ಭಾರತದಲ್ಲಿ ಹೊಚ್ಚ ಹೊಸ BMW R18 ಕ್ಲಾಸಿಕ್ ಬೈಕ್ ಬಿಡುಗಡೆ; ಇದು ದುಬಾರಿ ಬೈಕ್!
ಅತ್ಯಾಧುನಿಕ ಟೆಕ್ನಾಲಜಿ, ವಿಶಿಷ್ಟ ಕ್ರೂಸರ್ ಸ್ಟೈಲ್ ಹಾಗೂ ಗರಿಷ್ಠ ಫೀಚರ್ಸ್ ಹೊಂದಿರು ಹೊಚ್ಚ ಹೊಸ BMW R18 ಕ್ಲಾಸಿಕ್ ಬೈಕ್ ಭಾರತದಲ್ಲಿ ಬಿಡುಗಡೆ ಮಾಡಲಾಗಿದೆ. ಇದು ದುಬಾರಿ ಬೈಕ್ ಆಗಿದೆ. ಈ ಬೈಕ್ ಬೆಲೆ ಹಾಗೂ ಇತರ ಮಾಹಿತಿ ಇಲ್ಲಿದೆ.
BMW ಮೋಟರಾಡ್ ಇಂಡಿಯಾ ಆಲ್-ನ್ಯೂ BMW R18 ಕ್ಲಾಸಿಕ್ ಬೈಕ್ ಭಾರತದಲ್ಲಿ ಬಿಡುಗಡೆ ಮಾಡಿದೆ. ಆಲ್-ನ್ಯೂ BMW R18 ಕ್ಲಾಸಿಕ್ ಅನ್ನು ಸಂಪೂರ್ಣ ಬಿಲ್ಟ್-ಅಪ್ ಯೂನಿಟ್(CBU) ಬೈಕ್ ಇಂದಿನಿಂದ BMW ಮೋಟರಾಡ್ ಡೀಲರ್ ನೆಟ್‍ವರ್ಕ್ ಮೂಲಕ ಬುಕಿಂಗ್ ಮಾಡಿಕೊಳ್ಳಬಹುದು. ಹೊಚ್ಚ ಹೊಸ BMW R ಬೈಕ್ ಬೆಲೆ 24,00,000 ರೂಪಾಯಿ(ಎಕ್ಸ್ ಶೋ ರೂಂ)
ಕಳೆದ ವರ್ಷ BMW R18 ಪ್ರಥಮ ಪ್ರದರ್ಶನದ ನಂತರ, BMW ಮೋಟರಾಡ್ ಇಂಡಿಯಾ ಈಗ ತನ್ನ ಕ್ರೂಸರ್ ಸೆಗ್ಮೆಂಟ್‍ನಲ್ಲಿ ದ್ವಿತೀಯ ಸದಸ್ಯತ್ವದ BMW R18 ಕ್ಲಾಸಿಕ್ ಪರಿಚಯಿಸಿದೆ. ಆಲ್-ನ್ಯೂ BMW R18 ಕ್ಲಾಸಿಕ್ ಮಹತ್ತರ ಟೂರಿಂಗ್ ಕ್ರೂಸರ್ ಮಾಡೆಲ್‍ಗಳ ಪ್ರಾರಂಭಗಳನ್ನು ಪ್ರತಿನಿಧಿಸುವ ಟೂರಿಂಗ್ ಬೈಕ್ ಆಗಿದೆ.
BMW R18 ಕ್ಲಾಸಿಕ್ ಸಮಯರಹಿತ ವಿನ್ಯಾಸವಾಗಿದ್ದು ಸ್ಪಷ್ಟ ಆದರೆ ಸಮಕಾಲೀನ ತಂತ್ರಜ್ಞಾನದೊಂದಿಗೆ ವಿಲೀನಗೊಂಡು ಬೆಳೆಸಿಕೊಂಡಂತೆಯೇ ಭಾವನಾತ್ಮಕವಾಗಿಯೂ ರೈಡಿಂಗ್ ಅನುಭವದ ಒಟ್ಟಾರೆ ಅದ್ಭುತ ಪರಿಕಲ್ಪನೆಯನ್ನು ಸೃಷ್ಟಿಸುತ್ತದೆ. BMW R 18 ಸ್ಟೈಲ್‍ನಲ್ಲಿ ಪ್ಯೂರಿಸ್ಟ್ ಆದರೆ R18 ಕ್ಲಾಸಿಕ್ ದೊಡ್ಡ ವಿಂಡ್‍ಸ್ಕ್ರೀನ್, ಪ್ಯಾಸೆಂಜರ್ ಸೀಟ್, ಸ್ಯಾಡಲ್‍ಬ್ಯಾಗ್ಸ್, ಹೆಚ್ಚುವರಿ ಹೆಡ್‍ಲೈಟ್ಸ್ ಮತ್ತು 16- ಇಂಚ್ ಫ್ರಂಟ್ ವ್ಹೀಲ್ ಹೊಂದಿದೆ. ಇದು BMW ನಲ್ಲಿ ಹಿಂದೆಂದೂ ನಿರ್ಮಾಣವಾಗದ ಅತ್ಯಂತ ದೊಡ್ಡ ಡಿಸ್ಪ್ಲೇಸ್‍ಮೆಂಟ್ ಬಾಕ್ಸ್ ಎಂಜಿನ್ ಹೊಂದಿದೆ.
ಸಂಪೂರ್ಣ ಮನಃಶ್ಯಾಂತಿ ಮತ್ತು ಶುದ್ಧ ಮೋಟಾರ್‍ಸೈಕ್ಲಿಂಗ್ ಪ್ರಯಾಣವನ್ನು ತಡೆರಹಿತವಾಗಿ ಎಲ್ಲ ಸಮಯಗಳನ್ನೂ ನೀಡಲು BMW R 18 ಕ್ಲಾಸಿಕ್ ಸ್ಟಾಂಡರ್ಡ್ ವಾರೆಂಟಿ ಮೂರು ವರ್ಷಗಳು, ಅನಿಯಮಿತ ಕಿಲೋಮೀಟರ್, ನಾಲ್ಕು ಹಾಗೂ ಐದನೇ ವರ್ಷಕ್ಕೆ ವಿಸ್ತರಿಸಿದ ವಾರೆಂಟಿ ಆಯ್ಕೆಯೊಂದಿಗೆ ಬಂದಿದೆ. ರೋಡ್‍ಸೈಡ್ ಅಸಿಸ್ಟೆನ್ಸ್, 24x7 365 ಪ್ಯಾಕೇಜ್ ಬ್ರೇಕ್‍ಡೌನ್ ಮತ್ತು ಟೋವಿಂಗ್ ಸನ್ನಿವೇಶಗಳಲ್ಲಿ ಪ್ರಾಮಾಣಿಕ ಸೇವೆಗಳನ್ನು ದೃಢಪಡಿಸುತ್ತದೆ.
ಆಲ್-ನ್ಯೂ BMW R18 ಕ್ಲಾಸಿಕ್ BMW ಮೋಟರಾಡ್‍ನ ಕ್ರೂಸರ್ ವ್ಯಾಖ್ಯಾನವು ಬ್ರಾಂಡ್‍ನ ಸಂಪ್ರದಾಯದಲ್ಲಿ ಮುಂದುವರಿದಿದೆ ಮತ್ತು ಕಳೆದುಹೋದ ಸಮಯಗಳ ಸ್ಟೈಲ್ ಅನ್ನು ವಿಶ್ವಾಸಾರ್ಹವಾಗಿ ಪ್ರದರ್ಶಿಸುತ್ತದೆ. ಇದರ ಕಾರ್ಯ ನಿರ್ವಹಣೆಯ ಮತ್ತು ಸ್ಟೈಲಿಷ್ ಡಿಸೈನ್ ಅಂಶಗಳಾದ ಡಬಲ್ ಕ್ರಾಡಲ್ ಫ್ರೇಮ್, ಟಿಯರ್ ಡ್ರಾಪ್ ಟ್ಯಾಂಕ್ ಮತ್ತು ತೆರೆದಿಟ್ಟ ಡ್ರೈವ್‍ಶಾಫ್ಟ್ ಮತ್ತು ಪೇಂಟ್‍ವರ್ಕ್ ಅತ್ಯುತ್ತಮವಾಗಿ ಬಿಡಿಸಿದ ಡಬಲ್ ಪಿನ್ ಸ್ಟ್ರೈಪ್ಸ್ 1936 ರ ಪ್ರಖ್ಯಾತ ಬಾಕ್ಸರ್‍ನ ಸ್ಮರಣೆ ತರುತ್ತವೆ. ಕ್ಲಾಸಿಕಲಿ ಡಿಸೈನ್ಡ್ ಸಕ್ರ್ಯುಲರ್ ಇನ್ಸ್‍ಟ್ರುಮೆಂಟ್ ಇಂಟಿಗ್ರೇಟೆಡ್ ಡಿಸ್ಪ್ಲೇಯೊಂದಿಗೆ ಡೆಕೊರೇಟಿವ್ ಕ್ರೋಮ್ ರಿಂಗ್‍ನೊಂದಿಗೆ ಮೆಟಲ್ ಹೌಸಿಂಗ್ ಸುತ್ತುವರಿದಿದೆ. ಸಿಕಲ್ ಶೇಪ್ಡ್ ಗ್ರಾಫಿಕಲ್ ಡೇಟೈಮ್ ರನ್ನಿಂಗ್ ಲೈಟ್ BMW R ಮೋಟರಾಡ್ ಹೆರಿಟೇಜ್ ಹೆಗ್ಗುರುತನ್ನು ಮತ್ತಷ್ಟು ಹೆಚ್ಚಿಸುತ್ತದೆ. ಸ್ಟೀರಿಂಗ್ ಹೆಡ್‍ನಿಂದ ಪ್ರಾರಂಭಿಸಿ, ಸೆಂಟ್ರಲ್ ಫ್ರೇಮ್ ಟ್ಯೂಬ್ ಮತ್ತು ಸ್ವಿಂಗ್‍ಆರ್ಮ್ ಟಾಪ್ ಫ್ರೇಮ್ ಟ್ಯೂಬ್ಸ್ ಕೇಂದ್ರ ವಿನ್ಯಾಸದ ಅಂಶವಾಗಿ ಕೆಲಸ ಮಾಡುವ ಸತತ ಕಾರ್ಯಗಳ ಸರಣಿಯನ್ನು ವೀಕ್ಷಣೆಯಲ್ಲಿ ದೃಢಪಡಿಸುತ್ತದೆ
ಉನ್ನತ ಎರ್ಗೊನಾಮಿಕ್ಸ್‍ನಿಂದ ಉನ್ನತ ಮಟ್ಟದ ದೂರ ಪ್ರಯಾಣದ ಅನುಕೂಲ ಮತ್ತು ದೋಷರಹಿತ ಕ್ರೂಸರ್ ಭಾವನೆ ನೀಡುತ್ತದೆ. BMW ಮೋಟರಾಡ್ ಎರ್ಗೊನಾಮಿಕ್ ತ್ರಿಕೋನದಲ್ಲಿ ಹ್ಯಾಂಡಲ್‍ಬಾರ್-ಸೀಟ್‍ಗೆ ದೂರ ಮತ್ತು `ಮಿಡ್-ಮೌಂಟೆಡ್ ಫುಟ್ ಪೆಗ್’ ಪೊಸಿಷನ್ ನೀಡುತ್ತಿದ್ದು ಅದು ಸಾಂಪ್ರದಾಯಿಕವಾಗಿ ಪ್ರಮುಖ ಅಂಶವಾಗಿದೆ ಮತ್ತು ನೇರ ಸೀಟಿಂಗ್ ಸ್ಥಾನವನ್ನು ನೀಡುತ್ತದೆ.
ಆಲ್-ನ್ಯೂ ಕ್ಲಾಸಿಕ್‍ನ BMW R18 ಕೇಂದ್ರಬಿಂದುವು ಹೊಸದಾಗಿ ಅಭಿವೃದ್ಧಿಪಡಿಸಲಾದ ಏರ್/ಆಯಿಲ್ ಕೂಲ್ಡ್ ಟು-ಸಿಲಿಂಡರ್ ಬಾಕ್ಸರ್ ಎಂಜಿನ್- ಇದು BMW ಸೀರೀಸ್ ಪ್ರೊಡಕ್ಷನ್‍ನಲ್ಲಿ ಅತ್ಯಂತ ಪವರ್‌ಫುಲ್ ಬಾಕ್ಸರ್ ಆಗಿದೆ. ಬೃಹತ್ 1,802 CC ಎಂಜಿನ್ 107.1 mm ಬೋರ್ ಮತ್ತು 100 mm ಸ್ಟ್ರೋಕ್‍ನ ಫಲಿತಾಂಶವಾಗಿದೆ. ಇದು 4,750 RPM ನಲ್ಲಿ 91hP ಔಟ್‍ಪುಟ್ ಉತ್ಪಾದಿಸುತ್ತದೆ. ಗರಿಷ್ಠ ಟಾರ್ಕ್ 158NM ಈಗಾಗಲೇ 3,000 RPM ನಲ್ಲಿ ಲಭ್ಯವಿದ್ದು 150 NM ಕ್ಕಿಂತ ಹೆಚ್ಚು ಯಾವುದೇ ಸಮಯದಲ್ಲಿ 2,000 – 4,000 RPM ಲಭ್ಯವಿರುತ್ತದೆ. ಈ ಆಂಶಿಕ ಎಳೆಯುವ ಶಕ್ತಿಯು ಪೂರ್ಣ, ಅನುರಣನದ ಶಬ್ದದೊಂದಿಗೆ ಸಂಯೋಜಿಸಿದೆ.
ಸಸ್ಪೆನ್ಷನ್‍ಗೆ ಸಂಬಂಧಿಸಿದಂತೆ ಆಲ್-ನ್ಯೂ BMW R18 ಕ್ಲಾಸಿಕ್ ಡಬಲ್ ಲೂಪ್ ಸ್ಟೀಲ್ ಟ್ಯೂಬ್‍ಫ್ರೇಮ್ ಹೊಂದಿದೆ. ರಿಯರ್ ಸ್ವಿಂಗ್ ಆರ್ಮ್ ವಿಶ್ವಾಸಾರ್ಹ ಶೈಲಿಯಲ್ಲಿ ರಿಯರ್ ಆಕ್ಸಲ್ ಟ್ರಾನ್ಸ್‍ಮಿಷನ್ ಸುತ್ತುವರಿದಿದೆ. ಈ ಸಸ್ಪೆನ್ಷನ್ ಅಂಶಗಳು ಎಚ್ಚರದಿಂದ ಎಲೆಕ್ಟ್ರಾನಿಕ್ ಅಡ್ಜಸ್ಟ್‍ಮೆಂಟ್ ಆಯ್ಕೆಗಳನ್ನು ವಿತರಿಸುತ್ತದೆ. ಟೆಲಿಸ್ಕೋಪಿಕ್ ಫೋರ್ಕ್ ಮತ್ತು ನೇರವಾಗಿ ಜೋಡಿಸಿದ ಸೆಂಟ್ರಲ್ ಸಸ್ಪೆನ್ಷನ್ ಸ್ಟ್ರಟ್ ಪ್ರಯಾಣ-ಆಧರಿತ ಡ್ಯಾಂಪಿಂಗ್ ಮತ್ತು ಹೊಂದಿಸಬಲ್ಲ ಸ್ಪ್ರಿಂಗ್ ಪ್ರಿಲೋಡ್ ಮೂಲಕ ಉನ್ನತ ವ್ಹೀಲ್ ಕಂಟ್ರೋಲ್ ಮತ್ತು ಉತ್ತಮ ಸಸ್ಪೆನ್ಷನ್ ಕಂಫರ್ಟ್ ನೀಡುತ್ತದೆ. ಬ್ರೇಕಿಂಗ್ ಸಿಸ್ಟಂನಲ್ಲಿ ಟ್ವಿನ್ ಡಿಸ್ಕ್ ಬ್ರೇಕ್ ಮುಂಬದಿಯಲ್ಲಿ ಹಾಗೂ ಸಿಂಗಲ್ ಡಿಸ್ಕ್ ಬ್ರೇಕ್ ಹಿಂಬದಿಯಲ್ಲಿದ್ದು ಫೋರ್-ಪಿಸ್ಟನ್ ಫಿಕ್ಸ್‍ಡ್ ಕ್ಯಾಲಿಪರ್ಸ್‍ನೊಂದಿಗೆ ಸಂಯೋಗ ಹೊಂದಿವೆ.
ಆಲ್-ನ್ಯೂ BMW R18 ವೈಯಕ್ತಿಕ ರೈಡರ್ ಆದ್ಯತೆಗಳಿಗೆ ಹೊಂದುವಂತೆ ಮೂರು ರೈಡಿಂಗ್ ಮೋಡ್ಸ್- `ರೈನ್’, `ರೋಲ್’ ಮತ್ತು `ರಾಕ್’ ಒದಗಿಸುತ್ತದೆ. `ರೈನ್ ಮೋಡ್’ನಲ್ಲಿ ಥ್ರಾಟಲ್ ರೆಸ್ಪಾನ್ಸ್ ಅತ್ಯಂತ ಮೃದುವಾಗಿರುತ್ತದೆ ಮತ್ತು ರೈಡಿಂಗ್ ಡೈನಮಿಕ್ಸ್ ಹೆಚ್ಚು ಜಾರುವ ರಸ್ತೆಗಳ ಮೇಲೆ ಹೆಚ್ಚಿನ ಸುರಕ್ಷತೆ ನೀಡುತ್ತದೆ. `ರೋಲ್’ ಮೋಡ್‍ನಲ್ಲಿ ಎಂಜಿನ್ ಗರಿಷ್ಠ ಥ್ರಾಟಲ್ ರೆಸ್ಪಾನ್ಸ್ ನೀಡುತ್ತದೆ ರೈಡಿಂಗ್ ಡೈನಮಿಕ್ಸ್ ಎಲ್ಲ ರಸ್ತೆಗಳ ಮೇಲೂ ಸೂಕ್ತ ಕಾರ್ಯಕ್ಷಮತೆ ಸಾಧಿಸಲು ನೆರವಾಗುತ್ತದೆ. `ರಾಕ್’ ಮೋಡ್‍ನಿಂದ ರೈಡರ್‍ಗಳಿಗೆ ಪೂರ್ಣ ಡೈನಮಿಕ್ ಸಾಮಥ್ರ್ಯ ನೀಡುತ್ತದೆ- ಥ್ರಾಟಲ್ ರೆಸ್ಪಾನ್ಸ್ ಅತ್ಯಂತ ತ್ವರಿತ ಮತ್ತು ನೇರವಾಗಿರುತ್ತದೆ, ಆಟೊಮ್ಯಾಟಿಕ್ ಸ್ಟೆಬಿಲಿಟಿ ಕಂಟ್ರೋಲ್ ಕೊಂಚ ಹೆಚ್ಚು ಜಾರಿಸಲು ಅವಕಾಶ ನೀಡುತ್ತದೆ.
ಆಲ್-ನ್ಯೂ BMW R18 ಕ್ಲಾಸಿಕ್ ಪ್ರಮುಖ ಸ್ಟಾಂಡರ್ಡ್ ಫೀಚರ್ಸ್‍ನ ಪಟ್ಟಿ ಹೊಂದಿದೆ. ಡಿಸ್‍ಎಂಗೇಜಬಲ್ ಟ್ರಾಕ್ಷನ್ ಕಂಟ್ರೋಲ್ ಆಟೊಮ್ಯಾಟಿಕ್ ಸ್ಟೆಬಿಲಿಟಿ ಕಂಟ್ರೋಲ್ ರಸ್ತೆ ಒಣಗಿರಲಿ ಅಥವಾ ತೇವದಲ್ಲಿರಲಿ ಪರಿಪೂರ್ಣ ನಿಯಂತ್ರಣವನ್ನು ನೀಡುತ್ತದೆ. ಡೈನಮಿಕ್ ಎಂಜಿನ್ ಬ್ರೇಕ್ ಕಂಟ್ರೋಲ್ ಹಿಂಬದಿಯ ಚಕ್ರ ದಿಢೀರ್ ಥ್ರಾಟಲ್ ಮುಚ್ಚುವಿಕೆ ಅಥವಾ ಬ್ಯಾಕ್ ಸ್ಪೇಸಿಂಗ್‍ನಿಂದ ಹಿಂಬದಿ ಜಾರುವುದನ್ನು ಎಲೆಕ್ಟ್ರಾನಿಕ್ ರೂಪದಲ್ಲಿ ತಡೆಯುತ್ತದೆ. ಹಿಲ್ ಸ್ಟಾರ್ಟ್ ಕಂಟ್ರೋಲ್ ಬೆಟ್ಟದ ಮೇಲೆ ಚಾಲಿಸುವುದನ್ನು ಸುಲಭಗೊಳಿಸುತ್ತದೆ. ಕೀಲೆಸ್ ರೈಡ್ ಸಿಸ್ಟಂ ಸಾಂಪ್ರದಾಯಿಕ ಇಗ್ನಿಷನ್ ಸ್ಟೀರಿಂಗ್ ಲಾಕ್ ಬದಲಾಯಿಸುತ್ತದೆ. ಈ ಬೈಕ್ ಎಲೆಕ್ಟ್ರಾನಿಕ್ ಕ್ರೂಸ್ ಕಂಟ್ರೋಲ್ ಅನ್ನು ಸ್ಟಾಂಡರ್ಡ್ ಆಗಿ ನೀಡುತ್ತದೆ.