ರಾಯಲ್ ಎನ್‌ಫೀಲ್ಡ್ ಮೆಟೊರ್ 350 ಬೈಕ್ ಬಿಡುಗಡೆ ಯಾವಾಗ? ಮಾಹಿತಿ ಬಹಿರಂಗ!
ರಾಯಲ್ ಎನ್‌ಫೀಲ್ಡ್ ಕೆಲ ಬದಲಾವಣೆಯೊಂದಿಗೆ ನೂತನ ಮೆಟೊರ್ 350 ಬೈಕ್ ಬಿಡುಗಡೆ ಮಾಡಲು ತಯಾರಿ ಆರಂಭಿಸಿದೆ. ರಾಯಲ್ ಎನ್‌ಫೀಲ್ಡ್ ಹೇಳಿದ ಪ್ರಕಾರ ಸೆಪ್ಟೆಂಬರ್ ತಿಂಗಳಲ್ಲಿ ನೂತನ ಬೈಕ್ ಬಿಡುಗಡೆಯಾಗಬೇಕಿತ್ತು. ಆದರೆ ಇದೀಗ ಮಟೊರ್ 350 ಬೈಕ್ ಸೆಪ್ಟೆಂಬರ್ ತಿಂಗಳಲ್ಲಿ ಬಿಡುಗಡೆಯಾಗುತ್ತಿಲ್ಲ. ಬದಲಾಗಿ ಹೊಸ ದಿನಾಂಕ ಬಹಿರಂಗ ಮಾಡಲಾಗಿದೆ.
ಕೊರೋನಾ ವೈರಸ್ ಕಾರಣ ಎಪ್ರಿಲ್, ಮೇ ತಿಂಗಳಲ್ಲಿ ಬಿಡುಗಡೆಯಾಗಬೇಕಿದ್ದ ಹಲವು ಬೈಕ್, ಕಾರುಗಳು ಇದೀಗ ಬಿಡುಗಡೆ ಕಾಣುತ್ತಿದೆ. ಕೊರೋನಾ ಕಾರಣ ಬಿಡುಗಡೆ ದಿನಾಂಕ ಮುಂದೂಡಿದ್ದ ರಾಯಲ್ ಎನ್‌ಫೀಲ್ಡ್ ಮೆಟೊರ್ ಬೈಕ್ ಇದೀಗ ಮತ್ತೆ ದಿನಾಂಕ ಬದಲಾಗಿದೆ.
ರಾಯಲ್ ಎನ್‌ಫೀಲ್ಡ್ ಹೇಳಿದ ಪ್ರಕಾರ ಸೆಪ್ಟೆಂಬರ್ ತಿಂಗಳಲ್ಲಿ ನೂತನ ಮೆಟೊರ್ 350 ಬೈಕ್ ಭಾರತದಲ್ಲಿ ಬಿಡುಗಡೆಯಾಗಬೇಕಿತ್ತು. ಆದರೆ ನೂತನ ಬೈಕ್ ಇದೀಗ ಆಕ್ಟೋಬರ್ ತಿಂಗಳ ಆರಂಭದಲ್ಲಿ ಮಾರುಕಟ್ಟೆ ಪ್ರವೇಶಿಸುತ್ತಿದೆ.
ಬಿಡುಗಡೆ ದಿನಾಂಕ ಬದಲಾವಣೆಗೆ ರಾಯಲ್ ಎನ್‌ಫೀಲ್ಡ್ ಯಾವುದೇ ಕಾರಣ ನೀಡಿಲ್ಲ. ಆದರೆ ಸೆಪ್ಟೆಂಬರ್ 30 ರಂದು ರಾಯಲ್ ಎನ್‌ಫೀಲ್ಡ್ ಬೈಕ್‌ಗೆ ಪ್ರತಿಸ್ಪರ್ಧಿಯಾಗಿ ಹೊಂಡಾ ಬೈಕ್ ಬಿಡುಗಡೆಯಾಗುತ್ತಿದೆ.
ರಾಯಲ್ ಎನ್‌ಫೀಲ್ಡ್ ಥಂಡರ್‌ಬರ್ಡ್ 350X ಬೈಕ್‌ಗೆ ಬದಲಾಗಿಮೆಟೊರ್ 350 ಬೈಕ್ ಬಿಡುಗಡೆಯಾಗುತ್ತಿದೆ. ಡಬಲ್ ಕ್ರಾಡಲ್ ಚಾಸಿಸ್ ಹೊಂದಿರು ನೂತನ ಬೈಕ್ ಹಲವು ಫೀಚರ್ಸ್ ಹೊಂದಿದೆ.
ಬ್ಲೂಟೂಥ್, ನ್ಯಾವಿಗೇಶನ್ ಸೇರಿದಂತೆ ಹಲವು ಫೀಚರ್ಸ್ ನೀಡಲಾಗಿದೆ. ಹಲವು ಬಣ್ಣಗಳಲ್ಲೂ ನೂತನ ಬೈಕ್ ಲಭ್ಯವಿದೆ.
ರಾಯಲ್ ಎನ್‌ಫೀಲ್ಡ್ ಮೆಟೊರ್ ಬೈಕ್‌ನಲ್ಲಿ ಆಧನಿಕ ತಂತ್ರಜ್ಞಾನಗಳನ್ನು ಬಳಸಲಾಗಿದೆ. 349 cc, ಸಿಂಗಲ್ ಸಿಲಿಂಡರ್, ಏರ್ ಕೂಲ್ಡ್ ಹಾಗೂ ಫ್ಯೂಯೆಲ್ ಇಂಜೆಕ್ಟೆಡ್ ಎಂಜಿನ್ ಹೊಂದಿದೆ.
ರಾಯಲ್ ಎನ್‌ಫೀಲ್ಡ್ ಮೆಟೊರ್ ಬೈಕ್ 20.2 PS ಗರಿಷ್ಠ ಪವರ್ ಹಾಗೂ 27 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ.
ನೂತನ ಬೈಕ್ ಬೆಲೆ 1.65 ಲಕ್ಷ ರೂಪಾಯಿಯಿಂದ 1.75 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ಬೆಲೆ ಇರಲಿದೆ ಎಂದು ಅಂದಾಜಿಸಲಾಗಿದೆ.