ಬಯಲಲ್ಲೇ ನಾಯಿಗಳ ಸಂಭೋಗಕ್ಕೆ ದ್ರೌಪದಿ ಕೊಟ್ಟ ಶಾಪವೇ ಕಾರಣನಾ?

ಮಹಾಭಾರತದಲ್ಲಿ ಅನೇಕ ಶಾಪಗಳ ಕಥೆಯಿದೆ. ಅದ್ರಲ್ಲಿ ನಾಯಿ ಕಥೆ ಕೂಡ ಸೇರಿದೆ. ನಾಯಿ, ದ್ರೌಪದಿ ಶಾಪಕ್ಕೆ ಒಳಗಾಗುತ್ತದೆ. ಹಾಗಾಗಿಯೇ ಈಗ್ಲೂ ನಾಯಿಗಳು ಎಲ್ಲರ ಮುಂದೆ ಸಂಭೋಗ ಬೆಳೆಸುತ್ತವೆ. 
 

which curse did draupadi give to the dogs roo

ಪಾಂಡವರ ಪತ್ನಿ (Pandavas wife), ಪಾಂಚಾಲ ರಾಜನ ಮಗಳು ದ್ರೌಪದಿ (Draupadi). ಇಡೀ ಮಹಾಭಾರತವೇ ದ್ರೌಪದಿ ಮೇಲೆ ನಿಂತಿದೆ ಅಂದ್ರೆ ತಪ್ಪಾಗೋದಿಲ್ಲ. ಮಹಾಭಾರತ (Mahabharata) ದ ಕಥೆಯ ಪ್ರಕಾರ, ಅರ್ಜುನ (Arjuna) ನು ಸ್ವಯಂವರದಲ್ಲಿ ದ್ರೌಪದಿಯನ್ನು ವಿಜಯಿಯಾದಾಗ, ಎಲ್ಲಾ ಪಾಂಡವರು ಮತ್ತು ದ್ರೌಪದಿ ತಾಯಿ ಕುಂತಿ (Kunti) ಯ ಆಶೀರ್ವಾದವನ್ನು ಪಡೆಯಲು ಬರ್ತಾರೆ. ಅಡುಗೆ ಮಾಡುತ್ತಿದ್ದ ತಾಯಿ ಕುಂತಿ, ಅರ್ಜುನ ಮದುವೆಯಾಗಿ ಬಂದಿದ್ದಾನೆ ಎಂಬುದನ್ನು ನೋಡದೆ, ನೀನು ಏನೇ ತಂದಿದ್ದೀಯೋ ಅದನ್ನು ನೀವೆಲ್ಲ ಹಂಚಿಕೊಳ್ಳಿ ಎನ್ನುತ್ತಾಳೆ. ಕುಂತಿ ಮಾಡಿದ ಒಂದು ತಪ್ಪಿನಿಂದ ದ್ರೌಪದಿ, ಐವರು ಪತಿಯರ ಜೊತೆ ಜೀವನ ನಡೆಸುವ ಸ್ಥಿತಿ ಒದಗಿ ಬಂತು. ಸಾಮಾನ್ಯ ಮಹಿಳೆಯರಂತೆ ಬಂದ ಕಷ್ಟವನ್ನೆಲ್ಲ ಎದುರಿಸಿದ ದ್ರೌಪದಿ, ಅತ್ತೆ ಮಾತಿನಂತೆ ಪಾಂಡವರನ್ನು ತನ್ನ ಪತಿ ಅಂತ ಸ್ವೀಕರಿಸಿದ್ದಳು. ದ್ರೌಪದಿ ಐದು ಪಾಂಡವರ ಹೆಂಡತಿಯಾದ ಕಾರಣ ಆಕೆಯನ್ನು ಪಾಂಚಾಲಿ ಎಂದು ಕರೆಯಲಾಯ್ತು. 

ಮಹಾಭಾರತದಲ್ಲಿ ಅನೇಕ ಶಾಪದ ಕಥೆಗಳಿವೆ. ಅದ್ರಲ್ಲಿ ದ್ರೌಪದಿ, ನಾಯಿ (dog) ಗೆ ನೀಡಿದ ಶಾಪವೂ ಸೇರಿದೆ. ನಾರಾಯಣನ ರೂಪವೆಂದೇ ಹಿಂದುಗಳು ಪೂಜೆ ಮಾಡುವ ನಾಯಿ ದ್ರೌಪದಿ ಶಾಪಕ್ಕೆ ಗುರಿಯಾಗಿದೆ. ಹಾಗಾಗಿಯೇ ಈಗ್ಲೂ ನಾಯಿಗಳು ಬಯಲು ಪ್ರದೇಶದಲ್ಲಿ ಎಲ್ಲರ ಮುಂದೆ ಶಾರೀರಿಕ ಸಂಬಂಧ ಬೆಳೆಸುತ್ತವೆ ಎಂದು ನಂಬಲಾಗಿದೆ. ಅಷ್ಟಕ್ಕೂ ದ್ರೌಪದಿ, ನಾಯಿಗೆ ಶಾಪ ನೀಡಲು ಕಾರಣವೇನು? ದ್ರೌಪದಿ ನಾಯಿಗೆ ನೀಡಿದ ಶಾಪವೇನು ಎಂಬ ವಿವರ ಇಲ್ಲಿದೆ.

ಗರ್ಭಿಣಿಯರಿಗೆ ಯಾಕೆ ಹಾವು ಕಚ್ಚಲ್ಲ ಗೊತ್ತಾ?

ದ್ರೌಪದಿ ಜೊತೆ ಏಕಾಂತ- ಪಾಂಡವರಲ್ಲಿತ್ತು ಈ ನಿಯಮ :  ದ್ರೌಪದಿ, ಐವರು ಪಾಂಡವರ ಪತ್ನಿ. ಏಕ ಕಾಲದಲ್ಲಿ ಒಬ್ಬರು ಮಾತ್ರ ದ್ರೌಪದಿ ಜೊತೆ ಇರಬೇಕಾಗಿತ್ತು. ದ್ರೌಪತಿ ಒಬ್ಬ ಪತಿ ಜೊತೆ ಏಕಾಂತದಲ್ಲಿ ಇರುವಾಗ ಇನ್ನೊಬ್ಬರ ಪ್ರವೇಶವನ್ನು ನಿಷೇಧಿಸಲಾಗಿತ್ತು. ಒಂದ್ವೇಳೆ ಈ ಸಮಯದಲ್ಲಿ ಬೇರೆಯವರು ಪ್ರವೇಶ ಮಾಡಿದ್ರೆ ಅವರಿಗೆ ಒಂದು ವರ್ಷಗಳ ವನವಾಸ ಶಿಕ್ಷೆಯಾಗ್ತಾ ಇತ್ತು. ದ್ರೌಪದಿ ಕೋಣೆಯನ್ನು ಪ್ರವೇಶ ಮಾಡುವ ಮೊದಲು ಪಾಂಡವರು ತಮ್ಮ ಪಾದುಕೆಯನ್ನು ಕೋಣೆಯ ಹೊರಗೆ ಇಡಬೇಕಾಗಿತ್ತು. 

ದ್ರೌಪದಿ ನಾಯಿಗೆ ಶಾಪ ನೀಡಲು ಕಾರಣ? : ಒಂದು ದಿನ ಯುಧಿಷ್ಠಿರ (Yudhishthira), ದ್ರೌಪದಿ ಕೋಣೆಗೆ ಬಂದಿರ್ತಾನೆ. ತನ್ನ ಪಾದುಕೆಯನ್ನು ಆತ ಕೋಣೆಯ ಹೊರಗಿಟ್ಟು, ಒಳಗೆ ಹೋಗಿರ್ತಾನೆ. ಆದ್ರೆ ನಾಯಿಯೊಂದು ಕೋಣೆ ಹೊರಗಿದ್ದ ಪಾದುಕೆಯನ್ನು ಕಚ್ಚಿಕೊಂಡು ಹೋಗಿರುತ್ತದೆ. ಈ ಸಮಯದಲ್ಲಿ ಅರ್ಜುನ ಅಲ್ಲಿಗೆ ಬರ್ತಾನೆ. ಅರ್ಜುನನಿಗೆ, ಯುಧಿಷ್ಠಿರನ ಪಾದುಕೆ ಕಾಣಿಸೋದಿಲ್ಲ. ಹಾಗಾಗಿ ಆತ ಕೋಣೆಯ ಒಳಗೆ ಹೋಗ್ತಾನೆ. ದ್ರೌಪದಿ ಮತ್ತು ಯುಧಿಷ್ಠಿರ ಈ ಸಮಯದಲ್ಲಿ ಪರಸ್ಪರ ಹತ್ತಿರವಾಗಿದ್ದರು. ಈ ಸಮಯದಲ್ಲಿ ಅಲ್ಲಿಗೆ ಬಂದ ಅರ್ಜುನ ಮುಜುಗರಕ್ಕೆ ಒಳಗಾಗ್ತಾನೆ. ಆತ ಇಬ್ಬರ ಕ್ಷಮೆ ಕೇಳಿ ಅಲ್ಲಿಂದ ಹೊರಗೆ ಬರ್ತಾನೆ. ಇದನ್ನು ನೋಡಿ ದ್ರೌಪದಿಗೆ ಕೋಪ ಬರುತ್ತದೆ. ಯಾವುದೇ ತಪ್ಪು ಮಾಡದ ಅರ್ಜುನ ನಿಯಮದಂತೆ ಶಿಕ್ಷೆ ಅನುಭವಿಸಬೇಕಾಗುತ್ತದೆ. ಒಂದು ವರ್ಷ ಆತನಿಗೆ ವನವಾಸ ಶಿಕ್ಷೆಯಾಗುತ್ತದೆ. ಎಲ್ಲರೂ ಹೊರಗೆ ಬಂದು, ಯುಧಿಷ್ಠಿರನ ಪಾದುಕೆ ಹುಡುಕಲು ಶುರು ಮಾಡ್ತಾರೆ. ಆಗ ನಾಯಿ, ಯುಧಿಷ್ಠಿರನ ಚಪ್ಪಲಿ ಜೊತೆ ಆಟವಾಡ್ತಿರೋದು ಕಾಣಿಸುತ್ತದೆ.

ಸೊಸೆಗೇ ಗೊತ್ತಿರೋ ಸಂಪ್ರದಾಯ ಅತ್ತೆಗೆ ಗೊತ್ತಿಲ್ವಾ? ಭಕ್ತರಿಗೆ ಪ್ರಸಾದವೆಸೆದು ಟ್ರೋಲ್ ಆದ ನೀತಾ ಅಂಬಾನಿ!

ದ್ರೌಪದಿ ನಾಯಿಗೆ ನೀಡಿದ ಶಾಪವೇನು? : ನಾಯಿ ಬಳಿ ಚಪ್ಪಲಿ ಇರೋದನ್ನು ನೋಡಿ ಕೋಪಗೊಳ್ಳುವ ದ್ರೌಪದಿ ಶಾಪ ನೀಡ್ತಾಳೆ. ಇಂದು ಅರ್ಜುನ, ನನ್ನನ್ನು ನೋಡಿದಂತೆ, ನೀನು ಪ್ರತಿ ದಿನ ಸಂಭೋಗಿಸೋದನ್ನು ಜಗತ್ತು ನೋಡುವಂತಾಗ್ಲಿ ಎಂದು ದ್ರೌಪದಿ ಶಾಪ ನೀಡುತ್ತಾಳೆ. ಅಲ್ಲಿಂದ ನಾಯಿಗಳು ಬಯಲಿನಲ್ಲಿ, ಎಲ್ಲರ ಮುಂದೆ ಒಂದಾಗುತ್ತವೆ ಎಂದು ನಂಬಲಾಗಿದೆ.  
 

Latest Videos
Follow Us:
Download App:
  • android
  • ios