ಜಾತಕದಲ್ಲಿ ಬುಧ ದುರ್ಬಲವಾಗಿದ್ದರೆ ಈ ರೀತಿ ಸಮಸ್ಯೆಗಳು ಎದುರಾಗುತ್ತವೆ.. ಪರಿಹಾರವೂ ಇಲ್ಲಿದೆ..

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಬುಧ ಗ್ರಹವು ಜಾತಕದಲ್ಲಿ ದುರ್ಬಲವಾಗಿದ್ದಾಗ ಜನರು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅಂಥ ಸಮಸ್ಯೆಗಳು ಎದುರಾದಾಗ ಎದೆಗುಂದದೆ ಬುಧವನ್ನು ಬಲಪಡಿಸುವ ಪರಿಹಾರ ಮಾರ್ಗಗಳತ್ತ ನೋಡಬೇಕು. 

Weak Mercury in horoscope brings countless problems in life skr

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಪ್ರತಿ ಗ್ರಹವೂ ಶುಭ ಮತ್ತು ಅಶುಭ ಪರಿಣಾಮಗಳನ್ನು ಹೊಂದಿದೆ. ಬುಧ ಗ್ರಹವು ಬಲವಾಗಿದ್ದಾಗ, ಅದು ಶುಭ ಪರಿಣಾಮಗಳನ್ನು ನೀಡುತ್ತದೆ. ಅದೇ ಸಮಯದಲ್ಲಿ, ವ್ಯಕ್ತಿಯ ಜಾತಕದಲ್ಲಿ ಬುಧನ ಸ್ಥಾನವು ದುರ್ಬಲವಾಗಿದ್ದಾಗ ಆಗ ಆ ಸ್ಥಳೀಯರು ಹಲವು ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಕೆಲವೊಮ್ಮೆ ಕೆಲವರ ತಪ್ಪು ಅಭ್ಯಾಸಗಳೂ ಜಾತಕದಲ್ಲಿ ಬುಧನನ್ನು ದುರ್ಬಲಗೊಳಿಸುತ್ತವೆ. ಈ ಕಾರಣದಿಂದಾಗಿ, ಅದರ ಅಡ್ಡ ಪರಿಣಾಮಗಳು ಹೆಚ್ಚಾಗುತ್ತವೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಬುಧವು ಜಾತಕದಲ್ಲಿ ದುರ್ಬಲಗೊಳ್ಳಲು ಪ್ರಾರಂಭಿಸಿದಾಗ ಜೀವನದಲ್ಲಿ ಕೆಲ ಅನಾಹುತಕಾರಿ ಘಟನೆಗಳು ನಡೆಯಲಾರಂಭಿಸುತ್ತವೆ. ಅವನ್ನೆಲ್ಲ ಗಮನಿಸಿದಾಗ ಅದು ದುರ್ಬಲ ಬುಧದ ಸೂಚನೆ ಎಂದು ತಿಳಿಯಬಹುದು. ದುರ್ಬಲ ಬುಧವನ್ನು ತೋರಿಸುವ ಆ ಚಿಹ್ನೆಗಳು ಯಾವುವು ಎಂದು ತಿಳಿಯೋಣ.

ಜಾತಕದಲ್ಲಿ ದುರ್ಬಲ ಬುಧದ ಸೂಚನೆಗಳು(Weak mercury signs)
ನಿಮ್ಮ ಸಾಲವು ಹೆಚ್ಚಾಗಲು ಪ್ರಾರಂಭಿಸಿದಾಗ ಮತ್ತು ನಿಮ್ಮ ಆರ್ಥಿಕ ಸ್ಥಿತಿಯು ಹದಗೆಡಲು ಪ್ರಾರಂಭಿಸಿದಾಗ, ಬುಧವು ನಿಮ್ಮ ಜಾತಕದಲ್ಲಿ ದುರ್ಬಲವಾಗಿದ್ದಾನೆ ಎಂದು ಅರ್ಥ ಮಾಡಿಕೊಳ್ಳಬೇಕು.

ಕೈಗೆ ಕಟ್ಟುವ ರಕ್ಷಾ ದಾರ ತೆಗೆಯೋಕೂ ಇದೆ ನಿಯಮ!

ಯಾವಾಗ ನಿಮ್ಮ ಸ್ಥಾನ, ಪ್ರತಿಷ್ಠೆ ಮತ್ತು ಕೀರ್ತಿ ಕ್ಷೀಣಿಸತೊಡಗುತ್ತದೆಯೋ ಆಗ ಜಾತಕದಲ್ಲಿರುವ ಬುಧನು ದುರ್ಬಲನಾಗುತ್ತಿದ್ದಾನೆ ಎಂದು ತಿಳಿಯಬೇಕು.
ನೀವು ರೋಗಗಳಿಂದ ತೊಂದರೆಗೊಳಗಾಗಲು ಪ್ರಾರಂಭಿಸಿದಾಗ, ಮುಖದ ಕಾಂತಿ ಮರೆಯಾಗಲು ಪ್ರಾರಂಭಿಸುತ್ತದೆ, ಆಗ ಇದು ಬುಧದ ದುರ್ಬಲತೆಯ ಸಂಕೇತವಾಗಿದೆ.
ಸ್ಥಳೀಯರು ಅಹಂಕಾರಿಯಾಗಲು ಪ್ರಾರಂಭಿಸಿದಾಗ ಮತ್ತು ಯೋಚಿಸುವ ಮತ್ತು ಅರ್ಥಮಾಡಿಕೊಳ್ಳುವ ಸಾಮರ್ಥ್ಯದ ಮೇಲೆ ಅಹಂಕಾರ ಪರಿಣಾಮ ಬೀರಲು ಪ್ರಾರಂಭಿಸಿದಾಗ, ಈ ಸ್ಥಿತಿಯು ಬುಧದ ದುರ್ಬಲತೆಯನ್ನು ಸೂಚಿಸುತ್ತದೆ.
ಜಾತಕದಲ್ಲಿ ಬುಧ ಗ್ರಹವು ದುರ್ಬಲವಾಗಿರುವುದರಿಂದ ಉದ್ಯೋಗ ಮತ್ತು ವ್ಯವಹಾರದಲ್ಲಿ ತೊಂದರೆಗಳು ಬರಲು ಪ್ರಾರಂಭಿಸುತ್ತವೆ.
ಜಾತಕದಲ್ಲಿ ಬುಧ ದುರ್ಬಲವಾಗಿರುವ ಜನರು ಗೊಂದಲಕ್ಕೊಳಗಾಗುವ ಮತ್ತು ಅನುಮಾನಿಸುವ ಅಭ್ಯಾಸವನ್ನು ಬೆಳೆಸಿಕೊಳ್ಳುತ್ತಾರೆ.
ಚರ್ಮ ರೋಗಗಳು, ಭೇದಿ ಮತ್ತು ಅತಿಸಾರವನ್ನು ಹೊಂದಲು ಪ್ರಾರಂಭಿಸಿದರೆ, ಅದು ಬುಧದ ದುರ್ಬಲತೆಯ ಸಂಕೇತವಾಗಿದೆ.
ಜಾತಕದಲ್ಲಿ ಬುಧ ಬಲಹೀನವಾಗುವುದರಿಂದ ಮಾತು ನಿಷ್ಫಲವಾಗುತ್ತದೆ ಮತ್ತು ನಿಮ್ಮ ಮಾತುಗಳು ಇತರರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.
ಸಹೋದರಿ ಮತ್ತು ಚಿಕ್ಕಮ್ಮನೊಂದಿಗಿನ ಸಂಬಂಧವು ಹದಗೆಡಲು ಪ್ರಾರಂಭಿಸಿದರೆ, ಅದು ಬುಧ ದುರ್ಬಲಗೊಳ್ಳುವ ಸಂಕೇತವಾಗಿದೆ.

ಆಗಸ್ಟ್ 15ರಂದು ಗಜಕೇಸರಿ ಯೋಗ, ಸಂಕಷ್ಟಿ ಚತುರ್ಥಿ

ಬುಧ ಗ್ರಹ ಬಲಪಡಿಸಲು ಪರಿಹಾರ ಮಾರ್ಗಗಳು(remedies)

  • ಬುಧವಾರ ಸೂರ್ಯಾಸ್ತದ ಮೊದಲು ಹಸುವಿಗೆ ಹಸಿರು ಮೇವನ್ನು ತಿನ್ನಿಸಿ.
  • ಬುಧವಾರ ಹಸಿರು ಬಣ್ಣದ ಆಹಾರವನ್ನು ಸೇವಿಸಿ.
  • ಎಂಟು ವರ್ಷಕ್ಕಿಂತ ಕಡಿಮೆ ವಯಸ್ಸಿನ ಹುಡುಗಿಯರಿಗೆ ಪ್ರತಿ ಬುಧವಾರ ಹಸಿರು ಬಳೆಗಳು, ಹಸಿರು ಬಟ್ಟೆಗಳು ಅಥವಾ ಹಸಿರು ಆಹಾರವನ್ನು ದಾನ ಮಾಡಿ.
  • ಹಸಿರು ಮೂಂಗ್ ದಾಲ್, ಸೊಪ್ಪುಗಳು, ಪಾಲಕ್ ಅಥವಾ ಯಾವುದೇ ಹಸಿರು ಆಹಾರ ಪದಾರ್ಥವನ್ನು ಅಗತ್ಯವಿರುವ ಜನರಿಗೆ ದಾನ ಮಾಡಿ.
  • ನಿಮ್ಮ ಚಿಕ್ಕಮ್ಮ ಅಥವಾ ತಂಗಿಗೆ ಹುಳಿ-ಸಿಹಿ ಚಾಕಲೇಟ್ ನೀಡಿ. ಗೋಲಗೊಪ್ಪ ನೀಡಬಹುದು. 
  • ಬಡವರಿಗೆ ಹಸಿರು ಬಣ್ಣದ ಪಾನೀಯಗಳನ್ನು ವಿತರಿಸಿ.
  • ಬುಧವಾರದಂದು ಹಸಿರು ಆಸನದ ಮೇಲೆ ಕುಳಿತು ಬುಧ ಗ್ರಹದ ಮಂತ್ರಗಳನ್ನು ಪಠಿಸಿ.
  • ಪ್ರತಿ ಬುಧವಾರ ಹಸಿರು ಬಟ್ಟೆಗಳನ್ನು ಧರಿಸಿ.
  • ನಿಮ್ಮ ಕೈಯಲ್ಲಿ ಅಥವಾ ನಿಮ್ಮ ಕುತ್ತಿಗೆಗೆ ಹಸಿರು ದಾರವನ್ನು ಧರಿಸಿ.

    ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.
Latest Videos
Follow Us:
Download App:
  • android
  • ios