ಕಿಯಾ ಮೋಟಾರ್ಸ್ ಭರ್ಜರಿ ಡಿಸ್ಕೌಂಟ್ ಆಫರ್, ಕಾರ್ನಿವಲ್ ಖರೀದಿ ಮೇಲೆ 2 ಲಕ್ಷ ರೂ. ರಿಯಾಯಿತಿ!
ಕಿಯಾ ಮೋಟಾರ್ಸ್ ಭಾರತದಲ್ಲಿ ಹೊಸ ಸಂಚಲನ ಮೂಡಿಸಿದೆ. ಕಿಯಾ ಸೆಲ್ಟೋಸ್ ಯಶಸ್ಸಿನ ಬೆನ್ನಲ್ಲೇ ಕಾರ್ನಿವಲ್ MPV ಕಾರು ಬಿಡುಗಡೆ ಮಾಡಿತ್ತು. ಅತ್ಯಾಧುನಿಕ ಹಾಗೂ ಲಕ್ಸುರಿ ಕಾರಾಗಿ ಗುರಿತಿಸಿಕೊಂಡಿರುವ ಕಾರ್ನಿವಲ್ ಕಾರಿನ ಮೇಲೆ ಬರೋಬ್ಬರಿ 2 ಲಕ್ಷ ರೂಪಾಯಿ ಡಿಸ್ಕೌಂಟ್ ನೀಡಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.

ಕೊರೋನಾ ವೈರಸ್ ಕಾರಣ ಮಾರಾಟ ಕುಸಿತ ಸರಿದೂಗಿಸಲು ಇದೀಗ ಕಿಯಾ ಮೋಟಾರ್ಸ್ ಭರ್ಜರಿ ಡಿಸ್ಕೌಂಟ್ ಆಫರ್ ಘೋಷಿಸಿದೆ. ಸೀಮಿತ ಅವಧಿಗೆ ಕಿಯಾ ಮೋಟಾರ್ಸ್ ಕಾರ್ನಿವಲ್ ಕಾರಿನ ಮೇಲೆ ಗರಿಷ್ಠ 2 ಲಕ್ಷ ರೂಪಾಯಿ ಡಿಸ್ಕೌಂಟ್ ನೀಡಿದೆ.

ಡಿಸ್ಕೌಂಟ್ ಆಫರ್ ಮೂಲಕ ಕಾರು ಮಾರಾಟ ಹೆಚ್ಚಿಸಲು ಹಾಗೂ ಹೆಚ್ಚಿನ ಗ್ರಾಹಕರನ್ನು ಆಕರ್ಷಿಸಲು ಕಿಯಾ ಮೋಟಾರ್ಸ್ ಮುಂದಾಗಿದೆ. ಕ್ಯಾಶ್ ಡಿಸ್ಕೌಂಟ್, ಎಕ್ಸ್‌ಚೇಂಜ್ ಬೋನಸ್ ಹಾಗೂ ಕಾರ್ಪೋರೇಟ್ ಆಫರ್ ಮೂಲಕ ವಿಂಗಡಿಸಲಾಗಿದೆ.
46,000 ರೂಪಾಯಿ ಕ್ಯಾಶ್ ಡಿಸ್ಕೌಂಟ್, ಗರಿಷ್ಠ 80,000 ರೂಪಾಯಿ ಎಕ್ಸ್‌ಚೇಂಜ್ ಬೋನಸ್, 48,000 ಸಾವಿರ ರೂಪಾಯಿ ಮೌಲ್ಯದ 3 ವರ್ಷದ ನಿರ್ವಹಣಾ ಪ್ಯಾಕೇಜ್ ಸೇರಿದಂತೆ ಒಟ್ಟು 2 ಲಕ್ಷ ರೂಪಾಯಿ ಮೌಲ್ಯದ ಡಿಸ್ಕೌಂಟ್ ನೀಡಲಾಗಿದೆ.
ಕಿಯಾ ಕಾರ್ನಿವಲ್ ಕಾರಿನ ಬೆಲೆ 24.95 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ಆರಂಭಗೊಳ್ಳುತ್ತಿದ್ದು, ಟಾಪ್ ಎಂಡ್ ಮಾಡೆಲ್ ಬೆಲೆ 33.95 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ).
ಕಾರ್ನಿವಲ್ ಕಾರು 2.2 ಲೀಟಲ್, 4 ಸಿಲಿಂಡರ್ ಡೀಸೆಲ್ ಎಂಜಿನ್ ಹೊಂದಿದೆ. 200Bhp ಪವರ್ ಹಾಗೂ 440 NM ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ.
ಇನ್ನು emi ಹಾಲಿಡೇ ಪ್ಲಾನ್ ಕೂಡ ಆರಂಭಿಸಿದೆ. ಈ ಮೂಲಕ ಕಾರು ಖರೀದಿಸಿದ ಗ್ರಾಹರ ಆರಂಭಿಕ 90 ದಿನ ಅಂದರೆ 3 ತಿಂಗಳು ಯಾವುದೇ ಸಾಲ ಕಂತು ಮರುಪಾವತಿ ಮಾಡಬೇಕಾಗಿಲ್ಲ. 3 ತಿಂಗಳ ಬಳಿಕ emi ಪಾವತಿಸುವ ಅವಕಾಶ ನೀಡಲಾಗಿದೆ.
2020ರ ಜನವರಿಯಿಂದ ಇಲ್ಲೀವರೆಗೆ ಕಿಯಾ ಕಾರ್ನಿವಲ್ 3,828 ಕಾರುಗಳು ಮಾರಾಟವಾಗಿದೆ. ಫೆಬ್ರವರಿ ತಿಂಗಳಲ್ಲಿ 1620 ಕಾರು ಮಾರಾಟವಾಗೋ ಮೂಲ ಇದುವರೆಗಿನ ಗರಿಷ್ಠ ಮಾರಾಟ ಹೆಗ್ಗಳಿಕೆ ಎನಿಸಿಕೊಂಡಿದೆ.
ಸಾಲ, ಸಾಲದ ಕಂತು ಸೇರಿದಂತೆ ಹಲವು ಯೋಜನೆಗಳು ಆಫರ್ ಚಾಲ್ತಿಯಲ್ಲಿದೆ. ಕಾರ್ನಿವಲ್ ಕಾರಿನ ಮಾರಾಟ ಉತ್ತೇಜಿಸಲು ಕಿಯಾ ಮೋಟಾರ್ಸ್ ಸಜ್ಜಾಗಿದೆ. ಮುಂಬರುವ ಹಬ್ಬದ ವೇಳೆ ಮತ್ತೆ ಅಧಿಪತ್ಯ ಸಾಧಿಸಲು ಕಿಯಾ ಯೋಜನೆ ಹಾಕಿಕೊಂಡಿದೆ.