ವಾಹನ ಓಡಿಸೋವಾಗ ಈ ದಾಖಲೆ ಮರೆತ್ರೆ ಜೇಬಿಗೆ ಕತ್ತರಿ, ಹತ್ತು ಸಾವಿರ ದಂಡ
Pollution Control Certificate :ಕಾರ್, ಬೈಕ್ ಓಡಿಸೋವಾಗ ಲೈಸೆನ್ಸ್ ಮಾತ್ರವಲ್ಲ ಈ ಒಂದು ದಾಖಲೆ ನಿಮ್ಮ ಬಳಿ ಇರಲಿ. ಬರೀ 70 ರೂಪಾಯಿ ಈ ದಾಖಲೆ ನಿಮ್ಮ ಜೇಬಿಗೆ 10 ಸಾವಿರ ನಷ್ಟ ತರಬಹುದು.

ಸಂಚಾರಿ ನಿಯಮ
ಕಾರ್, ಬೈಕ್ ಡ್ರೈ ಮಾಡುವಾಗ ಎಚ್ಚರಿಕೆ ಬಹಳ ಅಗತ್ಯ. ಹಾಗೆ ಸಂಚಾರಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡ್ಬೇಕು. ಟ್ರಾಫಿಕ್ ನಿಯಮಗಳು ಈಗ ಮತ್ತಷ್ಟು ಕಠಿಣವಾಗಿದೆ. ದಂಡ, ಶಿಕ್ಷೆ ಪ್ರಮಾಣ ಕೂಡ ಹೆಚ್ಚಾಗಿದೆ. ಸಾಮಾನ್ಯವಾಗಿ ವಾಹನ ಓಡಿಸೋ ಮೊದಲು ಹೆಲ್ಮೆಟ್, ಸೀಟ್ ಬೆಲ್ಟ್, ಡ್ರೈವಿಂಗ್ ಲೈಸೆನ್ಸ್ ಚೆಕ್ ಮಾಡ್ತಾರೆ, ತಮ್ಮ ಬಳಿ ಇಟ್ಟುಕೊಳ್ತಾರೆ. ಇವುಗಳ ಜೊತೆ ನೀವು ಅಗತ್ಯವಿರುವ ದಾಖಲೆ ಒಂದನ್ನು ಮರಿತೀರಿ. ಅತೀ ಕಡಿಮೆ ಬೆಲೆಗೆ ಸಿಗೋ ಈ ದಾಖಲೆ ನಿಮ್ಮಲ್ಲಿಲ್ಲ ಅಂದ್ರೆ ನೀವು ಹತ್ತು ಸಾವಿರ ದಂಡ ತೆರೆಬೇಕಾಗುತ್ತೆ.

ಪಿಯುಸಿ ದಾಖಲೆ ಮುಖ್ಯ
ವಾಹನ ತೆಗೆದುಕೊಂಡು ರಸ್ತೆಗೆ ಇಳಿತಿರಿ ಎಂದಾದ್ರೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ನಿಮ್ಮ ಬಳಿ ಇದ್ಯಾ? ಅದನ್ನು ರಿನಿವಲ್ ಮಾಡ್ಸಿದಿರಾ ಅನ್ನೋದನ್ನು ಚೆಕ್ ಮಾಡ್ಕೊಳ್ಳಿ. ಮಾಲಿನ್ಯ ನಿಯಂತ್ರಣ ಪ್ರಮಾಣ ಪತ್ರದ ಬೆಲೆ ಕೇವಲ 70 ರಿಂದ 100 ರೂಪಾಯಿ ಒಳಗೆ ಇರುತ್ತೆ. ಈ ದಾಖಲೆ ನಿಮ್ಮ ಬಳಿ ಇಲ್ಲ ಅಂದ್ರೆ ನೀವು ಟ್ರಾಫಿಕ್ ಪೊಲೀಸರಿಗೆ 10,000 ರೂಪಾಯಿಗಳವರೆಗೆ ಭಾರಿ ದಂಡ ವಿಧಿಸ್ಬೇಕಾಗುತ್ತೆ.
ಪ್ರತಿ ವಾಹನಕ್ಕೂ ಇದು ಬೇಕು
ಪ್ರತಿಯೊಂದು ವಾಹನ ಸವಾರನೂ ಈ ದಾಖಲೆ ಹೊಂದಿರಬೇಕು. ಇದು ಕೇವಲ ಕಾರಿಗೆ ಸೀಮಿತ ಅಲ್ಲ. ಬೈಕ್ ಸವಾರ ಕೂಡ ಈ ದಾಖಲೆ ಪಡೆದಿರಬೇಕು. ನಿಮ್ಮ ವಾಹನ ನಿಗದಿತ ಮಿತಿಯನ್ನು ಮೀರಿ ಮಾಲಿನ್ಯ ಹೊರಸೂಸುತ್ತಿಲ್ಲ ಎಂಬುದನ್ನು ಪಿಯುಸಿ ಪ್ರಮಾಣಪತ್ರ ಸೂಚಿಸುತ್ತೆ. ಆಟೋ ಅಥವಾ ಟ್ರಕ್ ಚಾಲಕರೂ ಇದನ್ನು ಹೊಂದಿರಬೇಕು. ಮಾಲಿನ್ಯವನ್ನು ನಿಯಂತ್ರಿಸಲು ಸರ್ಕಾರ ಈ ದಾಖಲೆಯನ್ನು ಬಿಗಿಗೊಳಿಸಿದೆ. ಒಂದ್ವೇಳೆ ನೀವು ಈ ದಾಖಲೆ ಇಲ್ದೆ ರಸ್ತೆಗೆ ವಾಹನ ಇಳಿಸಿದ್ರೆ ಟ್ರಾಫಿಕ್ ಪೊಲೀಸರು ದಂಡ ವಿಧಿಸ್ತಾರೆ. ಮೊದಲ ದಂಡ 10 ಸಾವಿರ ರೂಪಾಯಿವರೆಗೆ ಇರುತ್ತೆ. ಕೆಲವು ಸಂದರ್ಭಗಳಲ್ಲಿ ಜೈಲು ಶಿಕ್ಷೆ ಅನುಭವಿಸ್ಬೇಕಾಗುತ್ತದೆ.
ದಾಖಲೆ ಪಡೆಯುವ ವಿಧಾನ
ಪಿಯುಸಿ ದಾಖಲೆ ಪಡೆಯೋದು ಸುಲಭ. ಈ ಪ್ರಮಾಣಪತ್ರವನ್ನು ಯಾವುದೇ ಅಧಿಕೃತ ಎಮಿಷನ್ ಟೆಸ್ಟಿಂಗ್ ಸೆಂಟರ್ ಅಥವಾ ಪೆಟ್ರೋಲ್ ಪಂಪ್ನಲ್ಲಿ ಸುಲಭವಾಗಿ ಪಡೆಯಬಹುದು. ವಾಹನವನ್ನು ಮಿಷನ್ ಮೂಲಕ ಪರಿಶೀಲಿಸಲಾಗುತ್ತದೆ. 10 ರಿಂದ 15 ನಿಮಿಷಗಳಲ್ಲಿ ಪ್ರಮಾಣ ಪತ್ರ ನೀಡಲಾಗುತ್ತದೆ. ಬೈಕ್ ಮತ್ತು ಸ್ಕೂಟರ್ಗಳಿಗೆ ಪಿಯುಸಿ ಪಡೆಯಲು ನೀವು 70 ರಿಂದ 80 ರೂಪಾಯಿ ಶುಲ್ಕ ಪಾವತಿ ಮಾಡ್ಬೇಕು. ಕಾರುಗಳಿಗೆ 100 ರಿಂದ 150 ರೂಪಾಯಿ ಪಾವತಿ ಮಾಡ್ಬೇಕು.
ಆನ್ಲೈನ್ ನಲ್ಲಿ ಲಭ್ಯ
ನೀವು ಆನ್ಲೈನ್ ಮೂಲಕ ಹೆಚ್ಚುವರಿ ಸೇವೆ ಪಡೆಯಬಹುದು. ಟ್ರಾಫಿಕ್ಇಲಾಖೆ ಡಿಜಿಟಲ್ ಮೇಲ್ವಿಚಾರಣೆ ಮಾಡ್ತಿದೆ. ಅನೇಕ ನಗರಗಳಲ್ಲಿ ಪಿಯುಸಿ ಅವಧಿ ಮುಗಿದಾಗ ಆನ್ಲೈನ್ ಚಲನ್ಗಳನ್ನು ಕಳುಹಿಸುತ್ತದೆ. ಪಿಯುಸಿ ಅವಧಿ ಮುಗಿದ ಕೆಲವರು ಮನೆಯಲ್ಲಿಯೇ ಇ-ಚಲನ್ ಸ್ವೀಕರಿಸ್ತಿದ್ದಾರೆ.
ಸದಾ ನಿಮ್ಮ ಬಳಿ ಇರಲಿ
ನೀವು ಮಾನ್ಯ ಪಿಯುಸಿ ಹೊಂದಿದ್ದರೂ ನಿಮಗೆ ದಂಡ ವಿಧಿಸಿದ್ರೆ ನೀವು ಕೋರ್ಟ್ ಮೊರೆ ಹೋಗ್ಬಹುದು. ಆನ್ಲೈನ್ ಪೋರ್ಟಲ್ ಮೂಲಕ ನೀವು ನ್ಯಾಯ ಕೇಳ್ಬಹುದು. ಪಿಯುಸಿ ಪ್ರತಿ ಪಡೆದ ನಂತ್ರ ಅದನ್ನು ಇಟ್ಟುಕೊಳ್ಳುವುದು ಮತ್ತು ಅದರ ಮಾನ್ಯತೆಯ ಅವಧಿ ಮುಗಿಯುವ ಮೊದಲು ಅದನ್ನು ನವೀಕರಿಸುವುದು ಬಹಳ ಮುಖ್ಯ. ಕಡಿಮೆ ಖರ್ಚಿನ ಈ ದಾಖಲೆ ನಿರ್ಲಕ್ಷ್ಯ ಮಾಡಿ ಭಾರಿ ದಂಡ ತೆರುವ ಸ್ಥಿತಿ ತಂದ್ಕೊಳ್ಬೇಡಿ.

