ಅಕ್ಷಯ ಕುಮಾರ ಶಿವಶಿಂಪಿಗೇರ 

ಗದಗ[ಅ.21]:  ಗದಗ-ಬೆಟಗೇರಿ ಅವಳಿ ನಗರದೆಲ್ಲೆಡೆ ದಿನಕಳೆದಂತೆ ಬೀದಿ ನಾಯಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು,ಇದರಿಂದ ಸಾರ್ವಜನಿಕರು ಆತಂಕ ಎದುರಿಸುತ್ತಿದ್ದಾರೆ. ಎಲ್ಲೆಂದರಲ್ಲಿ ಗುಂಪು ಕಟ್ಟಿಕೊಂಡು ವಾಸಿಸುತ್ತಿರುವ ನಾಯಿಗಳು ಸಂಚಾರಿಗಳನ್ನು ಭಯಭೀತರನ್ನಾಗಿಸುತ್ತಿವೆ. 

ಚಿಕ್ಕ ಮಕ್ಕಳು, ಮಹಿಳೆಯರು ಆತಂಕದಿಂದ ಸಂಚರಿಸುವಂತಾಗಿದೆ. ವಾಹನ ಸವಾರರಿಗಂತೂ ನಾಯಿಗಳ ಗುಂಪುಗಳು ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಗದಗ ನಗರದ ಪ್ರಮುಖ ಸ್ಥಳಗಳಾದ ತೋಂಟದಾರ್ಯ ಮಠದರಥ ಬೀದಿ, ಬ್ಯಾಂಕ್ ರಸ್ತೆ, ವೀರೇಶ್ವರ ಲೈಬ್ರರಿ ಬಳಿ,ಮಹಾತ್ಮ ಗಾಂಧಿ ವೃತ್ತದ ಆಸುಪಾಸಿನಲ್ಲಿ, ಸ್ಟೇಷನ್‌ ರಸ್ತೆ ಬಳಿ, ಬೆಟಗೇರಿ ಬಸ್ ನಿಲ್ದಾಣ ಬಳಿ, ಟೆಂಗಿನಕಾಯಿ ಬಜಾರ್ ಸೇರಿದಂತೆ ವಿವಿಧ ಹಿಂದುಳಿದ ಬಡಾವಣೆಗಳಲ್ಲಿ ಬೀದಿ ಶ್ವಾನಗಳ ಕಾಟಮಿತಿ ಮೀರಿದೆ. 

ಆತಂಕದಲ್ಲಿ ನಿವಾಸಿಗಳು: 

ಮಹಿಳೆಯರು, ಮಕ್ಕಳು ನಗರದಲ್ಲಿ ಶ್ವಾನಗಳಿಂದಾಗಿ ಮಹಿಳೆಯರು, ಮಕ್ಕಳು ಆತಂಕ ಎದುರಿಸುವಂತಾಗಿದೆ. ಚಿಕ್ಕಮಕ್ಕಳು ಶಾಲೆಗಳಿಂದ ಮನೆಗೆ ಹಿಂತಿರುಗುವ ವೇಳೆ, ಕೈಯಲ್ಲಿ ತಿನಿಸು ಹಿಡಿದುಕೊಂಡು ಹೋಗುವ ವೇಳೆ ನಾಯಿಗಳು ಬಂದು ಬಾಯಿ ಹಾಕುತ್ತವೆ. ಇಲ್ಲವಾದರೆ ನಾಲ್ಕೆ ದು ನಾಯಿಗಳ ಗುಂಪು ಒಮ್ಮೆಲೆ ಬೊಗಳಲು ಪ್ರಾರಂಭಿಸುತ್ತವೆ. ಈ ರೀತಿ ಘಟನೆಗಳಿಂದ ಮಹಿಳೆಯರು ಮಕ್ಕಳು ಆತಂಕದಲ್ಲೇ ಸಂಚರಿಸುವಂತಾಗಿದೆ. ಬೀದಿ ಶ್ವಾನಗಳಿಂದ ರಾತ್ರಿ ವೇಳೆಯಂತೂ ಕೆಲ ರಸ್ತೆಗಳಲ್ಲಿ ಸಂಚರಿಸುವುದೇ ದುಸ್ತರ ಎಂಬಂತಾಗಿದೆ. ವಾಹನ ಸಂಚಾರಿಗಳಿಗೆ ತಪ್ಪದ ಆತಂಕನಗರದ ಎಸ್.ಎಂ. ಕೃಷ್ಣಾ ನಗರ, ಬೆಟಗೇರಿಭಾಗ, ಜವಳಗಲ್ಲಿ, ಗಂಗಿಮಡಿ, ಗಂಗಾಪುರಪೇಟ ಒಕ್ಕಲಗೇರಿ ಸೇರಿದಂತೆ ಮಾರುಕಟ್ಟೆ ಭಾಗದಲ್ಲೂ ನಾಯಿಗಳ ಕಾಟ ತಪ್ಪಿಲ್ಲ. ಇಲ್ಲಿರುವ ಗುಂಪು-ಗುಂಪು ನಾಯಿಗಳು ರಾತ್ರಿ ವೇಳೆದ್ವಿಚಕ್ರ ವಾಹನಗಳಿಗೆ ಬೊಗಳುತ್ತಿದ್ದು, ಈ ಸಂದರ್ಭದಲ್ಲಿ ಕೊಂಚ ಯಾಮಾರಿದರೂವಾಹನ ಸಂಚಾರಿಗಳು ಗಾಡಿಯಿಂದ ಬಿದ್ದು, ಕೈಕಾಲು ಮುರಿಯುವುದು ನಿಶ್ಚಿತ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ನಗರದಲ್ಲಿ ಆಗಾಗ ಈ ರೀತಿ ಸಣ್ಣ-ಪುಟ್ಟ ಘಟನೆಗಳುನಡೆಯುತ್ತಲೇ ಇರುತ್ತವೆ. ಈ ರೀತಿ ಬೀದಿ ಶ್ವಾನಗಳನ್ನು ನಿಯಂತ್ರಿಸುವುದು ಅನಿವಾರ್ಯವಾಗಿದೆ. ನಗರಸಭೆ ಅಧಿಕಾರಿಗಳು ಶ್ವಾನಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವ ಮೂಲಕ ಸಾರ್ವಜನಿಕರು ಭಯಮುಕ್ತವಾಗಿ ಸಂಚರಿಸುವಂತಾಗಬೇಕಿದೆ. ಇತ್ತೀಚೆಗಷ್ಟೇ ಜಿಲ್ಲೆಯ ರೋಣ ತಾಲೂಕು ನರೇಗಲ್ಲ ಪಟ್ಟಣ ಹಾಗೂ ಕೋಡಿಕೊಪ್ಪ ಗ್ರಾಮದಲ್ಲಿ ನಾಯಿಗಳ ಹಾವಳಿಯಿಂದಾಗಿ ಸುಮಾರು 12  ಜನರಿಗೆ ಗಾಯವಾಗಿ ಜಿಲ್ಲಾಸ್ಪತ್ರೆ ಸೇರಿದ್ದರು. ಮುಂಡರಗಿ ಪಟ್ಟಣದಲ್ಲೂ 5 ಜನರಿಗೆ ಹುಚ್ಚುನಾಯಿ ಕಚ್ಚಿದ ಘಟನೆ ನಡೆದಿದ್ದು, ಈಗ ಗದಗನಗರದಲ್ಲಿಯೂ ಸಹ ಇದೇ ರೀತಿಯ ಭಯದವಾತಾವರಣ ಸೃಷ್ಟಿಯಾಗಿದೆ. ರಸ್ತೆಯಲ್ಲಿಮಹಿಳೆಯರು, ವೃದ್ಧರು, ಮಕ್ಕಳು ಸಂಚರಿಸಲುಭಯಭೀತರಾಗುತ್ತಿದ್ದಾರೆ.

ಹಾಲು ಹಾಕುವವರಿಗೂ ಭಯ

ಬೆಳ್ಳಂಬೆಳಗ್ಗೆ ಮನೆಮನೆಗೆ ಹಾಲು ಹಾಕುವವರಿಗೆ,ದಿನಪತ್ರಿಕೆಗಳನ್ನು ವಿತರಿಸುವವರಿಗೆ, ಹೂ,ಕಾಯಿಪಲ್ಲೆ ಮಾರಾಟಗಾರರಿಗಂತೂ ಬೀದಿನಾಯಿಗಳಿಂದ ಸಾಕಾಗಿ ಹೋಗಿದೆ. ಪ್ರತಿದಿನವೂತಾವು ಕೆಲಸದಲ್ಲಿ ನಿರತರಾದ ಸಂದರ್ಭದಲ್ಲಿನಾಯಿಗಳು ಬೊಗಳುತ್ತ ಎಲ್ಲರನ್ನೂಭಯಭೀತಿಗೊಳಿಸುತ್ತಿವೆ. ತಮ್ಮ ಕೆಲಸವನ್ನುಮಾಡದೇ ಇರುವಂತಹ ಸ್ಥಿತಿ ನಿರ್ಮಾಣವಾಗಿದೆ.ಇಂತಹ ಬೀದಿನಾಯಿಗಳಿಗೆ ಶೀಘ್ರ ಕಡಿವಾಣಬೀಳಬೇಕಿದೆ

ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ

ಸದ್ಯ ನಗರಸಭೆ ಆಡಳಿತಾವಧಿ ಮುಗಿದಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳೇ ನಗರಸಭೆಯ ಅಧಿಕಾರಿ ವಹಿಸಿಕೊಂಡಿದ್ದಾರೆ. ಯಾವುದೇ ಜನಪ್ರತಿನಿಧಿಗಳೂ ಇಲ್ಲದೇ ಇರುವುದರಿಂದ ಅಧಿಕಾರಿಗಳೆಲ್ಲರೂ ತಮ್ಮ ಕೆಲಸದಲ್ಲಿನಿರಂತರವಾಗಿ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಬೀದಿ ನಾಯಿಗಳ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ಶೀಘ್ರ ಗದಗ ನಗರದ ಸಾರ್ವಜನಿರನ್ನು ಅಭಯದಿಂದ ಸಂಚರಿಸುವಂತಾಗಬೇಕಿದೆ.

ಗದಗ ನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿ ಹೋಗಿದೆ. ಕೆಲಸ ಮುಗಿಸಿ ರಾತ್ರಿ ವೇಳೆ ಮನೆಗೆ ತೆರಳುವ ವೇಳೆ ಬೊಗಳುತ್ತಾ ಬೆನ್ನಟ್ಟಿ ಬರುತ್ತಿವೆ. ಇದರಿಂದ ರಾತ್ರಿ ವೇಳೆ ಬೈಕ್ ಮೇಲೆ ಸಂಚರಿಸುವುದೇ ದುಸ್ತರವಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಬೀದಿ ನಾಯಿಗಳ ಕಡಿವಾಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಬೈಕ್ ಸವಾರ ರಮೇಶ ಜಗದೀಶ ಅವರು ಹೇಳಿದ್ದಾರೆ.