತ್ತಿರುವ ಸುಳ್ಳು ಸುದ್ದಿಯಲ್ಲಿ ಟಾಟಾ ಕೈಗೆಟುಕುವ ಬೆಲೆಯಲ್ಲಿ ಎಲೆಕ್ಟ್ರಿಕ್ ಬೈಕ್ ಬಿಡುಗಡೆ ಮಾಡುತ್ತಿದೆ ಎಂದು ಹೇಳಲಾಗುತ್ತಿದೆ. ವೈಶಿಷ್ಟ್ಯಗಳ ಬಗ್ಗೆ ವದಂತಿಗಳು ವ್ಯಾಪಕವಾಗಿವೆ. ಅದರಂತೆ, ಬೈಕ್100 ಕಿ.ಮೀ./ಗಂ ವೇಗ ಮತ್ತು ಒಂದೇ ಚಾರ್ಜ್‌ನಲ್ಲಿ 150 ರಿಂದ 200 ಕಿ.ಮೀ. ವ್ಯಾಪ್ತಿಯನ್ನು ಹೊಂದಿರುತ್ತದೆ ಹೇಳಲಾಗುತ್ತಿದೆ. ವೇಗದ ಚಾರ್ಜಿಂಗ್ ಸಾಮರ್ಥ್ಯವು ಮತ್ತೊಂದು ಮುಖ್ಯಾಂಶವಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಟಾಟಾ ಬೈಕ್
ಟಾಟಾ ಮೋಟಾರ್ಸ್ ತನ್ನ ಎಲೆಕ್ಟ್ರಿಕ್ ಬೈಕ್ ಕುರಿತು ಸುದ್ದಿ ಭಾರಿ ಸಂಚಲನ ಸೃಷ್ಟಿಸಿತ್ತು. ಹಲವರು ಟಾಟಾ ಬ್ರ್ಯಾಂಡ್ ಕಾರು ಟಾಟಾ ಇವಿ ಬರುವಿಕೆಗೆ ಕಾಯುತ್ತಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿತ್ತು. ಆದರೆ ಟಾಟಾ ಅಧಿಕೃತ ಪ್ರಕಟಣೆ ವರೆಗೆ ಕಾಯಲೇಬೇಕು. ಸದ್ಯಕ್ಕೆ ಟಾಟಾ ಮುಂದೆ ದ್ವಿಚಕ್ರ ಎಲೆಕ್ಟ್ರಿಕ್ ವಾಹನಗಳ ಯಾವುದೇ ಪ್ಲಾನ್ ಕುರಿತು ಮಾಹಿತಿ ನೀಡಿಲ್ಲ.
ಟಾಟಾ ಇವಿ
ಟಾಟಾ ಮೋಟಾರ್ಸ್ ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳಳಲ್ಲಿ ಮುಂಚೂಣಿಯಲ್ಲಿದೆ. ಟಾಟಾ ಟಿಯಾಗೋ ಇವಿ, ಟಿಗೋರ್ ಇವಿ, ನೆಕ್ಸಾನ್ ಇವಿ, ನೆಕ್ಸಾನ್ ಮ್ಯಾಕ್ಸ್, ಕರ್ವ್ ಇವಿಗಳೊಂದಿಗೆ ಭಾರಿ ಬೇಡಿಕೆಯ ಕಾರಾಗಿ ಹೊರಹೊಮ್ಮಿದೆ. ಗರಿಷ್ಠ ಮೈಲೇಜ್ ರೇಂಜ್, ಕೈಗೆಟುಕುವ ಬೆಲೆ ಸೇರಿದಂತೆ ಹಲವು ಫೀಚರ್ಸ್‌ಗಳಿಂದ ಟಾಟಾ ಇವಿ ದೇಶದ ಅಗ್ರಗಣ್ಯ ಇವಿಯಾಗಿ ಹೊರಹೊಮ್ಮಿದೆ.