ಗದಗ[ನ.7]: ಯಡಿಯೂರಪ್ಪನವರು ಮೂರು ಮುಕ್ಕಾಲು ವರ್ಷ ಮುಖ್ಯಮಂತ್ರಿ ಆಗಿರ್ತಾರೆ. ಯಡಿಯೂರಪ್ಪನವರ ದೂರ ದೃಷ್ಟಿಯ ಚಿಂತನೆಯಿಂದ ಅವರು ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆ. ಬಿಎಸ್ವೈ ಅವರದು ನೇರ ನುಡಿ, ನಿಷ್ಠುರವಾದಿ ಸತ್ಯನ ಎರಡು ನಿಮಿಷದಲ್ಲಿ ಹೇಳಿ ಬಿಡುತ್ತಾರೆ. ಯಾರು ಏನ್ ಹೇಳಿದ್ರೂ ನಾನು ಇದ್ದದ್ದನ್ನೇ ಮಾಡ್ತೀನಿ ಅಂತಾರೆ. ಅವರು ಅಭಿವೃದ್ಧಿಗಾಗಿ ಚಿಂತನೆ ಮಾಡ್ತಾರೆ. ಬೇರೆ ಏನೂ ಇಲ್ಲ ಎಂದು ಸಚಿವ ವಿ ಸೋಮಣ್ಣ ಅವರು ಹೇಳಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಮುಂದಿನ ದಿನಗಳಲ್ಲಿ ಜೆಡಿಎಸ್- ಬಿಜೆಪಿ ಮೈತ್ರಿ ಮಾಡಿಕೊಳ್ಳಲಿದೆ ಎಂದು ಮಾಜಿ ಸಿಎಂ  ಸಿದ್ದರಾಮಯ್ಯ ಅವರ ಹೇಳಿಕೆಗೆ ಗುರುವಾರ ನಗರದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಮಾಜಿ ಪ್ರಧಾನಿ ಹೆಚ್. ಡಿ. ದೇವೇಗೌಡರು ರಾಜ್ಯ, ರಾಷ್ಟ್ರದ ನಾಯಕರಾಗಿದ್ದಾರೆ. ರಾಜಕೀಯದಲ್ಲಿ ಯಾರು ಯಾರಿಗೆ ಶತ್ರುಗಳೂ ಅಲ್ಲ ಮಿತ್ರರೂ ಅಲ್ಲ. ರಾಜಕಾರಣ ಒಂದು ತೆರದ ಪುಸ್ತಕ ಯಾರು ಏನಾದರೂ ಮಾಡಿದರೆ ಬಿಡ್ತೀರಾ? ಹಿಡಿದಾಕ್ತಿರಾ ಎಂದು ಹೇಳುವ ಮೂಲಕ ಸಿದ್ದರಾಮಯ್ಯಗೆ ಟಾಂಗ್ ಕೊಟ್ಟಿದ್ದಾರೆ.